ಮಕ್ಕಳಿಗೆ ಕಣ್ಣಿನ ಸಂರಕ್ಷಣೆ ಮಾಹಿತಿ ಅಗತ್ಯ'
ಶಿವಮೊಗ್ಗ: ಬಾಲ್ಯದಲ್ಲೇ ಮಕ್ಕಳಿಗೆ ಕಣ್ಣಿನ ಸಂರಕ್ಷಣೆ ಬಗ್ಗೆ ಮಾಹಿತಿ ತುಂಬಾ ಅತ್ಯಗತ್ಯ, ಮನುಷ್ಯನ ದೇಹದಲ್ಲಿ ಕಣ್ಣು ಒಂದು ಪ್ರಮುಖವಾದ ಅಂಗ. ವಿದ್ಯಾರ್ಥಿಗಳಿಗೆ ವಿದ್ಯಭ್ಯಾಸದಲ್ಲಿ ಪರಿಪೂರ್ಣ ಹೊಂದಲು ನೇತ್ರ ಸಂಪೂರ್ಣವಾಗಿ ಚೆನ್ನಾಗಿರಬೇಕು ಎಂದು ಗ್ಲಕೋಮಾ ತಜ್ಞ ಡಾ. ಪ್ರಶಾಂತ್ ಹೇಳಿದರು.
ರಾಜೇಂದ್ರ ನಗರ ರೋಟರಿಪೂರ್ವ ಸಭಾಂಗಣದಲ್ಲಿ ಇನ್ನರ್ವ್ಹೀಲ್ ಸಂಸ್ಥೆ ಹಾಗೂ ರೋಟರಿ ಶಿವಮೊಗ್ಗ ಪೂರ್ವ, ರೋಟರಿ ವಿದ್ಯಾಸಂಸ್ಥೆ ಹಾಗೂ ವಾಸನ್ ಐಕೇರ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾಮಕ್ಕಳಿಗೆ ಉಚಿತ ನೇತ್ರ ತಪಾಸಣೆ, ಮಾಹಿತಿ ಕಾರ್ಯಾಗಾರ ಹಾಗೂ ಆರ್ಥಿಕವಾಗಿ ಹಿಂದುಗಳಿದ ಮಕ್ಕಳಿಗೆ ಕನ್ನಡ ವಿತರಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಇಂದಿನ ಮಕ್ಕಳು ಕಣ್ಣಿನ ದೋಷ ಇದ್ದರೂ ಪೋಷಕರಲ್ಲಿ ಹಾಗೂ ಶಿಕ್ಷಕರಲ್ಲಿ ಸಂಕೋಚ ಸ್ವಭಾವದಿಂದ ಕಾಯಿಲೆ ವಿಷಯವನ್ನು ತಿಳಿಸುವುದಿಲ್ಲ. ಇದರಿಂದ ಅವರ ಮುಂದಿನ ವಿಧ್ಯಾಭ್ಯಾಸಕ್ಕೆ ತುಂಬಾ ತೊಂದರೆ ಆಗುತ್ತದೆ. ಕಣ್ಣಿನ ಕಾಯಿಲೆಯನ್ನು ಚಿಕ್ಕವರಿದ್ದಾಗ ಅಲಕ್ಷ ಮಾಡಿದರೆ ಮುಂದೆ ನರಗಳ ದೌರ್ಬಲ್ಯದಿಂದ ಸಂಪೂರ್ಣವಾಗಿ ಶಾಶ್ವತವಾಗಿ ಕುರುಡರಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳು ತಮ್ಮ ಜೀವನಶೈಲಿ ಹಾಗೂ ಆರೋಗ್ಯ ಆಹಾರಶೈಲಿಯಾದ ಹಸಿರು ತರಕಾರಿ ಹಣ್ಣುಹಂಪಲು ಪೌಷ್ಠಿಕಾಂಶದ ಆಹಾರ ಸೇವನೆಯ ಕೊರತೆಯಿಂದ ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದಾರೆ. ಪೋಷಕರು ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕೆ.ಸಿ ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪೂರ್ವ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ. ವಿಜಯ್ ಕುಮಾರ್, ಕಾರ್ಯದರ್ಶಿ ಬಿ. ಪ್ರಸನ್ನಕುಮಾರ, ಮ್ಯಾನೇಜಿಂಗ್ ಟ್ರಸ್ಟಿ ಕಡಿದಾಳ್ ಗೋಪಾಲ್, ಇನ್ನವ್ಹೀಲ್ ಅಧ್ಯಕ್ಷರಾದ ಸುಜಯಾ ಪುರುಷೋತ್ತಮ, ಮಾಜಿ ಅಧ್ಯಕ್ಷರಾದ ಬಿಂದು ವಿಜಯಕುಮಾರ್, ವಾಸನ್ ಐಕೇರ್ನ ಸೆಂಟ್ರಲ್ ಹೆಡ್ ಕೃಷ್ಣಮೂರ್ತಿ, ಅಕ್ಷಯ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

