ಶಿವಮೊಗ್ಗ

ಆಂತರಿಕ ಮೌಲ್ಯಮಾಪನ: ಸಚಿವ ಕಿಮ್ಮನೆಗೆ ಮನವಿ

Published On :

ಶಿವಮೊಗ್ಗ: 10ನೇ ತರಗತಿ ಪರೀಕ್ಷೆಗೆ ಸಂಬಂಧಿಸಿದಂತೆ ಆಂತರಿಕ ಮೌಲ್ಯಮಾಪನ ಚಟುವಟಿಕೆಯನ್ನು 24ಕ್ಕೆ ಮಿತಿಗೊಳಿಸುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ಗೆ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಮನವಿ ಸಲ್ಲಿಸಿದೆ.
ಪ್ರಸಕ್ತ ವರ್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿ ಬದಲಾಗುತ್ತಿದ್ದು, ಶೇ.20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಚಟುವಟಿಕೆಯನ್ನು ನಿಗದಿಪಡಿಸಿದೆ. ಅದರಂತೆ ಎಲ್ಲಾ ವಿಷಯಗಳು ಸೇರಿ ಒಟ್ಟು 72 ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಮಾಡುವುದು ಕಡ್ಡಾಯವಾಗಿದೆ. ದಾಖಲೀಕರಣವನ್ನೂ ಮಾಡಬೇಕಾಗಿದೆ.
ಈ ವರ್ಷ ಪಠ್ಯಪುಸ್ತಕ ಬದಲಾಗಿದ್ದು, ಫಲಿತಾಂಶಗಳ ಸಂಖ್ಯೆಯೂ ದೊಡ್ಡದಿರುತ್ತದೆ. ವಿಜ್ಞಾನ, ಗಣಿತದಂತಹ ವಿಷಯಗಳಿವೆ. ಶೇ.80ರಷ್ಟು ಬಾಹ್ಯ ಮೌಲ್ಯಮಾಪನ ತಯಾರಿಗಿಂತ ಹೆಚ್ಚು ಸಮಯವನ್ನು ಶೇ.20 ಅಂತರಿಕ ಮೌಲ್ಯಮಾಪನ ಚಟುವಟಿಕೆಗೆ ವಿನಿಯೋಗಿಸುವಂತಾಗಿದೆ. ಆದ್ದರಿಂದ ಆಂತರಿಕ ಮೌಲ್ಯಮಾಪನ ಚಟುವಟಿಕೆಗಳನ್ನು ಪ್ರತಿ ವಿಷಯಕ್ಕೆ 6ರಂತೆ 24ಕ್ಕೆ ನಿಗದಿ ಮಾಡಿದರೆ ಶೇ.20, ಶೇ.80 ಎಂಬ ವಿಭಜಿತ ಮೌಲ್ಯಮಾಪನ ಯಶಸ್ವಿಯಾಗುತ್ತದೆ ಎಂದು ಸಹಶಿಕ್ಷಕರು ಹೇಳಿದ್ದಾರೆ. ಸಂಘದ ತಾಲೂಕು ಅಧ್ಯಕ್ಷ ಧರ್ಮಪ್ಪ ವೈ.ಎಂ., ಡಿ.ಎಚ್. ಮಂಜಪ್ಪ, ಎಂ.ಆರ್. ಮಂಜಪ್ಪ, ರಾಮು ಬಿ. ಗೋಪಾಲಕೃಷ್ಣ ಇತರರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.