ಶಿವಮೊಗ್ಗ

ಕೃಷಿ ಅಧಿಕಾರಿ ಕಾಂತರಾಜ್‌ಗೆ ಬೀಳ್ಕೊಡುಗೆ

Published On :

ಶಿವಮೊಗ್ಗ: ಆನಂದಪುರಂನ ರೈತ ಸಂಪರ್ಕ ಕೇಂದ್ರದದಲ್ಲಿ ಕೃಷಿ ಅಧಿಕಾರಿಯಾಗಿ 5 ವರ್ಷಗಳಿಂದ ಸೇವೆ ಸಲ್ಲಿಸಿ ಪ್ರಸ್ತುತ ಸೊರಬದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ವರ್ಗಾವಣೆಗೊಂಡ ಕಾಂತರಾಜ್ ಅವರಿಗೆ ಶನಿವಾರ ಹಿರೇಹಾರಕ ಮತ್ತು ಸಂಗಣ್ಣನ ಕೆರೆಗ ಗ್ರಾಮದಲ್ಲಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
ರೈತರಿಂದ ಸನ್ಮಾನ ಸ್ವೀಕರಿಸಿದ ಕಾಂತರಾಜ್, ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಸರ್ಕಾರದ ವಿವಿಧ ಯೋಜನೆಗಳನ್ನು ಸಕಾಲದಲ್ಲಿ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
5 ವರ್ಷ ಕಾಲ ಇಲ್ಲಿನ ಸಹಾಯಕ ಕೃಷಿ ಅಧಿಕಾರಿಯಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮದ ರೈತರು ಕೃಷಿ ಚಟುವಟಿಕೆಯ ಪ್ರತಿ ಹಂತದಲ್ಲಿ ಸಲಹೆ ಮಾರ್ಗದರ್ಶನ ಪಡೆಯುತ್ತಿದ್ದರು. ಕೆಲವು ಪ್ರಗತಿಪರ ರೈತರು ನಮ್ಮೊಂದಿಗೆ ಚರ್ಚಿಸಿ ಅವರ ಹೊಸ ತಂತ್ರಗಳನ್ನು ವಿವರಿಸುತ್ತಿದ್ದರು ಎಂದು ಅವರ ಸೇವಾವಧಿಯನ್ನು ನೆನಸಿಕೊಂಡರು.
ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಈ ಸಂದರ್ಭದಲ್ಲಿ ಅನಿಸಿಕೆ ವ್ಯಕ್ತಪಡಿಸಿದರು. ರೈತರು ಮತ್ತು ಗೊಬ್ಬರ ಅಂಗಡಿ ಮಾಲಿಕರು ನೆನಪಿನ ಕಾಣಿಕೆ ನೀಡಿ ಆತ್ಮಿಯ ಬೀಳ್ಕೊಡುಗೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಮಾರುತಿ, ತಿಮ್ಮಪ್ಪ, ಮಲ್ಲಿಕಾರ್ಜುನ, ಸಿಬ್ಬಂದಿ ಗಜೇಂದ್ರ, ಅರುಣ್, ರಾಜೇಶ, ಹೇಮಂತ, ಪ್ರಗತಿಪರ ರೈತ ನಿತ್ಯ, ಜಗನ್, ಸೋಮಶೇಖರ, ಮಹದೇವಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.