ಶಿವಮೊಗ್ಗ

ಭ್ರಷ್ಟಾಚಾರ ಮುಕ್ತ ಭಾರತ ಎಎಪಿ ಉದ್ದೇಶ: ಸುರೇಶ್

Published On :

ಹೊಸನಗರ: ಭ್ರಷ್ಟಾಚಾರ, ಪಕ್ಷಪಾತದಿಂದ ರಾಜಕೀಯ ವ್ಯವಸ್ಥೆಯನ್ನೇ ಕಲುಷಿತಗೊಳಿಸಿರುವ ಇಂದಿನ ರಾಜಕೀಯ ಪಕ್ಷಗಳಿಂದ ಆಡಳಿತ ತಪ್ಪಿಸಿ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವೇ ಆಮ್ ಆದ್ಮಿ ಪಕ್ಷದ ಉದ್ದೇಶ ಎಂದು ಸಂಚಾಲಕ ವಾಟಗೋಡು ಸುರೇಶ್ ತಿಳಿಸಿದರು.
ತಾಲೂಕಿನ ರಿಪ್ಪನ್ಪೇಟೆಯಲ್ಲಿ ಎಎಪಿ ಸದಸ್ಯತ ಅಭಿಯಾನಕ್ಕೆ ಚಾಲನೆ ನೀಡಿ, 60 ವರ್ಷದಲ್ಲಿ ಜನರ ಮೂಲ  ಸಮಸ್ಯೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡದ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು.
ಅಧಿಕಾರಕ್ಕೆರುವ ಒಂದೇ ಅಕಾಂಕ್ಷೆಯಿಂದ ಭ್ರಷ್ಟಾಚಾರವನ್ನು ಸರ್ವವ್ಯಾಪಿಸಿದ್ದಾರೆ. ಇನ್ನಾದರೂ ಇದನ್ನರಿತ ಯುವಪೀಳಿಗೆಯ ದೇಶಭಕ್ತರು ಇವರ ಕಪಟ ಅರಿಯದಿದ್ದರೆ ರಾಷ್ಟ್ರಕ್ಕೆ ಮಾರಕವಾಗಿ ಪರಿಣಮಿಸಲಿದೆ. ಎಲ್ಲಾ ಕೆಟ್ಟ ವಿಚಾರಗಳನ್ನು ವಿರೋಧಿಸುವ ಅಲೆ ದೇಶದೆಲ್ಲೆಡೆ ಎದ್ದಿದೆ. ಪ್ರತಿಗ್ರಾಮದಲ್ಲಿ ಈ ವಿಚಾರವನ್ನು ಗಟ್ಟಿಗೊಳಿಸುವ ಜವಾಬ್ದಾರಿ ಇರುವ ಸಾರ್ವಜನಿಕರು ಎಎಪಿಯ ಸದಸ್ಯತ್ವ ಪಡೆದು ಅಂದೋಲನದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಪ್ರಮುಖ ಮಾರ್ಗದ ಮನೆಮನೆಗೆ ತೆರಳಿದ ಕಾರ್ಯಕರ್ತರು ಸದಸ್ಯತ್ವ ನೋಂದಣಿ ಮಾಡಿಸಿದರು. ವಸಂತ್ ಕುಮಾರ್, ಎ.ಎಸ್. ವಿದ್ಯಾಧರ, ಮಹಮ್ಮದ್ ತಸ್ರೀನ್, ತಟಗೋಡು ಈಶ್ವರಪ್ಪ, ನಾಗರಾಜ, ನಾಗಪ್ಪ, ರಾಜಶೇಖರ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.