'ಸಂವಿಧಾನ ಬದ್ಧ ಆಹಾರ ಭದ್ರತಾ ಕಾಯ್ದೆ ಅಗತ್ಯ'
ಶಿವಮೊಗ್ಗ: ಸಂವಿಧಾನ ಬದ್ಧವಾದ ಆಹಾರ ಭದ್ರತಾ ಕಾಯ್ದೆ ಈ ದೇಶಕ್ಕೆ ಅಗತ್ಯವಿದೆ ಎಂದು ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಮಾಜಿಕ ಹೋರಾಟಕ್ಕಾಗಿ ನಮ್ಮ ನಡೆಗೆ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ದೇಶದಲ್ಲಿನ ಪ್ರತಿಯೊಬ್ಬನ ಹಸಿವನ್ನು ನೀಗಿಸಬೇಕು ಎಂದು ಸಂವಿಧಾನವೇ ಹೇಳಿದೆ. ಆದರಿಂದ ಸಂವಿಧಾನ ಬದ್ಧವಾಗಿ ಯಾವುದೇ ತೊಡಕುಗಳಿಲ್ಲದೇ ಆ ಕಾಯ್ದೆ ಜಾರಿಯಾಗಬೇಕು. ಈ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಾಗಿರುವುದು ಒಳ್ಳೆಯದು ಎಂದರು.
ವಿಷಾದನೀಯ: ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಉಪಯೋಗದ ಬಗ್ಗೆ ಸಂಸತ್‌ನಲ್ಲಿ ಚರ್ಚೆಯಾಗಿಲ್ಲ. ಯಾವೊಬ್ಬ ಸಂಸದ ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ. ಆದರೆ, ವಿಶ್ವಸಂಸ್ಥೆಯ ವಾಣಿಜ್ಯ ಮಂಡಳಿ ಕಾಯ್ದೆ ಬಗ್ಗೆ ಪ್ರಶ್ನಿಸುತ್ತಿರುವುದು ವಿಷಾದನೀಯ ಎಂದರು.
ದೇಶದಲ್ಲಿ ಜಾಗತಿಕ ಬಂಡಾವಳ ಹೂಡಿಕೆಗೆ ಅವಕಾಶವಿರುವುದರಿಂದ ದಲಿತರಿಗೆ ಹಾಗೂ ಬಂಡವಾಳಶಾಹಿಗಳು ಪ್ರಬಲ: ಹಿಂದುಳಿದ ವರ್ಗಗಳಿಗೆ ಹಲವಾರು ಸಮಸ್ಯೆಗಳು ಉಂಟಾಗಿವೆ. ದೇಶದಲ್ಲಿ ಜಾಗತೀಕರಣದಿಂದಾಗಿ ಬಂಡವಾಳಶಾಹಿಗಳು ಪ್ರಬಲವಾಗುತ್ತಿದ್ದಾರೆ. ದೇಶದ ಎಲ್ಲಾ ಸಂಪನ್ಮೂಲಗಳು ಬಂಡವಾಳಶಾಹಿಗಳ ಬಳಿ ಕ್ರೋಢೀಕರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತರ ಚಳುವಳಿಗೆ 4 ದಶಕಗಳು ಕಳೆದಿವೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಹೋರಾಟದ ದಿಕ್ಕು ಬದಲಿಸಬೇಕಿದೆ. ಹೋರಾಟಗಾರರಲ್ಲಿ ಸಂವಿಧಾನಬದ್ಧವಾಗಿ ನಮ್ಮ ಹಕ್ಕುಗಳನ್ನು ಹೇಗೆ ಕೇಳಬೇಕು ಎನ್ನುವುದನ್ನು ರೂಢಿಸಬೇಕಿದೆ. ಹೋರಾಟಗಳು ವೈಜ್ಞಾನಿಕ ಹಾಗೂ ತರ್ಕಬದ್ಧವಾಗಬೇಕಿದೆ. ಈ ನಿಟ್ಟಿನಲ್ಲಿ ಹೋರಾಟಗಾರರನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರೊ. ಎಚ್. ರಾಚಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ದಲಿತ ಸಮಿತಿಯ ಪ್ರಮುಖರಾದ ಎಚ್. ಮಲ್ಲೇಶ್ ಹರಿಹರ, ಎನ್. ಶಿವಾನಂದ ಕುಗ್ವೆ, ಡಾ ಎಚ್. ಸೋಮಶೇಖರ್ ಮೊಗ್ಗಿ, ರಾಜಪ್ಪ ಮಾಸ್ತರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

