ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಸಂತಗೌಡ
ಶಿಕಾರಿಪುರ: ಪಟ್ಟಣ ಪುರಸಭೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ತಾ. ಬಿಜೆಪಿ ಹಿರಿಯ ಮುಖಂಡ, ಸದಸ್ಯ ಕೆ.ಜಿ. ವಸಂತಗೌಡ ಸೋಮವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
23 ಸದಸ್ಯರ ಪುರಸಭೆಯಲ್ಲಿ 17 ಸದಸ್ಯರ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿಯ ಅಧಿಕೃತ ಅಭ್ಯರ್ಥಿ ಯಾಗಿ ಕೆ.ಜಿ. ವಸಂತಗೌಡರ ಉಮೇದುವಾರಿಕೆಯನ್ನು ಟಿ.ಎಸ್. ಮೋಹನ್ ಸೂಚಿಸಿದರು. ಪದ್ಮ ಗಜೇಂದ್ರ ಅನುಮೋದಿಸುವ ಮೂಲಕ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆಯನ್ನು ಪುರಸಭಾ ಮುಖ್ಯಾಧಿಕಾರಿ ಮನೋಹರ್ ದೃಢೀಕಕರಿಸಿದರು.
ನೂತನ ಅಧ್ಯಕ್ಷ ವಸಂತಗೌಡ ಮಾತನಾಡಿ, ಪುರಸಭೆ ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಬದ್ದರಾಗಿದ್ದಾಗಿ ತಿಳಿಸಿದರು. ಆಯ್ಕೆಗೆ ಸಹಕರಿಸಿದ ಪಕ್ಷದ ಮುಖಂಡರು, ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಸದಸ್ಯ ಟಿ.ಎಸ್. ಮೋಹನ್ ಮಾತನಾಡಿ, ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ಕೇವಲ ಒಂದು ವರ್ಷವಾಗಿದ್ದು, ದೊರೆತ ಅವಕಾಶದಲ್ಲಿ ಎಲ್ಲಾ ಸದಸ್ಯರ ವಿಶ್ವಾಸಗಳಿಸಿ ಅವರ ವಾರ್ಡ್ಗಳಲ್ಲಿನ ಸಮಸ್ಯೆಗೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ಹೇಳಿದರು.
ಪುರಸಭಾದ್ಯಕ್ಷೆ ಗೌರಮ್ಮ ಮಾತನಾಡಿ, ಚುನಾವಣೆಯಲ್ಲಿ ಮಾತ್ರ ಪಕ್ಷ ರಾಜಕೀಯವಾಗಿದ್ದು ನಂತರದಲ್ಲಿ ಸಹೋದರರ ರೀತಿಯಲ್ಲಿ ಪಟ್ಟಣದ ಅಭಿವೃದ್ದಿಗೆ ಪರಸ್ವರ ಸಹಕರಿಸಿ ಸ್ಪಂದಿಸಬೇಕಾಗಿದೆ ಎಂದರು.
ನೂತನ ಅಧ್ಯಕ್ಷ ವಸಂತಗೌಡರನ್ನು ಉಪಾಧ್ಯಕ್ಷ ಸೈಯದ್ಪೀರ್, ಸದಸ್ಯ ಪಾಲಾಕ್ಷಪ್ಪ, ಧೂಪದಹಳ್ಳಿ ರವಿ, ಪರಶುರಾಮ, ರೂಪಕಲಾ ಹೆಗಡೆ, ನಿಜಲಿಂಗಪ್ಪ, ಶಿವರಾಂ ಪಾರಿವಾಳದ, ಎಲ್ಲಪ್ಪ, ಪಾರ್ವತಮ್ಮ ಮುಖಂಡ ಹಾಲಪ್ಪ, ಕೆ.ಎಂ ಜಗದೀಶ್, ಸುರೇಂದ್ರಗೌಡ, ತಿಪ್ಪಣ್ಣ, ಭುಜಂಗಪ್ಪ, ಪ್ರಸನ್ನಕುಮಾರ್,ಶ್ರೀಧರ್ ಹೆಗಡೆ, ಶಿವನಗೌಡ ಮತ್ತಿತರರು ಅಭಿನಂದಿಸಿದರು. ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

