ಭದ್ರಾವತಿಯಲ್ಲಿ ಅಪ್ಪಾಜಿ ಭದ್ರ...
ಶಿವಮೊಗ್ಗ: ವ್ಯಕ್ತಿ ಪ್ರತಿಷ್ಠೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಪ್ಪಾಜಿಗೌಡ ಗೆಲುವನ್ನು ಅಪ್ಪಿಕೊಂಡಿದ್ದಾರೆ. ಇವರ ಜನಪ್ರಿಯತೆ ಅಬ್ಬರದಲ್ಲಿ ಎದುರಾಳಿಗಳಾದ ಸಂಗಮೇಶ್ (ಪಕ್ಷೇತರ), ಸಿ.ಎಂ.ಇಬ್ರಾಹಿಂ (ಕಾಂಗ್ರೆಸ್) ಕೊಚ್ಚಿಹೋಗಿದ್ದಾರೆ.
ಎಂ.ಜೆ. ಅಪ್ಪಾಜಿ ಕಾರ್ಮಿಕ ವಲಯದಿಂದ ಬಂದಿದ್ದು ತಮ್ಮ ಬಿಎ ಪದವಿಯನ್ನು ಪೂರ್ಣಗೊಳಿಸಿ ವಿಐಎಸ್ಎಲ್ ಕಾರ್ಖಾನೆ ಕಾರ್ಮಿಕನಾಗಿ ಎರಡು ದಶಕ ಕೆಲಸ ಮಾಡಿದರು. ನಂತರ ವಿಐಎಸ್ಎಲ್ ಕಾರ್ಮಿಕ ಮುಖಂಡರಾಗಿ ರೂಪುಗೊಂಡ ಇವರು 1989ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದರೂ, ಸೋಲು ಕಂಡರು. ನಂತರ 1994, 99ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲವು ಸಾಧಿಸಿದರು. 2004, 2008ರಲ್ಲಿ ಸಂಗಮೇಶ್ ವಿರುದ್ಧ ಪರಾಜಿತರಾದರು. ಇದೀಗ ಸೋಲಿನ ಸರಪಳಿ ಕಡಿದಿದ್ದಾರೆ.
ಶಾಸಕರಾಗಿದ್ದ ಸಂಗಮೇಶ್ ಅವರ ಗೊಂದಲದ ನಿರ್ಧಾರ, ಕಾಂಗ್ರೆಸ್ ಅಭ್ಯರ್ಥಿ ಸಿಎಂ ಇಬ್ರಾಹಿಂ ದಿಡೀರ್ ಎಂದು ಚುನಾವಣೆಗೆ ಬಂದಿದ್ದು ಸಹ ಅಪ್ಪಾಜಿಯವರಿಗೆ ಸಾಕಷ್ಟು ಅನುಕೂಲವಾಯಿತು. ಜಾತಿ ಸಮೀಕರಣಗಳು ಸಹ ಅಪ್ಪಾಜಿಯವರ ಗೆಲವಿಗೆ ಬೆಂಬಲವಾಗಿ ನಿಂತಿತು. ಕಾರ್ಮಿಕರು ಸಹ ಕೈಬಿಡಲಿಲ್ಲ. ಇದರಿಂದಾಗಿ ಗೆಲುವು ಅನುಕೂಲವಾಯಿತು.
ಅಪ್ಪಾಜಿಯವರಿಗೆ ಗೆಲುವು ಸುಲಭವಾಗಿರುವುದು. ಆದರೆ, ಮುಂದೆ ಸವಾಲುಗಳು ಮಾತ್ರ ದೊಡ್ಡದೇ ಇದೆ. ಕೈಗಾರಿಕಾ ನಗರಿ ಭದ್ರಾವತಿಯ ಎರಡೂ ಕಾರ್ಖಾನೆಗಳು ರೋಗಗ್ರಸ್ತವಾಗಿದ್ದು, ಮೈಸೂರು ಕಾಗದ ಕಾರ್ಖಾನೆಯನ್ನು ಬಿಐಎಫ್ಆರ್ನಿಂದ ಹೊರತಂದು ಅದನ್ನು ನವೀಕರಣ ಮಾಡಬೇಕಾಗಿದೆ.
ತಿಮ್ಮಯ್ಯ ಮಾರುಕಟ್ಟೆ ಬದಲು ನಿರ್ಮಾಣ ಮಾಡುತ್ತಿರುವ ಮಾರುಕಟ್ಟೆ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು, ಕಾಯಕಲ್ಪ ನೀಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

