ಹೈನುಗಾರಿಕೆಯಲ್ಲಿ ಶಿಸ್ತು ಅವಶ್ಯ: ಡಾ.ರವೀಂದ್ರ
ಶಿವಮೊಗ್ಗ: ಹೈನುಗಾರಿಕೆ ಮಾಡುವ ರೈತನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ ಎಂದು ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ. ಆರ್.ಆರ್. ರವೀಂದ್ರ ಅಭಿಪ್ರಾಯಪಟ್ಟರು.
ಕೃಷಿ ಉತ್ಸವದಲ್ಲಿ ಲಾಭದಾಯಕ ಕೃಷಿಯ ಜೀವನಾಡಿ ಹೈನುಗಾರಿಕೆ ವಿಚಾರವಾಗಿ ಮಾತನಾಡಿದ ಅವರು, ರೈತರಿಗೆ ಹೈನುಗಾರಿಕೆ ಮಾಡುವ ಅವಕಾಶವಿದ್ದರೂ ಬೇರೆ ಏನೇನೋ ಮಾಡಲು ಹೋಗುತ್ತಾರೆ. ಅಂತಹ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮಿಶ್ರತಳಿ ಅಳವಡಿಸಬೇಕು, ಆರ್ಥಿಕವಾಗಿ ಅಭಿವೃದ್ಧಿ ಪಡೆಯಬಹುದು. ರೈತರು ಹೈನುಗಾರಿಕೆಯನ್ನು ಲಾಭದಾಯಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೆಲವು ಶಿಸ್ತನ್ನು ಪಾಲಿಸಬೇಕಾಗುತ್ತದೆ ಎಂದರು.
ಎಚ್ಚರಿಕೆ ವಹಿಸಿ: 1 ಲೀಟರ್ಗೆ 10 ಉಳಿತಾಯವಾದರೆ ಲಾಭದಾಯಕ ಹೈನುಗಾರಿಕೆ. ಈ ನಿಟ್ಟಿನಲ್ಲಿ ಕೆಲವು ಮಾರ್ಗಗಳನ್ನು ಅನುಸರಿಸಬೇಕು ಎಂದ ಅವರು, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಾರದಂತೆ ರೈತರು ಎಚ್ಚರಿಕೆ ವಹಿಸಬೇಕು. ಕಾಲಕಾಲಕ್ಕೆ ಲಸಿಕೆಗಳನ್ನು ಕೊಡಿಸಬೇಕೆಂದು ಹೇಳಿದರು.
ಐದಂಶ ಪಾಲಿಸಿ: ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ.ಸಿ. ವೀರಣ್ಣ ಮಾತನಾಡಿ, ಉತ್ತಮ ತಳಿ, ಸಮತೋಲನ ಆಹಾರ, ಸಂತಾನೋತ್ಪತ್ತಿ ಸೇರಿದಂತೆ ಐದಂಶಗಳನ್ನು ಪಾಲಿಸಿದರೆ ಹೈನುಗಾರಿಕೆ ಲಾಭದಾಯಕ ಎಂದರು.
ಶ್ವೇತಕ್ರಾಂತಿ: ಶಿಮುಲ್ ಅಧ್ಯಕ್ಷ ಕೆ.ಎಲ್. ಜಗದೀಶ್ವರ್ ಮಾತನಾಡಿ, ಹಸಿರು ಕ್ರಾಂತಿ ಹೇಗೆ ನಡೆಯಿತೋ ಅದೇ ರೀತಿ ಶ್ವೇತ ಕ್ರಾಂತಿ ಈಗ ಪ್ರಪಂಚದಾದ್ಯಂತ ನಡೆಯುತ್ತಿದೆ.
ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಹೈನುಗಾರಿಕೆಯ ಜ್ಞಾನವನ್ನು ರೈತರು ಬಳಸಿಕೊಂಡು ಆರ್ಥಿಕವಾಗಿ ಉನ್ನತಿ ಸಾಧಿಸಲು ಅವಕಾಶವಿದೆ. ಹೈನುಗಾರಿಕೆಯನ್ನು ಕಸುಬಾಗಿ ಪರಿಣಮಿಸಿದವರಿಗಿಂತ ಉಪ ಕಸುಬಾಗಿ ಮಾಡುತ್ತಿರುವವರು ಹೈನುಗಾರಿಕೆ ಏಳ್ಗೆಯಾಗಲ್ಲ ಎಂದು ಋಣಾತ್ಮಕವಾಗಿ ಮಾತನಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭ ಕಲ್ಕೊಪ್ಪದ ಸುರೇಶ್, ಹೊರಬೈಲಿನ ಚೌಡಪ್ಪ ತಮ್ಮ ಅನುಭವ ಹಂಚಿಕೊಂಡರು. ಮಧ್ಯಾಹ್ನ ನಡೆದ ಮೊದಲ ವಿಚಾರಗೋಷ್ಠಿಯಲ್ಲಿ ಮಹಿಳಾ ಸ್ವಾವಲಂಬನೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

