ಪ್ರೌಢಶಾಲೆಯಲ್ಲಿ ಎನ್ಸಿಸಿ ದಿನಾಚರಣೆ
ಶಿವಮೊಗ್ಗ: ನಗರದ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎನ್.ಸಿ.ಸಿ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಕರ್ನಲ್ ರಾಮಚಂದ್ರ ಕೆ.ಎ. ಅವರು, ಎನ್.ಸಿ.ಸಿ. ಕೆಡೆಟ್ಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ, ಯೋಧರಾಗಿ ದೇಶಕ್ಕೆ ಕೊಡುಗೆ ಸಲ್ಲಿಸಬೇಕೆಂದು ಹೇಳಿದರು. ಇವರೊಂದಿಗೆ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಕೊಳಿಗೆ ಡಿ. ವಾಸಪ್ಪಗೌಡರು, ಮತ್ತು ಎನ್.ಸಿ.ಸಿ. ಅಧಿಕಾರಿಗಳಾದ ಕೆ.ಆರ್. ಚಂದ್ರಪ್ಪ ಹಾಗೂ 20 ಕರ್ನಾಟಕ ಬೆಟಾಲಿಯನ್ ಎನ್ಸಿಸಿಯ ನಾಯಕ್ ಸುಬೇದಾರ್ ಸುಭಾಷ್ ಭಾಗವಹಿಸಿದ್ದರು.
ಶಾಲೆಗೊಂದು ಸಾಹಿತ್ಯ ಕಾರ್ಯಕ್ರಮ
ಶಿವಮೊಗ್ಗ: ಕನ್ನಡ ನಾಡಲ್ಲಿ ಜನಿಸಿದವರೆಲ್ಲರೂ ಕನ್ನಡ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸುವ ಅಗತ್ಯವಿದೆ ಎಂದು ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಸ್.ಕೆ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ಅವರು ನಗರದ ರವೀಂದ್ರನಗರ ಬಡಾವಣೆಯ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ವಿಭಾಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ಶಾಲೆಗೊಂದು ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಡಯಟ್ನ ಹಿರಿಯ ಉಪನ್ಯಾಸಕ ಎ.ಕೆ. ನಾಗೇಂದ್ರಪ್ಪ ಭಾಗವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ರುದ್ರಮ್ಮ ಸ್ವಾಗತಿಸಿದರು. ಶೀಲಾಸುರೇಶ್, ಮಧುಸೂದನ ಐತಾಳ್, ಮುಖ್ಯ ಶಿಕ್ಷಕಿ ಫಾತೀಮಾ ಉಪಸ್ಥಿತರಿದ್ದರು. ಲೀಲಾವತಿ ವಂದಿಸಿದರು.
ಮುದ್ರಕರ ಹಬ್ಬದ ಲಾಟರಿ ಡ್ರಾ
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ನ.16 ಮತ್ತು 17ರಂದು ಆಯೋಜಿಸಿದ್ದ ಮುದ್ರಕರ ಹಬ್ಬದ ಲಾಟರಿ ಡ್ರಾ ವಿವರ ಈ ಕೆಳಕಂಡಂತಿದೆ. ಪ್ರಥಮ ಬಹುಮಾನದ ಲಾಟರಿ ಟಿಕೆಟ್ ಸಂಖ್ಯೆ 173, ದ್ವಿತೀಯ 466, ತೃತೀಯ 818. ಈ ನಂಬರಿನ ಮುಂದಿನ ಹಾಗೂ ಹಿಂದಿನ ಸಂಖ್ಯೆಯ ಟಿಕೆಟ್ಗಳಿಗೆ ಪೆನ್ ಡ್ರೈವ್ ಬಹುಮಾನ ಇರುತ್ತದೆ. ಬಹುಮಾನ ವಿಜೇತರು ಡಿ. 15ರೊಳಗೆ ಪದಾಧಿಕಾರಿಗಳನ್ನು ಸಂಪರ್ಕಿಸಿ ಬಹುಮಾನ ಪಡೆಯಬಹುದು ಎಂದು ಕಾರ್ಯದರ್ಶಿ ಎನ್.ಎಚ್. ಕೃಷ್ಣ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

