ಮತ ಜಾಗೃತಿಗಾಗಿ ಮೇಣದ ಬತ್ತಿ ಜಾಥಾ
ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 'ವಿದ್ಯಾರ್ಥಿ' ಸಂಘಟನೆಯು ನಗರದಲ್ಲಿ ಮತಜಾಗೃತಿಗಾಗಿ ಮೇಣದ ಬತ್ತಿ ಜಾಥಾ ಆಯೋಜಿಸಿತ್ತು. ಬಸ್ಸ್ಟಾಂಡ್ ಆವರಣದಿಂದ ಕೋರ್ಟ್ ವೃತ್ತದ ವರೆಗೆ ಮತದಾರರಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ಕೆ.ಸಿ. ರಾಜಾವತ್, ಮತದಾರರಲ್ಲಿ ಜಾಗೃತಿ, ಉತ್ತಮ ವ್ಯಕ್ತಿಯ ಆಯ್ಕೆ, ಹಣ-ಹೆಂಡದ ದಾಸರಾಗದೇ, ಭ್ರಷ್ಟಾಚಾರಿಗಳಿಗೆ ಮೆಟ್ಟಿಲಾಗದೇ, ಯುವಶಕ್ತಿ ದೇಶದ ಆಸ್ತಿ ಎಂಬಂತೆ ಯುವಕರಲ್ಲಿ ಜಾಗೃತರಾಗಬೇಕು ಎಂದರು.
ಉತ್ತಮರನ್ನು ಆಯ್ಕೆ ಮಾಡಿ: ದೇಶಕ್ಕೆ ಉತ್ತಮ ವ್ಯಕ್ತಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಉತ್ತಮ ವ್ಯಕ್ತಿಯ ಆಯ್ಕೆ ನಮ್ಮ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರು ಮತದಾನ ಮಾಡಬೇಕು. ದೇಶಕ್ಕಾಗಿ ದುಡಿಯುತ್ತೇನೆ ಎಂಬ ವ್ಯಕ್ತಿತ್ವ ಉಳ್ಳ ವ್ಯಕ್ತಿಯನ್ನು ಆರಿಸಬೇಕೆಂದು ಕರೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಹೂವಯ್ಯ ಗೌಡ, ರಾಷ್ಟ್ರದ ರಕ್ಷಣೆಯ ಜವಾಬ್ದಾರಿ ಯುವಕರ ಮೇಲಿದೆ. ಮತದಾನ ಮಾಡುವಾಗ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿ. ಭ್ರಷ್ಟಾಚಾರಿಗಳಿಗಾಗಲೀ, ಜಾತಿವಾದಿಗಳಿಗಾಗಲೀ ಪ್ರೋತ್ಸಾಹಿಸದೇ, ಶಿಕ್ಷಣದ ಮಹತ್ವ ಅರಿತವನಿಗೆ, ದೇಶವನ್ನು ಬಲಿಷ್ಠಗೊಳಿಸುವ ಶಕ್ತಿಯುಳ್ಳ ವ್ಯಕ್ತಿಯನ್ನು ಆರಿಸಿ ಮತದಾನ ಮಾಡುವಂತೆ ಹೇಳಿದರು.
ಸಂಘಟನೆ ಉಪಾಧ್ಯಕ್ಷ ಡಿ.ಎಸ್. ಸುನೀಲ್, ಪ್ರಧಾನ ಕಾರ್ಯದರ್ಶಿ ಎಸ್. ಅನಿಲ್, ಪದಾಧಿಕಾರಿಗಳಾದ ಸಿ.ವಿ. ವಸಂತ್, ಮೋಹನ್, ಕಾರ್ತಿಕ್, ವಿನಯ್ಕುಮಾರ್ ಪಾಟೀಲ್, ಯೇಜಾಸ್, ಹರೀಶ್ ಮತ್ತಿತರರು ಪಾಲ್ಗೊಂಡಿದ್ದರು.
'ಸುರಕ್ಷತೆ ಅರಿವಿಗೆ ಉಪನ್ಯಾಸ, ಪ್ರಾತ್ಯಕ್ಷತೆ'
ಜೋಗ್ಫಾಲ್ಸ್: ಪ್ರಸ್ತುತ ಸುರಕ್ಷತೆಯ ಅರಿವು ಮೂಡಿಸಲು ಅನೇಕ ಗಣ್ಯರಿಂದ ಉಪನ್ಯಾಸಗಳನ್ನು ಹಾಗೂ ಪ್ರಾತ್ಯಕ್ಷತೆಗಳನ್ನು ಏರ್ಪಡಿಸುವ ಮೂಲಕ ಉದ್ಯೋಗಿಗಳ ಮನ ಸೆಳೆಯಲಾಗುತ್ತಿದೆ. ಇದನ್ನು ತಪ್ಪದೆ ಪಾಲಿಸಿ ಸುರಕ್ಷತೆಯ ಜೀವನ ನಡೆಸುವಂತೆ ಮುಖ್ಯ ಅಭಿಯಂತರರಾದ ಜಿ. ಹನುಮಂತಪ್ಪ ಕರೆ ನೀಡಿದರು.
ಶರಾವತಿ ಯೋಜನಾ ಪ್ರದೇಶದಲ್ಲಿ ಸುರಕ್ಷತಾ ಸಪ್ತಾಹದ ಅಂಗವಾಗಿ ಉದ್ಯೋಗಿಗಳಿಂದ ಏರ್ಪಡಿಸಲಾದ ಸೇಪ್ಟಿ ಪುರಾಣ ಕಥಾ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಟನೆಯಿಂದ ಉದ್ಯೋಗಿಗಳ ಮನದ ಅಂತರಾಳ ಮುಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಈ ಬಾರಿ ಉದ್ಯೋಗಿಗಳು ಬರೆದ ಅಭಿನಯ ಕಥಾ ಪ್ರವಚನದ ನಾಟಕ ಅಭಿನಯವನ್ನು ಮಾಡುವ ಮೂಲಕ ಸುರಕ್ಷತೆ ಜಾಗ್ರತೆ ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ ಎಂದರು.
ಸೇಪ್ಟಿ ಪುರಾಣ ಕಥಾ ಪ್ರವಚನವನ್ನು ಉದಯ ನಾಯ್ಕ ರಚಿಸಿದ್ದು, ತಬಲ ಸಾಥ್ ನೀಡಿದರು. ಸ್ವಾಮೀಜಿ ಪಾತ್ರವನ್ನು ಶಿವನಂದ ಯಾಜಿ ಅಭಿನಯಿಸಿದರು, ಹಿನ್ನೆಲೆ ಧ್ವನಿ ಎಚ್.ಎಂ. ರಮೇಶ್, ಸೌಂಡ್ ಸಾಥ್ ಶಿವಪ್ರಸಾದ್, ದೀಪು ಸಹಕಾರ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

