ಶಿವಮೊಗ್ಗ

ಸುದ್ದಿ ಸಂಕ್ಷೇಪ

Published On :

ಸಂಸದ ರಾಘವೇಂದ್ರಗೆ ಅಭಿನಂದನೆ
ಸಾಗರ: ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಸಾಗರ, ಹೊಸನಗರ ಭಾಗದ ಜನತೆಯ ಬಹುದಿನದ ಬೇಡಿಕೆಯಾದ ಶಿವಮೊಗ್ಗ- ತಾಳಗುಪ್ಪ ಪ್ಯಾಸೆಂಜರ್ ರೈಲು ಓಡಾಟಕ್ಕೆ ಮಂಜೂರಾತಿ ದೊರೆಕಲು ಕಾರಣಕರ್ತರಾದ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೆಜೆಪಿ ತಾ. ಅಧ್ಯಕ್ಷ ಬಿ.ಆರ್. ಜಯಂತ್ ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗ- ತಾಳಗುಪ್ಪ ನಡುವೆ ಪ್ಯಾಸೆಂಜರ್ ರೈಲು ಓಡಾಡುವುದರಿಂದ ಈ ಭಾಗದ ಜನತೆಗೆ ತುಂಬಾ ಅನುಕೂಲವಾಗಲಿದೆ. ಹಾಗೆಯೇ ಮೈಸೂರು-ಶಿವಮೊಗ್ಗ ಪ್ಯಾಸೆಂಜರ್ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲು ಕೂಡ ಸಂಸದರು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಈ ಕಾರಣಕ್ಕಾಗಿ ಸಂಸದರಿಗೆ ಅಭಿನಂದಿಸುವುದಾಗಿ ಜಯಂತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫೌಂಡ್ರಿ ಉದ್ಯಮಿಗಳಿಗೆ ಕಾರ್ಯಗಾರ
ಶಿವಮೊಗ್ಗ: ಫೌಂಡ್ರಿ ಉದ್ದಿಮೆಗಳಿಗೆ ಉಪಯುಕ್ತ ಹಾಗೂ ಪರಿಸರಕ್ಕೆ ಪೂರಕವಾದ ತಾಂತ್ರಿಕ ಸಮಾಲೋಚನಾ ಕಾರ್ಯಗಾರವನ್ನು ನಗರದ ಕಂಟ್ರಿಕ್ಲಬ್‌ನಲ್ಲಿ ಮಾ.4ರಂದು ಮದ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಗಾರದಲ್ಲಿ ಶಾಂತಲಾ ಸ್ಪೆರೋಕ್ಯಾಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ, ಐಐಎಫ್‌ನ ರಾಷ್ಟ್ರೀಯ ಗೌರವ ಕಾರ್ಯದರ್ಶಿ ಡಿ.ಎಸ್. ಚಂದ್ರಶೇಖರ್ ಮುಖ್ಯ ಅಥಿತಿಯಾಗಿ ಪಾಲ್ಗೊಳ್ಳುವರು. ಇಬ್ಬರು ವಿದೇಶಿ ಗಣ್ಯರು  ಹಾಗೂ ಗಾರ್ಗಿ ಸಂಸ್ಥೆಯ ನಿಶಾಂತ್ ಅಜ್ರೇಕರ್ ತಮ್ಮ ಅನುಭವನ್ನು ಫೌಂಡ್ರಿ ಉದ್ಯಮಿಗಳೊಂದಿಗೆ  ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲಾ ಫೌಂಡ್ರಿ ಉದ್ಯಮಿಗಳು ಪಡೆಯುವಂತೆ ದಿ ಇನ್ಸಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್ ಶಿವಮೊಗ್ಗ ಚಾಪ್ಟರ್, ಗಾರ್ಗಿ ಎಚ್.ಎ. ಕೋರಿದ್ದಾರೆ.
ನಾಳೆಯಿಂದ ರಾಮೇಶ್ವರ ರಥೋತ್ಸವ
ಸಾಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಕೆಳದಿ ಶ್ರೀ ರಾಮೇಶ್ವರ ದೇವರ ರಥೋತ್ಸವ ಮಾ.5ರಿಂದ 14ರ ವರೆಗೆ ನಡೆಯಲಿದೆ.
ಮಾ.5ರಂದು ಶ್ರೀ ಮಹಾಗಣಪತಿ ಪೂಜಾ, ಅಂಕುರಾರ್ಪಣ, ಮಾ.6ರಂದು ಧ್ವಜಾರೋಹಣ, ಶಿಬಿಕಾ ಯಂತ್ರೋತ್ಸವ, ಮಾ.7ರಂದು ಪಿಂಕೂಟ ಯಂತ್ರೋತ್ಸವ, ಮಾ.8ರಂದು ವೃಷಭ ಯಂತ್ರೋತ್ಸವ, ಮಾ.9ರಂದು ಪುಷ್ಪಂಜರಿ ಯಂತ್ರೋತ್ಸವ, 10ರಂದು ಸಿಂಹ ಯಂತ್ರೋತ್ಸವ, ಮಹಾ ಶಿವರಾತ್ರಿ ಅಂಗವಾಗಿ ಶತರುದ್ರಾಭಿಷೇಕ.
11ರಂದು ಹಸ್ತಿ ಯಂತ್ರೋತ್ಸವ, 12ರಂದು ಶ್ರೀಮಚ್ಚಂದನ ರಥೋತ್ಸವ, 13ರಂದು ಕುಂಕುಮ ಚೂಣರೋತ್ಸವ, 14ರಂದು ಪೂರ್ಣಾಹುತಿ ಹಾಗೂ ದೂತ ರಥೋತ್ಸವ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.