ಶಿವಮೊಗ್ಗ

ದೌರ್ಜನ್ಯದಿಂದ ಮನೆ ತೆರವಿಗೆ ಯತ್ನ: ಪ್ರತಿಭಟನೆ

Published On :

ಶಿಕಾರಿಪುರ ೤ ಮಾ.27
ಪಟ್ಟಣದ ಬಸ್ ನಿಲ್ದಾಣದ ಸಮೀಪ ಕಳೆದ ಹಲವು ದಶಕದಿಂದ ಬದುಕುತ್ತಿರುವ ಪುರಸಭೆಯ ಸಫಾಯಿ ಕರ್ಮಚಾರಿಗಳ ಮನೆಯನ್ನು ಏಕಾಏಕಿ ಮಂಗಳವಾರ ದೌರ್ಜನ್ಯದಿಂದ ತೆರವುಗೊಳಿಸ ಲೆತ್ನಿಸಿದ್ದನ್ನು ಖಂಡಿಸಿ ದಲಿತ ಪೌರಕಾರ್ಮಿಕರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
   ಕಳೆದ 7- 8 ದಶಕದಿಂದ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿನ ಪ್ರಗತಿ ನಗರದಲ್ಲಿ ವಾಸಿಸುತ್ತಿರುವ ದಲಿತ ಪೌರಕಾರ್ಮಿಕರನ್ನು ಮಂಗಳವಾರ ಏಕಾಏಕಿ ಶಿವಮೊಗ್ಗದ ಪ್ರಶಾಂತ್ ಎಂಬ ಅಪರಿಚಿತ ವ್ಯಕ್ತಿಯೋರ್ವ ಕೆಲವರೊಂದಿಗೆ ಆಗಮಿಸಿ ಈ ಜಾಗವನ್ನು ಸಂಪೂರ್ಣ ಖರೀದಿಸಿದ್ದು ಕೂಡಲೇ ಸ್ಥಳವನ್ನು ತೆರವುಗೊಳಿಸದಿದ್ದಲ್ಲಿ ಮುಂದೆ ಆಗುವ ಅನಾಹುತಗಳನ್ನು ಎದುರಿಸುವಂತೆ ಬೆದರಿಕೆ ಹಾಕಿದ್ದಾಗಿ ನಿವಾಸಿ ಸುರೇಶ್ ತಿಳಿಸಿದ್ದಾರೆ.
    ಕಳೆದ ಹಲವು ದಶಕದಿಂದ ನಿರಂತರವಾಗಿ ಪಟ್ಟಣದ ಸಫಾಯಿ ಕರ್ಮಚಾರಿಯಾಗಿ, ಚಪ್ಪಲಿ ಹೊಲೆದು ಜೀವಿಸುತ್ತಿರುವರ ವಿರುದ್ಧ ಏಕಾಏಕಿ ದೌರ್ಜನ್ಯ ನಡೆಸಲು ಪಟ್ಟಣದ ಚೌಡಪ್ಪ ಹಾಗೂ ಕಾಶಯ್ಯ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದರು.
ಕ್ರಮಕ್ಕೆ ಆಗ್ರಹ: ಮನೆಗಳನ್ನು ಕಿತ್ತುಹಾಕಿದ್ದು ಮನೆಯಲ್ಲಿನ ವಿಧವೆಯರು, ಹಿರಿಯರು ಈ ಕೃತ್ಯದಿಂದ ತೀವ್ರ ಭಯಭೀತರಾಗಿದ್ದಾರೆ. ಘಟನೆಯಿಂದಾಗಿ ಮಾನಸಿಕವಾಗಿ ನೊಂದು ಇತರೆ ಸ್ಥಳಗಳಿಗೆ ವಲಸೆ ಹೋಗಿದ್ದು, ಕೆಲವರು ಕಾಣೆಯಾಗಿದ್ದಾರೆ. ವಾಸದ ಮನೆಯ ಬಗ್ಗೆ ಖಾತೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಕ್ರಮಕೈಗೊಳ್ಳದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದರು.
ಕೂಡಲೇ ಸೂಕ್ತ ರಕ್ಷಣೆ ಕಲ್ಪಿಸಿ ಬೆದರಿಕೆಯ ಮೂಲಕ ದಬ್ಬಾಳಿಕೆ ನಡೆಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
  ನಂತರದಲ್ಲಿ ದಲಿತರ ವಿರುದ್ಧ ದೌರ್ಜನ್ಯ ತಡೆಗಟ್ಟಿ ವಾಸಿಸುವ ಮನೆಗಳನ್ನು ಕಬಳಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಣಿ, ಕೆಂಚಮ್ಮ, ಮಂಜಮ್ಮ, ಚಂದ್ರಕಲಾ, ಮಂಜುಶ್ರೀ, ಗೌರಮ್ಮ, ವೆಂಕಟೇಶ್, ಮಂಜುನಾಥ್, ಯಶೋಧ, ಕುಮಾರ್, ತಿರುಪತಿ, ಲಕ್ಷ್ಮಮ್ಮ, ರಾಧಮ್ಮ, ಶಾಂತಮ್ಮ, ಜಾರ್ಜ್, ಸಂತೋಷ್, ಯಲ್ಲಪ್ಪ, ನರಸಿಂಹ ಮತ್ತಿತರರು ಹಾಜರಿದ್ದರು.
  ಮನೆಗಳನ್ನು ಆಕ್ರಮಿಸುವ ಹುನ್ನಾರ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಂಗಳವಾರ ಪೌರಕಾರ್ಮಿಕರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.