ಕೊಳಚೆಮುಕ್ತ ತುಂಗೆ ನಿರ್ಮಾಣಕ್ಕೆ ಪ್ರಯತ್ನ
ಶಿವಮೊಗ್ಗ: ಸುಂದರ ನಗರ, ಕೊಳಚೆ ಮುಕ್ತ ತುಂಗೆ ನಿರ್ಮಾಣಕ್ಕೆ ಇನ್ನಷ್ಟು ಹಣಕಾಸು ನೆರವು ಬೇಕಿದ್ದು ಇದಕ್ಕಾಗಿ ಶ್ರಮಿಸುತ್ತೇನೆ ಎಂದು ಸಂಸದ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಈ ಸಂಬಂಧ ಕೇಂದ್ರ ಸರ್ಕಾರದ ಜೊತೆಗೆ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಅಧಿಕಾರಿಗಳು ಇಚ್ಛಾಶಕ್ತಿ ಹೊಂದಬೇಕು ಎಂದ ಅವರು ಸದ್ಯವೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸೋಮವಾರ ಬೆಳಿಗ್ಗೆ ತುಂಗಾ ನದಿ ತಡೆಗೋಡೆ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3500 ಮೀಟರ್ ಉದ್ದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಶೇ.60ರಷ್ಟು ಕೆಲಸವಾಗಿದೆ. ಮತ್ತೂರು ಬಳಿ 1 ಸಾವಿರ ಮೀಟರ್ ಉದ್ದದ ಕಾಮಗಾರಿಯಲ್ಲಿ ಸುಮಾರು 500 ಮೀಟರ್ನಷ್ಟು ಕೆಲಸ ಮುಗಿದಿದೆ. ಗಟ್ಟಿ ಬಂಡೆ ಬಂದಿರುವ ಕಾರಣ 500 ಮೀಟರ್ ಕಾಮಗಾರಿ ಕೆಲಸ ಬಾಕಿ ಇದೆ. ಶೀಘ್ರವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ ಎಂದು ಹೇಳಿದರು. ನಗರದ ತುಂಗಾ ನದಿ ತಡೆಗೋಡೆ ಕಾಮಗಾರಿ ತಡೆಗೋಡೆಗಷ್ಟೆ ಸೀಮಿತವಾಗದೆ ಉದ್ದೇಶಿತ ವಾಕಿಂಗ್ಪಾತ್ ಹಾಗೂ ಸುಂದರ ಪರಿಸರ ಮತ್ತು ನಿರ್ಮಲ ತುಂಗಾ ನದಿಯಾಗಿ ಆದಷ್ಟು ಬೇಗ ಪೂರ್ಣಗೊಂಡು ಯೋಜನೆಯ ಸಂಪೂರ್ಣ ಉಪಯೋಗವಾಗಬೇಕು ಎಂದು ಆಶಿಸಿದರು. ತಡೆಗೋಡೆ ಕಾಮಗಾರಿ ಪೂರ್ಣಗೊಂಡ ನಂತರ ವಾಕ್ಪಾತ್ ನಿರ್ಮಿಸಲಾಗುವುದು. ಎಂದು ಅಭಿಪ್ರಾಯ ಪಟ್ಟರು. ಮಾಜಿ ಸಂಸದ ಬಿ.ವೈ.ರಾಘವೇಂದ್ರ, ಮುಖಂಡ ಎಸ್.ರುದ್ರೇಗೌಡ, ಜ್ಯೋತಿಪ್ರಕಾಶ, ಹೊನ್ನಪ್ಪ, ಅ.ನಾ.ವಿಜಯೇಂದ್ರ, ಪಾಲಿಕೆ ಆಯುಕ್ತ ಎಂ.ಕರಭೀಮಣ್ಣನವರ್ ಇದ್ದರು.
ಹೊರವರ್ತುಲ ರಸ್ತೆ
ಶಿವಮೊಗ್ಗ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಹಿಂದೆಯೇ ರಿಂಗ್ ರೋಡ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಪೊನ್ನುರಾಜ್ ಕ್ರಮ ಕೈಗೊಂಡಿದ್ದರು. ಕಾರಣಾಂತರದಿಂದ ಅದು ನೆನೆಗುದಿಗೆ ಬಿದ್ದಿತ್ತು ಎಂದು ಯಡಿಯೂರಪ್ಪ ತಿಳಿಸಿದರು. ಈ ಹಿಂದೆ ರೈತರು ಭೂಮಿ ಕೊಡಲು ಮುಂದೆ ಬಂದಿದ್ದರು. ಮತ್ತೊಮ್ಮೆ ಅವರೊಂದಿಗೆ ಸಭೆ ನಡೆಸುತ್ತೇನೆ, ರಿಂಗ್ರೋಡ್ ಆದಲ್ಲಿ ರೈತರ ಭೂಮಿಗೆ ಹೆಚ್ಚಿನ ಬೆಲೆ ಬರುತ್ತದೆ. ಅವರ ಮನಮೂಲಿಸಿ ಭೂಮಿ ಪಡೆದುಕೊಳ್ಳಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

