ಬಂದೂಕು ಲೈಸನ್ಸ್ ನಿಯಮ ಸಡಿಲಿಕೆಗೆ ಮನವಿ
ಸಾಗರ: ರೈತರಿಗೆ ಬಂದೂಕು ಪರವಾನಿಗೆ ನೀಡುವ ಕ್ರಮವನ್ನು ಸರಳೀಕರಿಸಬೇಕು ಹಾಗೂ ಪೋಡಿ ದುರಸ್ತಿ ಮಾಡುವಲ್ಲಿ ಇರುವ ಕಂದಾಯ ಇಲಾಖೆಯ ನಿಯಮಗಳನ್ನು ರೈತರಿಗೆ ಅನುಕೂಲವಾಗುವಂತೆ ರೂಪಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಕ್ಷೇಮ ಸಾಗರ ಸಂಸ್ಥೆ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವು ಕಾಡುಪ್ರಾಣಿಗಳ ಹಾವಳಿಯಿಂದಾಗಿ ರೈತರು ಫಸಲು ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಹಿಂದೆ ತಹಶೀಲ್ದಾರರು ಬಂದೂಕು ಪರವಾನಿಗೆ ನೀಡುತ್ತಿದ್ದರು. ಈಗ ಅದನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಲೈಸೆನ್ಸ್ ಪಡೆಯಬೇಕಾದ ರೈತರು ಇದಕ್ಕಾಗಿ ಶಿವಮೊಗ್ಗಕ್ಕೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ರೈತರಿಗೆ ನೀಡಲಾಗುತ್ತಿದ್ದ ಎಸ್.ಬಿ.ಬಿ.ಎಲ್. ಲೈಸೆನ್ಸ್ ನೀಡುವ ಅಧಿಕಾರವನ್ನು ತಹಶೀಲ್ದಾರ್ ಅವರಿಗೆ ನೀಡಬೇಕು. ತಹಶೀಲ್ದಾರರಿಗೆ ಇದ್ದ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿರುವುದನ್ನು ತಕ್ಷಣ ರದ್ದುಪಡಿಸಬೇಕು. ಇದರಿಂದ ರೈತರ ಹಣ ಹಾಗೂ ಸಮಯ ಹಾಳಾಗುವುದು ಕಡಿಮೆಯಾಗುತ್ತದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪೋಡಿ ದುರಸ್ತಿ ಮಾಡಿಸಬೇಕಾದರೆ ರೈತರು ಸುಮಾರು 11 ದಾಖಲೆಗಳನ್ನು ನೀಡಲು ಕಂದಾಯ ಇಲಾಖೆ ಸೂಚಿಸಿದೆ. ಈ ದಾಖಲೆಗಳನ್ನು ಸಂಗ್ರಹಿಸಲು ರೈತರು ಕಂದಾಯ ಇಲಾಖೆಗೆ ನೂರಾರು ಬಾರಿ ಓಡಾಡಬೇಕಾದ ಸ್ಥಿತಿ ಇದೆ. ಕೆಲಮೊಮ್ಮೆ ಸೂಕ್ತ ದಾಖಲೆ ಸಿಗದೆ ನಿರಾಶೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರೈತರಿಗೆ ಸುಲಭವಾಗಿ ಸಿಗುವಂತೆ ಕಂದಾಯ ಇಲಾಖೆಯೆ ಸದರಿ ದಾಖಲೆಗಳನ್ನು ಪಡೆದು ಪೋಡಿ ದುರಸ್ತಿ ಮಾಡಿಕೊಡುವ ಬಗ್ಗೆ ಗಮನ ಹರಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
ಕ್ಷೇಮಸಾಗರದ ಸಂಚಾಲಕ ಎಲ್.ಟಿ. ತಿಮ್ಮಪ್ಪ, ರಾಜಶೇಖರ ಗಾಳಿಪುರ, ಲೋಕೇಶ್ಗಾಳಿಪುರ, ಕುಂಟಗೋಡು ಸೀತಾರಾಮ್, ಶೈಲೇಂದ್ರ ಬಂದಗದ್ದೆ ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

