ಸುದ್ದಿ ಸಂಕ್ಷೇಪ
ಇಂದು ಮನೆ ಮದ್ದು ಕಾರ್ಯಕ್ರಮ
ಶಿವಮೊಗ್ಗ: ಅರಿವು ಹಾಗೂ ಸಿದ್ಧಾರೂಢ ಯೋಗ ಕೇಂದ್ರ ಆಶ್ರಯದಲ್ಲಿ ಮಾರ್ಚ್ 24ರಂದು ಸಂಜೆ 5ಗಂಟೆಗೆ ರವೀಂದ್ರನಗರದ ಶ್ರೀ ರೇಣುಕ ಕೃಪಾ 2ನೇ ಮಹಡಿಯಲ್ಲಿ ಮನೆ ಮದ್ದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡುವುದು, ಸ್ತ್ರೀಯರ ವೈಯಕ್ತಿಕ ಸಮಸ್ಯೆ ಮತ್ತು ಅನಾರೋಗ್ಯದ ನಿವಾರಣೆಗೆ ಪರಿಹಾರ, ಎಲ್ಲರನ್ನೂ ಕಾಡುವ ಮಧುಮೇಹ, ರಕ್ತದೊತ್ತಡ, ಚರ್ಮವ್ಯಾಧಿ ಮತ್ತಿತರರ ಕಾಯಿಲೆಗಳಿಗೆ ಮಲ್ಲಿಕಾರ್ಜುನ ಅವರು ಮಾಹಿತಿ ನೀಡಲಿದ್ದಾರೆ ಎಂದು ಅರಿವು ಸಂಸ್ಥೆ ತಿಳಿಸಿದೆ. ವಿವರಗಳಿಗಾಗಿ- 9243371174.
ಸಾಮೂಹಿಕ ವಿವಾಹ ಮಹೋತ್ಸವ
ಶಿವಮೊಗ್ಗ: ಪ್ರೊ. ಎಂ.ಡಿ. ನಂಜುಡಸ್ವಾಮಿ ಪ್ರತಿಷ್ಠಾನ ಮಾರ್ಚ್ 25 ರಂದು ಬೆಳಗ್ಗೆ 10 ಗಂಟೆಗೆ ನಗರದ ಲಗಾನ್ ಕಲ್ಯಾಣಮಂದಿರದಲ್ಲಿ 3ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಹನುಮಂತಪ್ಪ ತಿಳಿಸಿದ್ದಾರೆ.
ಸಿಇಟಿ ಪರೀಕ್ಷಾ ತರಬೇತಿ
ಶಿವಮೊಗ್ಗ: ಶ್ರೀ ಆದಿ ಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಎಪ್ರಿಲ್ 5ರಿಂದ 26ರ ವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷಾ ಕುರಿತು ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ವಿವರಗಳಿಗಾಗಿ- 9686932425.
ವಿದ್ಯಾರ್ಥಿಗಳಿಗೆ ಗಣಿತ ತರಗತಿ
ಶಿವಮೊಗ್ಗ; ಮ್ಯಾಥಮೇಟಿಕ್ಸ್ ಅಕಾಡೆಮಿ ನುರಿತ ಉಪನ್ಯಾಸಕರಿಂದ 6 ಮತ್ತು 9ನೇ ತರಗತಿಯ ಸಿಬಿಎಸ್ಇ ಮತ್ತು ರಾಜ್ಯ ಪಠ್ಯಪುಸ್ತಕದ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಬೇಸಿಕ್ ಮ್ಯಾಥಮೇಟಿಕ್ಸ್ ಕ್ಲಾಸ್ ನಡೆಸಲಿದೆ. ಏಪ್ರಿಲ್ 4ರಿಂದ ತರಗತಿಗಳು ಪ್ರಾರಂಭವಾಗಲಿದ್ದು, ವಿನೋಬನಗರದ ಪೊಲೀಸ್ ಚೌಕಿ ಸೂಡಾ ಕಚೇರಿ ಎದುರು ಹಾಗೂ ಗೋಪಾಳದ 100 ಅಡಿ ರಸ್ತೆಯಲ್ಲಿರುವ ಆದಾಯ ಕಚೇರಿ ಹಿಂಬಾಗ ನಡೆಯಲಿದೆ. ಅಂಕಗಣಿತ, ಬೀಜಗಣಿತ ಹಾಗೂ ರೇಖಾಗಣಿತ ವಿಷಯಕ್ಕೆ ಸಂಬಂಧಿಸಿದಂತೆ ತರಗತಿಗಳು ನಡೆಲಿವೆ ಎಂದು ಅಕಾಡೆಮಿಯ ಎಸ್.ಪಿ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

