ಶಿವಮೊಗ್ಗ

ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಂಡಿ

Published On :

ಕ.ಪ್ರ. ವಾರ್ತೆ , ಸೊರಬ , ಮಾ.24
ಪಟ್ಟಣದ ಮುಖ್ಯರಸ್ತೆಯಲ್ಲಿನ ಹಳೇ ಪೊಲೀಸ್ ಠಾಣೆ ಪಕ್ಕದಲ್ಲಿ ಆಳವಾದ ಗುಂಡಿಗೆ ಬಿದ್ದು ಬಾಲಕನೋರ್ವನು ಗಾಯಗೊಂಡಿದ್ದಾನೆ.
ಪಟ್ಟಣದ ನೀರು ಸರಬರಾಜು ಪೈಪ್ ಪೊಲೀಸ್ ಠಾಣೆ ಪಕ್ಕದ ಮನೆ ಎದುರು ಹಾದು ಹೋಗಿದ್ದು, ಈಚೆಗೆ ಪೈಪ್ ದುರಸ್ಥಿ ಮಾಡಲೆಂದು ಆಳವಾದ ಗುಂಡಿ ತೆಗೆದು ಮುಚ್ಚದೆ ಹಾಗೆ ಬಿಡಲಾಗಿದೆ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಗುಂಡಿ ತೆಗೆದಿರುವಲ್ಲಿ ವಾಸದ ಮನೆಯಿದ್ದು, ಅವರಿಗೆ ನೇರ ಪ್ರವೇಶವಿಲ್ಲ,  ಪ್ರತಿ ದಿನ ಹಿಂಬಾಗಿಲಿನಿಂದ ಮನೆ ಪ್ರವೇಶಿಸಬೇಕಿದೆ. ಮುಖ್ಯರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ತುಸು ವಿವಾದ ಇರುವುದರಿಂದ ಮುಖ್ಯರಸ್ತೆ ಸ್ಥಿತಿ ತೀರಾ ಹದಗೆಟ್ಟಿದೆ. ಹೀಗಿರುವಾಗ ರಸ್ತೆ ಬದಿಯಲ್ಲಿಯೇ ಈ ರೀತಿ ಆಳವಾದ ಗುಂಡಿ ತೆರೆದಿರುವುದು ಅಪಘಾತಕ್ಕೆ ಆಹ್ವಾನವಿತ್ತಂತಾಗಿದೆ.
ಪ್ರಸ್ತುತ ಪಪಂ ಆಡಳಿತ ಚಾಲ್ತಿಯಲಿಲ್ಲ. ಆದರೆ, ಆಡಳಿತಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಾವು ನೋವು ಸಂಭವಿಸುವ ಮುನ್ನ ಆಡಳಿತಾಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.