ಶಿವಮೊಗ್ಗ

ಮೋದಿ ಕೊಡುಗೆ ಏನು?

Published On :

ಶಿರಾಳಕೊಪ್ಪ: 120ವರ್ಷ ಇತಿಹಾಸ ವಿರುವ ಕಾಂಗ್ರೆಸ್ ದೇಶಕ್ಕೆ ಸಾಕಷ್ಟು ಕೊಡಿಗೆ ನೀಡಿದೆ. ಆದರೆ ದೇಶದಲ್ಲಿ ಮೋದಿ ಅಲೆ ಇದೆ ಎಂದು ಮಾಧ್ಯಮಗಳು ಸೃಷ್ಟಿ ಮಾಡಿದ್ದು, ದೇಶಕ್ಕೆ ಮೋದಿ ಅವರ ಕೊಡಿಗೆ ಏನು ಎಂದು ಕಾಂಗ್ರೆಸ್ ಅಭ್ಯರ್ಥಿಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ಸಂಜೆ ಬಸ್ಸು ನಿಲ್ದಾಣದ ಸೃತ್ತದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 60ವರ್ಷ ಸುಭದ್ರ ಆಳ್ವಿಕೆ ನೀಡಿ ನಾಗರೀಕರಿಗೆ ಭದ್ರ ಬುನಾದಿ ಹಾಕಿಕೊಟ್ಟಿದೆ. ಕಾರ್ಯಕರ್ತರು ಕೇಂದ್ರಸರ್ಕಾರದ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಸಾಧನೆಯನ್ನು ಮತದಾರರಿಗೆ ತಿಳಿಸಬೇಕು ಎಂದರು.
ಶಿಕಾರಿಪುರದಿಂದ ಆಗಮಿಸಿದ ಮಂಜುನಾಥ ಭಂಡಾರಿ ಅವರನ್ನುಪಕ್ಷದ ಕಾರ್ಯಕರ್ತರು ಆತ್ಮಿಯವಾಗಿ ಬರಮಾಡಿಕೊಂಡರು. ಅವರು ಸಭೆಯಲ್ಲಿ ಮಾತನಾಡಿದ ನಂತರ ಅವರನ್ನು ತೆರದ ವಾಹನದಲ್ಲಿ ರೋಡ ಶೋ ಮಾಡಿಸಿ ಮತಯಾಚಿಸಿದರು. ಪ್ರಾರಂಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ ಸ್ವಾಗತಿಸಿದರು.
     ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ನಗರದ ಮಹದೇವಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಶಾಂತವೀರಪ್ಪಗೌಡ ಶಿರಾಳಕೊಪ್ಪ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಶಿಕಾರಿಪುರ ಬ್ಲಾಕ್ ಅಧ್ಯಕ್ಷ ಗೋಣಿ ಮಾಲತೇಶ್, ಜಬ್ಬಾರ್ ಸಾಬ್, ತಡಗಣಿ ರಾಜು,ಹುಲಿರಾಜು, ಜಿಪಂ ಮಾಜಿ ಸದಸ್ಯ ಜಾನಕಪ್ಪ, ಪಪಂ ಸದಸ್ಯರು ಹಾಗು ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.