ಶಿವಮೊಗ್ಗ

ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡಿ: ಉದಯಕುಮಾರ್

Published On :

ಸಾಗರ: ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಬೆಂಗಳೂರು ಕಲಾತೀರದ ಖ್ಯಾತ ಓಡಿಸ್ಸಿ ನೃತ್ಯ ಕಲಾವಿದ ಉದಯಕುಮಾರ್ ಶೆಟ್ಟಿ ಹೇಳಿದರು.
ಇಲ್ಲಿನ ನಾಟ್ಯತರಂಗ ಸಂಸ್ಥೆ ಏರ್ಪಡಿಸಿದ್ದ ವಿದುಷಿ ಸಮನ್ವಿತಾ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ, ಹಿಂದೆಲ್ಲ ಭರತನಾಟ್ಯದಂತಹ ಕಲೆಯನ್ನು ಕಲಿಯಲು ದೂರದ ಊರುಗಳಿಗೆ ಹೋಗಬೇಕಿತ್ತು. ಬದಲಾದ ಕಾಲಘಟ್ಟದಲ್ಲಿ ಇರುವ ಊರಿನಲ್ಲಿಯೇ ಗುರುಗಳ ಲಭ್ಯತೆ ಇದ್ದು ಕಲಾಸಕ್ತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಮನಸ್ಸು ಬೆಳೆಯಬೇಕು: ರಂಗ ಪ್ರವೇಶದಂತಹ ಕಾರ್ಯಕ್ರಮ ನಡೆಸಲು ಹೆಚ್ಚು ಖರ್ಚು ತಗಲುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮಗಳಿಗೆ ಧನಸಹಾಯ ನೀಡಬೇಕು ಎಂದು ಹೇಳಿದ ಅವರು, ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ಮನಸ್ಸುಗಳು ಬೆಳೆಯಬೇಕು ಎಂದು ತಿಳಿಸಿದರು.
ನೃತ್ಯ ವಿಮರ್ಶಕ ಕೋಗರ್ ಶಂಕರನಾರಾಯಣ ಉಪಾಧ್ಯಾಯ ಮಾತನಾಡಿ, ಭರತನಾಟ್ಯ ರಂಗಪ್ರವೇಶ ಎನ್ನುವುದಕ್ಕಿಂತ ರಂಗರೋಹಣ ಎನ್ನುವುದು ಔಚಿತ್ಯಪೂರ್ಣ ಎನಿಸುತ್ತದೆ. ಕಲಾವಿದೆಯೊಬ್ಬಳು ಸುದೀರ್ಘ ಅವಧಿಯಲ್ಲಿ ಕಲಿತದ್ದನ್ನು ರಂಗದ ಮೇಲೆ ಪರಿಪೂರ್ಣವಾಗಿ ಪ್ರದರ್ಶಿಸುವಾಗ ಸಾಕಷ್ಟು ಸವಾಲುಗಳು ಇರುತ್ತದೆ. ಅಂತಹ ಸವಾಲುಗಳನ್ನು ವಿದುಷಿ ಸಮನ್ವಿತಾ ಜನಾರ್ದನ್ ಎದುರಿಸಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.