'ಪ್ರತಿಜ್ಞಾ ಯೌಗಂಧರಾಯಣ' ಇಂದು
ಶಿವಮೊಗ್ಗ: ಶಿವಮೊಗ್ಗ ಹಬ್ಬ ನಾಟಕೋತ್ಸವದ 7ನೇ ದಿನವಾದ ಭಾನುವಾರ ಸಂಜೆ ಅಭಿನಯ ರಂಗತಂಡವು 'ಪ್ರತಿಜ್ಞಾ ಯೌಗಂಧರಾಯಣ' ನಾಟಕವನ್ನು ಪ್ರೊ.ಹಾಲೇಶಪ್ಪ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಿದೆ. ಭಾಸ ಮಹಾಕವಿಯ ಈ ನಾಟಕವನ್ನು ಸಿ.ಪಿ.ಕೃಷ್ಣಕುಮಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಗೀತಾ ಅರುಣ್ ಮತ್ತು ಸಂಗಡಿಗರು, ವಸ್ತ್ರವಿನ್ಯಾಸ ಪುರುಷೋತ್ತಮ ತಲವಾಟ ಅವರದು. ಈ ನಾಟಕದಲ್ಲಿ ಕಾಂತೇಶ್ ಮೂರ್ತಿ ಕೆ.ಎನ್., ಡಾ.ನಾಗಭೂಷಣ ಎಚ್.ಎಸ್., ಪ್ರೊ. ಎಸ್.ಸಿ. ಗೌರಿಶಂಕರ್, ಸುಧೀಂದ್ರರಾವ್ ಎನ್.ಎಸ್., ಹಾಲಸ್ವಾಮಿ ಪಿ.ಎಸ್., ನವೀನ್, ಬ್ಯಾಂಕ್ ಪ್ರಸನ್ನ, ವಿಶ್ವ, ವಿಜಯ ವಾಮನ, ವೀಣಾ ಸ್ವಾಮಿ, ದಿವ್ಯಾ, ಈರಣ್ಣ, ಮನು, ಹೊನ್ನಾಳಿ ಪ್ರದೀಪ್ ಅಭಿನಯಿಸಿದ್ದಾರೆ. ಉದಯನ ಮತ್ತು ವಾಸವದತ್ತೆ ಅವರ ಜೀವನದ ಘಟನೆ ಇದು. ಅಮಾತ್ಯ ಯೌಗಂಧರಾಯಣ ಮಾಡುವ ಎರಡು ಪ್ರತಿಜ್ಞೆಗಳು, ಅವುಗಳನ್ನು ಈಡೇರಿಸಿದ ರೀತಿಯೇ ನಾಟಕದ ಕಥಾವಸ್ತು. ಕಾರ್ಯಕ್ರಮಕ್ಕೆ ರಂಗಾಸಕ್ತರು, ಕಲಾಭಿಮಾನಿಗಳು ಆಗಮಿಸುವಂತೆ ಶಿವಮೊಗ್ಗ ಹಬ್ಬ ಸಂಚಾಲಕ ವೈದ್ಯ ಕೋರಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

