ನಕಲಿ ವೈದ್ಯರಿಂದ ಹಳೇ ಚಾಳಿ ಮುಂದುವರಿಕೆ
-ಶ್ರೀಕಾಂತ್ ಭಟ್
ಕ.ಪ್ರ.ವಾರ್ತೆ ಶಿವಮೊಗ್ಗ ನ.29 ನಕಲಿ ವೈದ್ಯರನ್ನು ಮಟ್ಟ ಹಾಕಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ದಾಳಿ ನಡೆಸಿದ್ದಾರೆ, ಹತ್ತಾರು ಪ್ರಕರಣ ದಾಖಲಿಸಿದ್ದಾರೆ, ಜೈಲಿಗೂ ಕಳುಹಿಸಿದ್ದಾರೆ. ಆದರೆ, ಜೈಲಿನಿಂದ ವಾಪಸು ಬಂದ ನಕಲಿ ವೈದ್ಯರು ಮಾತ್ರ ತಮ್ಮ ಕಾಯಕ ಕೈಬಿಟ್ಟಿಲ್ಲ. ಹಾಗೆಯೇ ಈ ಬೆಳವಣಿಗೆಯನ್ನು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತಮ್ಮ ಜೇಬು ತುಂಬಿಸಿಕೊಳ್ಳುವ ದಾರಿ ಮಾಡಿಕೊಂಡಿದ್ದಾರೆ.
ಬಂಧನಕ್ಕೊಳಪಟ್ಟು ನಂತರ ಬಿಡುಗಡೆಯಾದ ನಕಲಿ ವೈದ್ಯರು ಏನು ಮಾಡುತ್ತಿದ್ದಾರೆ ಎಂದು “OÚ«ÚsÚ®Úúڒ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ.
ನಕಲಿ ವೈದ್ಯರೆಂದು ಬಿರುದು ಪಡೆದು ಜೈಲಿಗೆ ಹೋಗಿಬಂದು, ಆಸ್ಪತ್ರೆ ಮುಚ್ಚಿದ್ದರೂ ವೈದ್ಯಕೀಯ ಸೇವೆ ಮುಂದುವರಿಸಿರುವ ಅಂಶ ಆರೋಗ್ಯ ಇಲಾಖೆಗೆ ತಿಳಿಯದ ವಿಷಯವೇನಲ್ಲ. ಕೆಪಿಎಂಇ ಅನುಷ್ಠಾಧಿಕಾರಿ ಕೃಷ್ಣರಾವ್ ಕಾಳೆ ಅವರೇ ಹೇಳುವಂತೆ, ನಕಲಿ ವೈದ್ಯರು ತಮ್ಮ ಹಿಂದಿನ ಚಾಳಿ ಮುಂದುವರಿಸಿದ್ದಾರೆ. ಆದರೆ, ಅವರನ್ನು ನಿಯಂತ್ರಿಸುವ ಕೈ ಕಟ್ಟಿಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಿಯಾಲಿಟಿ ಚೆಕ್: ಕೆಪಿಎಂಇ ಕಾಯ್ದೆಯಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಿಂದ ಇತ್ತೀಚಿನ ದಿನಗಳಲ್ಲಿ 15 ಮಂದಿಯ ವಿರುದ್ಧ ದೂರು ನೀಡಿ ಜೈಲಿಗೆ ಹೋಗುವಂತೆ ನೋಡಿಕೊಳ್ಳಲಾಗಿದೆ.
ಹೆರಾಲ್ಡ್ ತುಂಗಾ (ನಗರ ಠಾಣೆ), ಸಂಜಯ (ತೀರ್ಥಹಳ್ಳಿ ಠಾಣೆ), ಗುಡ್ಡಪ್ಪ (ಶಿಕಾರಿಪುರ ಠಾಣೆ), ಆನಂದಮೂರ್ತಿ (ಶಿಕಾರಿಪುರ ಠಾಣೆ), ಶಫಿ (ಶಿರಾಳಕೊಪ್ಪ), ಮಾಲತೇಶ್ (ಶಿಕಾರಿಪುರ), ಬಿಸ್ವಜಿತ್ (ಕೋಟೆ ಠಾಣೆ), ಬಿಸ್ವಾಸ್ (ದೊಡ್ಡಪೇಟೆ ಠಾಣೆ), ಎಸ್. ಮಂಜುನಾಥ (ತುಂಗಾ ನಗರ), ಗೀತಾ ಹಾಗೂ ಶೀನ (ಶಿವಮೊಗ್ಗ ಗ್ರಾಮಾಂತರ ಠಾಣೆ), ಅಂಜನಾಮೂರ್ತಿ(ಪೇಪರ್ ಟೌನ್ ಭದ್ರಾವತಿ), ಸಂಜೀವ ಶೆಟ್ಟಿ (ತೀರ್ಥಹಳ್ಳಿ), ಸೈಯದ್ ್ಹೊಳೆಹೊನ್ನೂರು ಠಾಣೆ) ಈವರೆಗೆ ಬಂಧಿತರಾದವರು. ಇವರಲ್ಲದೇ ಆಯುಷ್ ತಂಡ ಮತ್ತೆ ಕೆಲವು ನಕಲಿ ವೈದ್ಯರನ್ನು ಗುರುತಿಸಿದೆ.
ಇವರ ಮಾಹಿತಿ ಬೆಂಬೆತ್ತಿ ಹೊರಟ ಕನ್ನಡಪ್ರಭಕ್ಕೆ ಕೆಲವು ಮಾಹಿತಿಗಳು ಲಭ್ಯವಾಗಿವೆ. ಬಹುತೇಕ ನಕಲಿ ವೈದ್ಯರು ತಮ್ಮ ಕಚೇರಿಯನ್ನು ಮುಚ್ಚಿದ್ದಾರೆ. ಆದರೆ, ಮನೆಯಲ್ಲಿ ಅಥವಾ ವಾಸ್ತವ್ಯ ಬದಲಿಸಿ ಸೇವೆ ನೀಡುತ್ತಿದ್ದಾರೆ. ಒಬ್ಬಿಬ್ಬರು ಮೊಬೈಲ್‌ನಲ್ಲೇ ತಮ್ಮ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ನಿಗದಿತ ದಿನದಂದು ಸಂಚರಿಸಿ ಔಷಧಿ ನೀಡುತ್ತಿದ್ದಾರೆ.
ಹಾಗೆಯೇ ಕೆಲವು ನಕಲಿ ವೈದ್ಯರು ವಿವಿಧ ವಿಚಾರದಲ್ಲಿ ಸ್ಪೆಷಲಿಸ್ಟ್ ಆಗಿಯೇ ಉಳಿದುಕೊಂಡಿದ್ದಾರೆ. ಹೊಸೂಡಿಯಲ್ಲಿ ಇಬ್ಬರು ನಕಲಿ ವೈದ್ಯರು ಈಗಲೂ ಸಹ ಅಬರ್ಷನ್ ಮಾಡಿಸುವುದರಲ್ಲಿ ಎತ್ತಿದ ಕೈ ಎಂಬ ಮಾಹಿತಿ ಗ್ರಾಮಸ್ಥರಿಂದ ತಿಳಿಯಿತು.
ಕಪ್ಪ ಸಂದಾಯ: ಅದೇ ರೀತಿ, ಶಿರಾಳಕೊಪ್ಪದಲ್ಲಿ ಸಹ ನಕಲಿ ವೈದ್ಯ ಬಲಿಷ್ಠ ಎನಿಸಿಕೊಂಡಿದ್ದಾನೆ. ತನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನಾನು ಆರೋಗ್ಯ ಇಲಾಖೆಗೆ “ÑÚM¥Û¾Úß’ ಮಾಡಬೇಕಾದಷ್ಟು ಮಾಡುತ್ತಿದ್ದೇನಲ್ಲ ಎಂದು ಧೈರ್ಯದಿಂದ ಹೇಳಿಕೊಂಡಿದ್ದಾನೆ.
ಕೋಣಂದೂರಿನಲ್ಲಿರುವ ನಕಲಿ ವೈದ್ಯ ಸ್ಟ್ರೋಕ್ಸ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದಾರೆ. ಸಾಕಷ್ಟು ಅಳೆದು ತೂಗಿ ರೋಗಿಯನ್ನು ಖಚಿತಪಡಿಸಿಕೊಂಡ ನಂತರಷ್ಟೇ ತಮ್ಮ ಚಟುವಟಿಕೆಯ ಮಾಹಿತಿ ನೀಡುತ್ತಾರೆ. ಭದ್ರಾವತಿ ಕಾರೇಹಳ್ಳಿಯ ನಕಲಿ ವೈದ್ಯನಿಗೆ ಸ್ಥಳೀಯರೇ ಎಚ್ಚರಿಕೆಯ ಗಂಟೆಯಾಗಿದ್ದು, ಸೀಜ್ ಆದ ತನ್ನ ಕ್ಲಿನಿಕ್ ತೆರೆಯುವ ಧೈರ್ಯ ಮಾಡಿಲ್ಲ.
ಆದಾಯ ತರುವ ಮೂಲ: ಬೆರಳೆಣಿಕೆಯಷ್ಟು ನಕಲಿ ವೈದ್ಯರನ್ನು ಬಂಧಿಸಲಾಗಿದೆ. ಇನ್ನೂ ಸಾಕಷ್ಟು ಮಂದಿ ನಗರದ ಪ್ರಮುಖ ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಕೆಲವರು ಪ್ರಭಾವಶಾಲಿಗಳೆನಿಸಿಕೊಂಡಿದ್ದು, ದೊಡ್ಡ ವ್ಯಕ್ತಿಗಳ ಸಂಪರ್ಕ ಹೊಂದಿದ್ದಾರೆ. ಶಿವಮೊಗ್ಗ ಓಟಿ ರಸ್ತೆಯಲ್ಲಿರುವ ನಕಲಿ ವೈದ್ಯರೊಬ್ಬರ ಬಗ್ಗೆ ಇಲಾಖೆಗೆ ಎಲ್ಲಾ ಮಾಹಿತಿ ಇದ್ದರೂ ಅವರನ್ನು ವಶಕ್ಕೆ ಪಡೆಯಲು ಹಿಂದೇಟು ಹಾಕಲಾಗುತ್ತಿದೆ ಎಂಬುದು ಕೆಪಿಎಂಇ ಅನುಷ್ಠಾನಾಧಿಕಾರಿಯವರ ಮಾತು.
ಆರೋಗ್ಯ ಇಲಾಖೆ ಸಿಬ್ಬಂದಿ ಹೇಳುವಂತೆ, ನಕಲಿ ವೈದ್ಯರು ಇಲಾಖೆ ಹಿರಿಯ ಅಧಿಕಾರಿಗಳ ಜೇಬು ತುಂಬಿಸುವ ಕಾಮಧೇನುವಾಗಿದ್ದಾರೆ. ಕೆಪಿಎಂಇ ಕಾಯ್ದೆಯನ್ನು ಪ್ರಸ್ತಾಪಿಸಿ ಪದೇ ಪದೇ ನಕಲಿ ವೈದ್ಯರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಹಾಗೆಯೇ ನಕಲಿ ವೈದ್ಯರೂ ಸಹ ಹಣ ಪೀಕುತ್ತಾ ನಿರ್ದಾಕ್ಷಿಣ್ಯವಾಗಿ, ನಿರ್ಲಜ್ಜವಾಗಿ ತಮ್ಮ ಚಟುವಟಿಕೆ ಮುಂದುವರಿಸಿದ್ದಾರೆ.
ಅನುಷ್ಠಾನಾಧಿಕಾರಿ ಹೇಳೋದೇನು?: ಕೆಪಿಎಂಇ ಜಿಲ್ಲಾ ಅನುಷ್ಠಾಧಿಕಾರಿ ಕೃಷ್ಣರಾವ್ ಕಾಳೇ ಅವರ ಪ್ರಕಾರ, ಕೆಪಿಎಂಇ ಕಾಯ್ದೆಯನುಸಾರ ಶಾಸನಬದ್ಧ ಮಂಡಳಿಗಳಿಂದ ವೈದ್ಯಕೀಯ ಪ್ರಮಾಣಪತ್ರ ತಂದಿದ್ದರೆ ಸರಿ, ಅದರ ಹೊರತಾಗಿ ಖೊಟ್ಟಿ ಆಯುರ್ವೇದ, ಹೋಮಿಯೋಪತಿ ಸಂಸ್ಥೆಯಿಂದ ಪ್ರಮಾಣಪತ್ರ ತರುವ ಜೊತೆಗೆ, ಇಲ್ಲಿ ಅಲೋಪತಿ ಔಷಧಗಳನ್ನು ಮುಗ್ಧ ರೋಗಿಗಳಿಗೆ ನೀಡುತ್ತಿದ್ದಾರೆ. ಇದರಿಂದ ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

