ಶಿರಾಳಕೊಪ್ಪ ಹಾಸ್ಟೆಲ್ ಗೋಳು ಕೇಳೋರಾರಪ್ಪ?
ಶಿರಾಳಕೊಪ್ಪ: ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಎಸ್ಸಿ, ಎಸ್ಟಿ ಹಾಸ್ಟೆಲ್‌ನಲ್ಲಿ ಸ್ಥಳವಿಲ್ಲ ಕಾರಣ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. 127 ವರ್ಷದ ಈ ಶಾಲೆ ಕಟ್ಟಡ ಹಳೆಯದಾಗಿ ಶಿಥಿಲಾವಸ್ಥೆಯಲ್ಲಿದೆ. ಇಲ್ಲಿಯ ಶಿಕ್ಷಕಿಯರ ವಿಶೇಷ ಮುತುವರ್ಜಿಯಿಂದಾಗಿ ಈ ಶಾಲೆಗೆ ಸೊರಬ ತಾಲೂಕುಗಳಿಂದಲೂ ಮಕ್ಕಳು ಬರುತ್ತಾರೆ.
ಶಾಲೆಯಲ್ಲಿ ಸುಮಾರು 200 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶೇ.90ರಷ್ಟು ಮಕ್ಕಳು ಹಿಂದುಳಿದ ವರ್ಗಕ್ಕೆ ಸೇರಿದವರು. ಸಾಕಷ್ಟು ಮಕ್ಕಳು ಹಾಸ್ಟೆಲ್‌ನಲ್ಲಿದ್ದು, ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಇರುವ ಒಂದೇ ಹಾಸ್ಟೆಲ್‌ನಲ್ಲಿ ಈಗ ಖಾಲಿ ಇರುವ ಸೀಟುಗಳು 15 ಮಾತ್ರ ಎಂದು ವಾರ್ಡನ್ ಹೇಳುತ್ತಾರೆ. ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಇನ್ನೂ ಒಂದು ಕಾರಣವಿದೆ. ಅದೆಂದರೆ ಶಾಲೆ ಪಟ್ಟಣದ ಮಧ್ಯೆ ಇದೆ, ಹಾಗೆ ಹಾಸ್ಟೆಲ್ ಕೂಡಾ ಶಾಲೆ ಕೂಗಳತೆ ದೂರದಲ್ಲಿ ಇರುವುದರಿಂದ ಮಕ್ಕಳು ಈ ಹಾಸ್ಟೆಲ್ ಅವಲಂಬಿಸಿದ್ದಾರೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ಹೆಣ್ಣುಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂಬುದು ಪೋಷಕರ ಒತ್ತಾಯ. ಈ ಶಾಲೆಯ ಹಿಂದೆ ನೀರು ಹೋಗುವ ಕಾಲುವೆಯಲ್ಲಿ ನೀರು ಸರಿಯಾಗಿ ಹೋಗದೇ ದುರ್ನಾತ ಬಡಿಯುತ್ತದೆ. ಅಕ್ಕಪಕ್ಕದ ಶಾಲೆ ಶೌಚಾಲಯದ ನೀರು ಹರಿದು ಬರುತ್ತಿರುವ ಕಾರಣ ಈ ಶಾಲೆಗೆ ದುರ್ನಾತ ಬರುತ್ತದೆ. ಆದರೆ ಸರ್ಕಾರಿ ಶಾಲೆಯ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

