ಶಿವಮೊಗ್ಗ

ಮಹಿಳೆ ಆರೋಗ್ಯ ಕಡೆ ಗಮನ ಹರಿಸಲಿ: ಮಹಾಂತ ಶ್ರೀ

Published On :

ಶಿವಮೊಗ್ಗ: ಮಹಿಳೆ ತನ್ನ ಆರೋಗ್ಯ ಮತ್ತು ಅಭಿವೃದ್ಧಿಗೆ ಗಮನ ಕೊಡಬೇಕು. ಮಹಿಳೆಗೆ ಆರೋಗ್ಯವಿದ್ದರೆ ತನ್ನ ಕುಟುಂಬವನ್ನು ಉತ್ತಮವಾಗಿ ನಿರ್ವಹಿಸುತ್ತಾಳೆ ಎಂದು ಶ್ರೀ ಮಹಾಂತ ಸ್ವಾಮಿಗಳು ನುಡಿದರು.
ಇವರು ಜನ ಶಿಕ್ಷಣ ಸಂಸ್ಥೆ, ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಮಹಿಳೆಯರಿಗೆ ರಕ್ತ ತಪಾಸಣಾ ಶಿಬಿರ ಮತ್ತು ರಕ್ತಹೀನತೆ ಕುರಿತು ಮಾಹಿತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಜಡೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಕಾರ್ಯಕ್ರಮ ಉದ್ಘಾಟಿಸಿದರು.
ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎಸ್.ವೈ. ಅರುಣಾದೇವಿ, ಶಿಕ್ಷಣವಿದ್ದರೆ ಶಕ್ತಿ ಇದ್ದಂತೆ. ಕಲಿಕಾರ್ಥಿಗಳು ತರಬೇತಿಗೆ ಸೀಮಿತವಾಗದೇ ಕಲಿತ ವಿದ್ಯೆಯನ್ನು ಪದೇ ಪದೇ ಅಭ್ಯಾಸ ಮಾಡಿ ಪರಿಣತಿಯನ್ನು ಪಡೆಯಬೇಕು. ಈ ತರಬೇತಿಯಲ್ಲಿ ಎಷ್ಟು ಪರಿಣತಿ ಪಡೆಯುತ್ತೀರೋ ಅಷ್ಟು ಯಶಸ್ವಿಯಾಗಿ ಹೊರಹೊಮ್ಮುತ್ತೀರಿ ಎಂದರು.
ರಕ್ತಹೀನತೆ ಕುರಿತು ಶಿವಮೊಗ್ಗ ಎಫ್.ಪಿ.ಎ.ಐ.ಯ ಕಾರ್ಯಕ್ರಮ ಸಂಯೋಜನಾಧಿಕಾರಿ ಸಂತೂಬಾಯಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಮೈತ್ರಿ ಕಾಲೇಜ್ ಆಫ್ ನರ್ಸಿಂಗ್‌ನ ಸಹ ಪ್ರಾಧ್ಯಾಪಕರಾದ ಲಾವಣ್ಯ ಮತ್ತು ವಿಶ್ವಾಸ್ ಜೋಗ್ ಅವರು 100 ಜನ ಕಲಿಕಾರ್ಥಿಗಳು ಮತ್ತು ಸ್ಥಳೀಯರಿಗೆ ರಕ್ತ ತಪಾಸಣೆ ಮತ್ತು ಹಿಮೋಗ್ಲೋಬಿನ್ ಪರೀಕ್ಷೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.