ಶಿವಮೊಗ್ಗ

ಡಿಕೆಶಿ ಜೈಲಿಗೆ ಹೋಗಲೇಬೇಕು: ಹಿರೇಮಠ

Published On :

ಶಿವಮೊಗ್ಗ:  ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ, ನೈಸರ್ಗಿಕ ಸಂಪತ್ತು ಲೂಟಿ ಮಾಡಿದ ಪರಿಣಾಮ ಗಾಲಿ ಜನಾರ್ದನ ರೆಡ್ಡಿ ಜೈಲು ಸೇರಿರುವಂತೆ ಸಚಿವ ಡಿ.ಕೆ. ಶಿವಕುಮಾರ್ ಸಹ ಜೈಲಿಗೆ ಹೋಗಲೇಬೇಕು ಎಂದು ಸಾಮಾಜಿಕ ಹೋರಾಟಗಾರ ಹಿರೇಮಠ ಗುಡುಗಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ನಡೆದು ಬಂದ ದಾರಿಯನ್ನು ನೋಡಿದರೆ ಇವರ ಮೇಲೆ ಸರ್ಕಾರ ತೆಗೆದುಕೊಳ್ಳುತ್ತಿರುವ ಮೃದುಧೋರಣೆ ಎಷ್ಟೆಂಬುದು ಗೊತ್ತಾಗುತ್ತದೆ ಎಂದರು.
1999- 2004ರ ಅವಧಿಯಲ್ಲಿ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಸರ್ಕಾರವಿದ್ದ ಸಂದರ್ಭ, ಡಿ.ಕೆ. ಶಿವಕುಮಾರ್ ಸಹಕಾರ ಸಚಿವರಾಗಿದ್ದರು. ಅವರೊಬ್ಬ ಅತ್ಯಾಧುನಿಕ ಕ್ರಿಮಿನಲ್. ಆಕ್ಟೋಪಸ್ ಗ್ರೂಪ್ ಅವರದ್ದು. ಗಾಲಿ ಜನಾರ್ದನ ರೆಡ್ಡಿಗಿಂತ 10 ಪಟ್ಟು ಅಕ್ರಮ ಸಂಪಾದನೆ ಮಾಡಿದ್ದಾರೆ. ಸ್ವಜನ ಪಕ್ಷಪಾತ, ನೈಸರ್ಗಿಕ ಸಂಪನ್ಮೂಲ ಲೂಟಿ, ಭೂ ಮಾಫಿಯಾ, ಅಧಿಕಾರ ದುರುಪಯೋಗದಲ್ಲಿ ಅವರೇ ಕಿಂಗ್ಪಿನ್ ಎಂದು ಖಾರವಾಗಿ ಟೀಕಿಸಿದರು. 2002ರಲ್ಲಿ ಮೊಟ್ಟಮೊದಲ ಸಲ ನ್ಯಾಯಾಲಯಗಳ ತೀರ್ಪುಗಳನ್ನು ಗಾಳಿಗೆ ತೂರಿ ಆದೇಶವೊಂದನ್ನು ಹೊರಡಿಸಿ ಮಧ್ಯಮವರ್ಗದವರಿಗೆ ಮನೆ ಕಲ್ಪಿಸುವ ನೆಪದಲ್ಲಿ ಕೋಟಿ ಕೋಟಿ ಲೂಟಿಗೆ ಅನುಕೂಲ ಮಾಡಿಕೊಟ್ಟ ಮೂಲಪುರುಷ ಎಂದು ಕಟುಕಿದರು.
ಹುಂಬ ತನದಿಂದ ಲಂಗುಲಗಾಮಿಲ್ಲದ ವರ್ತನೆ ಡಿಕೆಶಿಯವರದ್ದು. 2004ರಲ್ಲಿ ಸೋನಿಯಾಗಾಂಧಿ ಚುನಾವಣಾ ಕಣಕ್ಕಿಳಿದು ಜಯಗಳಿಸಿದ ಸಂದರ್ಭ, ಹಣ ಸಪ್ಲೆ ಮಾಡಿದ ಏಜೆಂಟ್. 10 ಜನಪತ್ ಮೇಲೆ ಇವರ ಪ್ರಭಾವ ಇದೆ ಎಂದು ತರಾಟೆಗೆ ತೆಗೆದುಕೊಂಡರು. ಸಿಎಂ ಸಿದ್ದರಾಮಯ್ಯ ಅವರಿಗೆ ಇವರೇನು (ಡಿಕೆಶಿ) ಬೇಡ. ದೊರೆಸ್ವಾಮಿ ಅವರ ಮಾತು ಉಪಯೋಗಿಸಿ ಹೊರಗಿಟ್ಟಿದ್ದರು. ಆದರೆ, 10 ಜನಪತ್ ಈತ ಯಾರು, ಯಾವ ರೀತಿ ಹಣ ಮಾಡುತ್ತಿದ್ದಾರೆ ಎಂದು ಲಕ್ಷ್ಯ ಕೊಡುತ್ತಿಲ್ಲ. ನನ್ನ ಅಭಿಪ್ರಾಯದಲ್ಲಿ ಅವರು ಈತನ ಬಗ್ಗೆ ಅಷ್ಟೊಂದು ಆಳವಾಗಿ ಗಮನಿಸಿಲ್ಲ. ಎಸ್.ಎಂ. ಕೃಷ್ಣ ನಿಕಟವರ್ತಿ ಎಂದು ಅವರೂ ವಿಶ್ವಾಸವಿಟ್ಟಿದ್ದಾರೆ ಎಂದರು.
ಡಿಕೆಶಿ ರಾಜಕೀಯ ಕೀಳುಮಟ್ಟಕ್ಕೆ ಒಯ್ದಿದ್ದಾರೆ. ವಿಧಾನಪರಿಷತ್ನಲ್ಲಿ ಸಂವಿಧಾನಬದ್ಧವಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಸ್ಥಾನಕಲ್ಪಿಸುವ ಬದಲು ಹಣದ ಬ್ಯಾಗ್ ಕೊಡುವವರಿಗೆ ಪರಿಷತ್ನಲ್ಲಿ ಸ್ಥಾನ ಕಲ್ಪಿಸುವ ವ್ಯವಸ್ಥೆ ಶುರುವಾಗಿದೆ. ಈ ಮೂಲಕ ಸಂವಿಧಾನದ ಇಟ್ಟಿಗೆ ಕೆಡವುತ್ತಿದ್ದಾರೆ ಎಂದ ಅವರು, ಕಾರ್ಯಾಂಗ, ಶಾಸಕಾಂಗ ಕೆಟ್ಟಾಗ ನ್ಯಾಯಾಂಗಕ್ಕೆ ವ್ಯವಸ್ಥೆ ಸರಿಮಾಡುವ ಅವಕಾಶವಿದೆ. ಈ ನಿಟ್ಟಿನಲ್ಲಿ ನಾವು ನ್ಯಾಯಾಂಗದ ಮೂಲಕ ಹೋರಾಟ ಮುಂದುವರಿಸುತ್ತೇವೆ ಎಂದರು.
 


ಡಿ.ಕೆ. ಶಿವಕುಮಾರ್ ನಡೆದು ಬಂದ ದಾರಿಯನ್ನು ನೋಡಿದರೆ ಇವರ ಮೇಲೆ ಸರ್ಕಾರ ತೆಗೆದುಕೊಳ್ಳುತ್ತಿರುವ ಮೃದುಧೋರಣೆ ಎಷ್ಟೆಂಬುದು ಗೊತ್ತಾಗುತ್ತದೆ. ಅವರೊಬ್ಬ ಅತ್ಯಾಧುನಿಕ ಕ್ರಿಮಿನಲ್. ಆಕ್ಟೋಪಸ್ ಗ್ರೂಪ್ ಅವರದ್ದು. ಬೇರೆ ಬೇರೆ ಕ್ರಿಮಿನಲ್ ಜನರೊಂದಿಗೆ ಸೇರಿ ಗಾಲಿ ಜನಾರ್ದನ ರೆಡ್ಡಿಗಿಂತ 10 ಪಟ್ಟು ಅಕ್ರಮ ಸಂಪಾದನೆ ಮಾಡಿದ್ದಾರೆ.
   ಹಿರೇಮಠ, ಸಾಮಾಜಿಕ ಹೋರಾಟಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.