ನೀರಿನ ಸಮಸ್ಯೆ ಪರಿಹರಿಸಿ
ಸೊರಬ: ತಾಲೂಕಿನ ಶಕುನವಳ್ಳಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಮಕ್ಕಳು ಪರದಾಡುವಂತಾಗಿದೆ.
ನೀರಿನ ವ್ಯವಸ್ಥೆ ಇದ್ದರೂ ದುರಸ್ತಿ ಕಾಣದ ಪೈಪ್ ಲೈನಿನಿಂದಾಗಿ ಈ ಸಮಸ್ಯೆ ತಲೆದೋರಿದೆ. ಈ ಮೊದಲು ಇಲ್ಲಿನ ಗ್ರಾಪಂ ಆಡಳಿತ ಶಾಲೆಯ ನೀರಿನ ತೊಟ್ಟಿಗೆ ನೀರು ಸರಬರಾಜು ಮಾಡುತ್ತಿತ್ತು, ಆದರೆ ಇತ್ತೀಚೆಗೆ ಗ್ರಾಪಂ ಕೈಗೊಂಡ ಚರಂಡಿ ಕಾಲುವೆ ಕಾಮಗಾರಿ ವೇಳೆ ನೀರು ಪೂರೈಕೆ ಪೈಪ್ ಒಡೆದಿತ್ತು. ಪೈಪ್ ಒಡೆದಿರುವ ಕುರಿತು ಗ್ರಾಪಂ ಗಮನಕ್ಕೆ ತಂದರೂ ವಿಳಂಬ ನೀತಿ ಅನುಸರಿಸುತ್ತಿರುವುದು ಪ್ರಸ್ತುತ ಮಕ್ಕಳಿಗೆ ಕುಡಿಯುವ ನೀರು, ಬಿಸಿ ಊಟದ ಅಡುಗೆಗೆ ಸಂಚಕಾರ ತಂದಂತಾಗಿದೆ. ದೂರದಿಂದ ನೀರು ಹೊತ್ತು ತರುವಂತಾಗಿದೆ ಎಂದು ಬೇಸರಿಸಿರುವ ಶಾಲಾ ಆಡಳಿತ ಹಾಗೂ ಪೋಷಕರು, ಕೂಡಲೆ ನೀರು ಪೂರೈಸಬೇಕು ಎಂದು ಗ್ರಾಪಂ ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ಇಂದಿನಿಂದ ಚಂದ್ರಗುತ್ತಿ ಜಾತ್ರೆ
ಸೊರಬ: ಸೋಮವಾರದಿಂದ ಪ್ರಸಿದ್ಧ ಚಂದ್ರಗುತ್ತಿ ಜಾತ್ರೆ ಆರಂಭಗೊಳ್ಳಲಿದೆ. 18ರಂದು ಕಳಶ ಸ್ಥಾಪನೆ, 19 ರ ಮಂಗಳವಾರ ಯಾಗ ಶಾಲೆ ಪ್ರವೇಶ, 20ಕ್ಕೆ ಸಣ್ಣತೇರು, 21ಕ್ಕೆ ಮಹಾ ರಥೋತ್ಸವ, 22ಕ್ಕೆ ಓಕುಳಿ ಸೇವೆ, 23ಕ್ಕೆ ತುಲಾಭಾರ ಹಾಗೂ 27ಕ್ಕೆ ಹೋಳಿ ಹುಣ್ಣಿಮೆ ನಡೆಯಲಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.
ಸಂಘ ಸಂಸ್ಥೆಗಳು ಜನರ ಸಮಸ್ಯೆ ಪರಿಹರಿಸಲಿ
ಶಿವಮೊಗ್ಗ: ಸಂಘ ಸಂಸ್ಥೆಗಳು ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕೆಲಸಮಾಡಬೇಕು ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಾಂತಿನಗರದಲ್ಲಿ ಭಾನುವಾರ ಆಯೋಜಿದ್ದ ನೇತಾಜಿ ಯುವಕರ ಬಳಗ ಸಂಘದ ಉದ್ಘಾಟನೆ ಹಾಗೂ ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್ ಹಾಗೂ ಮೆಗ್ಗಾನ್ ರಕ್ತನಿಧಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಗುಂಪು ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ನಾಡಿನ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳೊಂದಿಗೆ ಸಂಘಸಂಸ್ಥೆಗಳ ಪಾತ್ರ ಕೂಡ ಅಷ್ಟೇ ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ 54 ಬಾರಿ ರಕ್ತದಾನ ಮಾಡಿದ ರಮೇಶ್ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಣ್ಣಪ್ಪ, ಮೆಗ್ಗಾನ್ ರಕ್ತನಿಧಿ ವೈದ್ಯಾಧಿಕಾರಿ ಡಾ. ಸಿ.ಜೆ. ಗಿರೀಶ್, ನಗರಸಭೆ ಸದಸ್ಯೆ ಅರ್ಚನ ಬಳ್ಳೆಕೆರೆ, ಸಂತೋಷ್ ಬೆಳ್ಳೆಕೆರೆ, ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್ನ ಅಧ್ಯಕ್ಷ ಪ್ರಶಾಂತ್ ಶಾಸ್ತ್ರಿ, ನೇತಾಜಿ ಯುವಕರ ಬಳಗದ ಅಧ್ಯಕ್ಷ ಎಸ್. ಸಂತೋಷ್, ನಾಗರಾಜ್ ಮ್ತತಿತರರು ಇದ್ದರು.
ಆಚಾರವಿಲ್ಲದೆ ಪರಿಸರವಿಲ್ಲ
ಸೊರಬ: ದೇವರು, ದೇವತೆಯ ಕಲ್ಪನೆಯುಳ್ಳ ಆಚಾರವಿಲ್ಲದೆ ನಮ್ಮ ಪರಿಸರವಿಲ್ಲ. ಸ್ವಚ್ಛ ಪರಿಸರದ ಮಹತ್ವಾಕಾಂಕ್ಷೆಯಿಂದಲೇ ಇಂತಹ ಆರಾಧನೆ ಬೆಳೆದು ಬಂದಿರಬೇಕು ಎಂದು ಅಬಸಿ ಉಮೇಶ್ ಜೋಷಿ ತಿಳಿಸಿದರು. ಸೊರಬ ಸಿದ್ದಾಪುರ ರಸ್ತೆಯ ತಂಡಿಗೆ ಕಾನ್ ಗೋರಿ ಭೂತೇಶ್ವರ ಕಟ್ಟೆಯ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ಮಾತನಾಡಿದರು. ಕಾನಿಗೆ ಸಂಬಂಧಿಸಿದ ಹಲವಾರು ದೇವತೆಗಳ ಆರಾಧನೆ ಇಂದು ನಶಿಸಿರುವ ಹಿನ್ನೆಲೆಯಲ್ಲಿ ನಿತ್ಯಹರಿದ್ವರ್ಣದ ಕಾಡುಗಳು ನಶಿಸಿವೆ. ಈ ನಿಟ್ಟಿನಲ್ಲಿ ಇಂತಹ ಆರಾಧನ ಪದ್ಧತಿಗಳಿಗೆ ಮತ್ತೆ ಚಾಲನೆ ನೀಡಿ ನಮ್ಮ ಕಾನು ಉಳಿಸಿಕೊಳ್ಳಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

