ಅರ್ಜಿ ಆಹ್ವಾನ
ಶಿವಮೊಗ್ಗ: ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ನಡೆಯುತ್ತಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕ- ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಪಿಯುಸಿ, ಐಟಿಐ ಹಾಗೂ ಪದವಿ ತರಗತಿಗಳಿಗೆ 2013-14ನೇ ಸಾಲಿನಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರವೇಶ ಬಯಸುವ ವಿದ್ಯಾರ್ಥಿಗಳು ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಥವಾ ಆಯಾ ನಿಲಯದ ಮೇಲ್ವಿಚಾರಕರಿಂದ ಅಧಿಕೃತ ಅರ್ಜಿ ನಮೂನೆಯನ್ನು ಪಡೆದು ದಿನಾಂಕ ಜೂನ್ 30ರೊಳಗೆ ಸಲ್ಲಿಸಲು ಕೋರಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. 2013-14ನೇ ಸಾಲಿನಲ್ಲಿ ಖಾಲಿ ಇರುವ ಸ್ಥಾನಗಳಿಗೆ ತಾಲೂಕು ಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪ್ರವೇಶ ನೀಡಲಾಗುವುದು.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಕಿಮ್ಮನೆಗೆ ಸಚಿವ ಸ್ಥಾನ: ಮತದಾರರಿಗೆ ಸಿಕ್ಕ ಬಳುವಳಿ
ಹೊಸನಗರ: ತೀರ್ಥಹಳ್ಳಿ ಕ್ಷೇತ್ರಕ್ಕೆ ಮೊದಲ ಬಾರಿಗೆ ಸಚಿವ ಸ್ಥಾನ ಬಂದಿದ್ದು, ಇದು ಇಲ್ಲಿಯ ಮತದಾರರ ಪ್ರಬುದ್ಧ ತೀರ್ಮಾನಕ್ಕೆ ದೊರಕಿದ ಬಳುವಳಿ ಎಂದು ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣರಾವ್ ಹೇಳಿದರು.
ತಾಲೂಕಿನ ನಗರ ಹೋಬಳಿಯ ವಿವಿಧ ಭಾಗಕ್ಕೆ ತೆರಳಿ ಕಾರ್ಯಕರ್ತರ ಭೇಟಿ ನಂತರ, ಕಿಮ್ಮನೆಯವರ ಸ್ವಾರ್ಥ ರಹಿತ ಹಲವು ದಶಕಗಳ ಹೋರಾಟಕ್ಕೆ ಸಂದ ಜಯವಾಗಿದೆ. ನೇರ ನಡೆನುಡಿ, ಸಜ್ಜನಿಕೆಯ ವ್ಯಕ್ತಿ ಕಿಮ್ಮನೆ ರತ್ನಾಕರ್ಗೆ ಸಚಿವ ಸ್ಥಾನ ದೊರೆತಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್, ಅಧ್ಯಯನಶೀಲತೆ ಹೊಂದಿರುವ ಕಿಮ್ಮನೆಗೆ ಶಿಕ್ಷಣ ಖಾತೆ ದೊರಕಿದ್ದು, ಅವರ ಅಧಿಕಾರದವಧಿಯಲ್ಲಿ ಆಮೂಲಾಗ್ರ ಬೆಳವಣಿಗೆ ಕಾಣಲಿದೆ ಎಂದರು.
ಕಿಮ್ಮನೆ ಮಂತ್ರಿಯಾಗಿರುವುದು ಕಾರ್ಯಕರ್ತರಲ್ಲಿ ಸಹಜವಾಗಿ ಸಂಭ್ರಮ ತಂದಿದೆ. ಆದರೆ ಹಮ್ಮುಬಿಮ್ಮು ಪ್ರದರ್ಶಿಸದೆ ಜನಸಾಮಾನ್ಯರ, ಆಯಾಭಾಗದ ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಹೆಚ್ಚು ಗಮನ ಹರಿಸಿ ಸಚಿವರ ಗಮನ ಸೆಳೆಯುವಂತೆ ಮನವಿ ಮಾಡಿದರು.
ಅಮ್ರಪಾಲಿ ಸುರೇಶ್, ವಾದಿರಾಜ್ ಉಪಸ್ಥಿತರಿದ್ದರು. ಪಕ್ಷದ ನಿಯೋಗ ನಗರ, ಸಂಪೇಕಟ್ಟೆ, ಮತ್ತಿಮನೆ ಸೇರಿದಂತೆ ವಿವಿಧ ಭಾಗದ ಕಾರ್ಯಕರ್ತರನ್ನು ಭೇಟಿ ಮಾಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

