ಶಿವಮೊಗ್ಗ

ಕಿಡ್ನಿ ರೋಗಿಗಳ ಸಮಸ್ಯೆ ಬಗೆಹರಿಸಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ನ.26
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರ ಮೂಲ ಸಮಸ್ಯೆಯನ್ನು ಸರ್ಕಾರ ಪರಿಹರಿಸುವಂತೆಒತ್ತಾಯಿಸಿ ಮಾನಸ ಮಹಿಳೆಯರ ಸ್ವ- ಉದ್ಯೋಗ ತರಬೇತಿ ಸಂಸ್ಥೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ಒಟ್ಟಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಪ್ರಭಾರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಮನವಿ ನೀಡಿದರು.
ಡಯಾಲಿಸೀಸ್‌ಗೆ ಹೆಚ್ಚು ಖರ್ಚು: ಕಿಡ್ನಿ ವೈಫಲ್ಯ ಎಂಬುದು ಇಂದು ಸಾಮಾನ್ಯವಾಗಿದೆ. ಇಂತಹ ರೋಗಿಗಳು ಪ್ರತಿ ವಾರ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಬೇಕಾದರೆ ಸಾವಿರಾರು ರುಪಾಯಿ ತಗುಲುತ್ತದೆ. ಕೆಲ ಮಧ್ಯಮ ವರ್ಗದ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ವಿಷಾದದ ವ್ಯಕ್ತಪಡಿಸಿದರು.
ಒಂದೊಂದು ಆಸ್ಪತ್ರೆಗಳಲ್ಲಿ ಒಂದೊಂದು ದರ ನಿಗದಿ ಮಾಡಿದ್ದಾರೆ. ಆದರಿಂದ ಸರ್ಕಾರ ಮಧ್ಯಸ್ಥಿಕೆ ವಹಿಸಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಒಂದೇ ದರ ಹಾಗೂ ರಿಯಾಯಿತಿ ದರ ನಿಗದಿ ಮಾಡುವಂತೆ ಸೂಚನೆ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಯಂತ್ರಗಳಿಲ್ಲದೆ ತೊಂದರೆ; ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಆತಂತ್ರ ಸ್ಥಿತಿಯಲ್ಲಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿದರೆ ಸರಿಯಾದ ಡಯಾಲಿಸಿಸ್ ಯಂತ್ರಗಳಿಲ್ಲದೇ ತೊಂದರೆ ಅನುಭಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಟಿನ ಡಯಾಲಿಸಿಸ್ ಯಂತ್ರ ನೀಡಬೇಕು. ಡಯಾಲಿಸಿಸ್ ರೋಗಿಗಳಿಗೆ ಮೂಲ ಸೌಲಭ್ಯ ನೀಡಲು ಮುಂದಾಗಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಕಿಡ್ನಿವೈಫಲ್ಯದ(ಡಯಾಲಿಸಿಸ್) ರೋಗಿಗಳಿಗೆ ಉಚಿತ ಬಸ್ ಪಾಸ್, ರೇಲ್ವೆ ಪಾಸ್ ವಿತರಿಸಬೇಕು. ಜೀವನ ನಿರ್ವಹಣೆಗೆ ಮಾಸಿಕ ಧನಸಹಾಯ ನೀಡುವುದು. ಕಿಡ್ನಿ ವೈಫಲ್ಯದಿಂದ ರೋಗಿಗಳು ತಮ್ಮ ಜೀವಿತ ಅವಧಿಯಲ್ಲಿ ಬಹಳಷ್ಟು ಖರ್ಚು ಭರಿಸಬೇಕಾಗಿದ್ದು, ಅವರ ಮರಣವಾದಲ್ಲಿ ಅವರ ಕುಟುಂಬ ವರ್ಗದವರಿಗೆ ವಿಮಾ ಮಾದರಿಯಲ್ಲಿ ಅನುದಾನ ನೀಡಬೇಕು. ಕಿಡ್ನಿ ವೈಫಲ್ಯದ ರೋಗಿಗಳನ್ನು ವಿಕಲ ಚೇತನರೆಂದು ಪರಿಗಣಿಸಬೇಕು. ಅವರಿಗೆ ಸರ್ಕಾರದ ಎಲ್ಲಾ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಸದಸ್ಯರು ಇದ್ದರು.

ನಾಳೆಯಿಂದ ಹೊಸನಗರ, ಸಾಗರದಲ್ಲಿ ಖರೀದಿ ಕೇಂದ್ರ
ಶಿವಮೊಗ್ಗ: ಜಿಲ್ಲೆಯಲ್ಲಿ ಬತ್ತ ಹಾಗೂ ಜೋಳವನ್ನು ಬೆಂಬಲಯಲ್ಲಿ ಖರೀದಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಶಿವಮೊಗ್ಗ, ಶಿಕಾರಿಪುರ, ಶಿರಾಳಕೊಪ್ಪ, ಭದ್ರಾವತಿ, ಆನವಟ್ಟಿ, ಸೊರಬದಲ್ಲಿ ಕೇಂದ್ರ ಆರಂಭಿಸಲಾಗಿದೆ. ನ.28ರ ನಂತರ ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲೂ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಸಿಕಾಂಥ್ಸೆಂಥಿಲಲ್ತಿಳಿಸಿದ್ದಾರೆ.
 ಕ್ವಿಂಟಾಲ್‌ಗೆ 1310 ರುಪಾಯಿಯಂತೆ ಜೋಳ ಹಾಗೂ 1600 ರುಪಾಯಿಯಂತೆ ಬತ್ತವನ್ನು ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಿಂದ ಖರೀದಿಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ಮೊದಲು ರೈತರು ಸ್ಯಾಂಪಲ್ ತಂದು ತೋರಿಸಿ ಗ್ರೇಡರ್ ಮೂಲಕ ದೃಢೀಕರಿಸಿಕೊಳ್ಳಬೇಕು. ನಂತರ ಒಪ್ಪಿಗೆಯಾದರೆ ಪಹಣಿ ಜೊತೆಗೆ ಸಣ್ಣ ಹಾಗೂ ಅತಿ ಸಣ್ಣ ರೈತರೆಂದು ಉಪ ತಹಶೀಲ್ದಾರ್, ತಹಶೀಲ್ದಾರ್ ದೃಢೀಕರಣ ತರಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.