ಶಿವಮೊಗ್ಗ

ಗಾಯನ ಸ್ಪರ್ಧೆ

Published On :

ಶಿವಮೊಗ್ಗ: ದಿವಂಗತ ಕಾತ್ಯಾಯಿನಿ ಸ್ಮರಣಾರ್ಥ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ವಿರಚಿತ ಕವನ ಆಧರಿಸಿದ ಸಮೂಹ ಗಾಯನ ಸ್ಪರ್ಧೆಯನ್ನು ಮಹಿಳೆಯರಿಗಾಗಿ ಏರ್ಪಡಿಸಲಾಗಿದೆ. ಮಾಹಿತಿಗೆ ಕವಿತಾ ಪ್ರಸಾದ್ (98444 87908) ಸಂಪರ್ಕಿಸಬಹುದು.

ರಮೇಶ್‌ಗೆ ಸನ್ಮಾನ
ಶಿವಮೊಗ್ಗ: ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖ್ಯ ಆಯುಕ್ತ, ರಾಜ್ಯ ಟೆಬಲ್ ಟೆನ್ನಿಸ್ ಅಸೋಷಿಯೇಷನ್ ಉಪಾಧ್ಯಕ್ಷ, ರೋವರ್ಸ್ ಕ್ಲಬ್ ಅಧ್ಯಕ್ಷ, ಬ್ರಾಹ್ಮಣ ಸಮಾಜದ ಮುಖಂಡ ಎಚ್.ಡಿ. ರಮೇಶ್ ಶಾಸ್ತ್ರಿರವರಿಗೆ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸನ್ಮಾನಿಸಿದರು. ಆಯನೂರು ಮಂಜುನಾಥ್, ಜಿಪಂ ಉಪಾಧ್ಯಕ್ಷ ಹೇಮಾಪಾವನಿ, ಗೋಪಿ ಮೊದಲಾದವರು  ಇದ್ದರು.

ಮಹಿಳೆಯರಿಗೆ ರಕ್ತ ತಪಾಸಣಾ ಶಿಬಿರ
ಶಿವಮೊಗ್ಗ: ನೆಹರು ಯುವ ಕೇಂದ್ರ, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಹಾಗೂ ಜನ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನ.27ರಂದು ಬೆಳಿಗ್ಗೆ 11 ಗಂಟೆಗೆ ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದ ಸಭಾಂಗಣದಲ್ಲಿ ಮಹಿಳೆಯರಿಗಾಗಿ ರಕ್ತ ತಪಾಸಣಾ ಶಿಬಿರ ಮತ್ತು ರಕ್ತಹೀನತೆ ಕುರಿತು ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಜಡೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನರವರು ಉದ್ಘಾಟಿಸುವರು. ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಸ್.ವೈ. ಅರುಣಾದೇವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ವೇಳೆ ಎಫ್ ಪಿಎಐನ ಸಂಯೋಜನಾಧಿಕಾರಿ ಸಂತೂಬಾಯಿ ಉಪನ್ಯಾಸ ನೀಡುವರು.

ಪುಟಾಣಿ ಕವಿಗಳ ಕಾವ್ಯ ಕಲರವ
ಭದ್ರಾವತಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಮಧ್ಯಾಹ್ನ ಭದ್ರಾ ಕಾಲೋನಿಯ ಭದ್ರಾ ಪ್ರೌಢಶಾಲೆಯಲ್ಲಿ ಪುಟಾಣಿ ಕವಿಗಳ ಕಾವ್ಯ ಕಲರವ ಕಾರ್ಯಕ್ರಮವನ್ನು ಶಾಲೆಯಂಗಳಕೆ ಸಾಹಿತ್ಯ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು. ಸ್ಮಿತಾ, ರಾಕೇಶ್, ಕವನ, ಪೂಜಾ, ಚೈತ್ರ, ಧನರಾಜ್, ನಫೀಜಾಖಾನಂ, ಹರ್ಷಿತಾಬಾಯಿ, ಪುಷ್ಪಾವಾಣಿ, ಇರ್ಫಾನ್, ಶ್ವೇತಾ, ರಕ್ಷಿತಾ ಸೇರಿದಂತೆ ಹಲವು ಪುಟಾಣಿಗಳು ಸಂಭ್ರಮದಿಂದ ಪಾಲ್ಗೊಂಡು ಕವನಗಳನ್ನು ವಾಚಿಸಿ ತಮ್ಮಲ್ಲೂ ಸಾಹಿತ್ಯ ಪ್ರತಿಭೆ ಇದೆ ಎಂಬುದನ್ನು ಸಾಬೀತುಪಡಿಸಿದರು. ಕೆಲವು ಪುಟಾಣಿಗಳು ಹಳೆಗನ್ನಡ ಕವಿತೆ ವಾಚಿಸಿ ಸಭಿಕರ ಮೆಚ್ಚುಗೆ ಗಳಿಸಿದರು. ಕನ್ನಡಾಭಿಮಾನವೂ ಇರಲಿ: ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಶಿಕ್ಷಕ ನಾಗರಾಜ್ ಮಕ್ಕಳಲ್ಲಿನ ಸಾಹಿತ್ಯ ಶಕ್ತಿಯನ್ನು ಹೊರಗೆಡಹುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಯತ್ನವನ್ನು ಶ್ಲಾಘಿಸಿದರು. ಉಪನ್ಯಾಸಕ ಉದಯಕುಮಾರ್ ಕನ್ನಡ  ಸಾಹಿತ್ಯದ ಅರಿವು ಮಕ್ಕಳಲ್ಲಿ ಅತಿಮುಖ್ಯವಾಗಿ ಇರಬೇಕಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳು ಸಾಹಿತ್ಯದ ಅರಿವಿನೊಂದಿಗೆ ಕನ್ನಡಾಭಿಮಾನವನ್ನೂ ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ.ಸಾ.ಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲಿದ್ದು, ಎಲ್ಲಾ ಶಾಲೆಗಳ ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ಕಾರ್ಯವನ್ನು ಶಾಲೆಯಂಗಳಕೆ ಸಾಹಿತ್ಯ ಕಾರ್ಯಕ್ರಮದ ಮೂಲಕ ಕ.ಸಾ.ಪ ಮಾಡುತ್ತಿದೆ ಎಂದು ತಿಳಿಸಿದರು. ಶೋಯಬ್ ಅಖ್ತರ್ ಮತ್ತು ಹರ್ಷಿತಾಬಾಯಿ ಪ್ರಾರ್ಥಿಸಿದರು. ಗುರುಲಿಂಗಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಶ್ರೀನಿವಾಸ ನಿರೂಪಿಸಿದರು. ಲತಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.