ಆದಿವಾಸಿಗಳಿಗೆ ತಾತ್ಕಾಲಿಕ ಪುನರ್ವಸತಿ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ. 21
ನಾಗರಿಕ ಸೌಲಭ್ಯದಿಂದ ವಂಚಿತರಾಗಿ ಕಾಡಿನಂಚಿನಲ್ಲಿ ಜೀತಕ್ಕಿದ್ದು ಆಶ್ರಯ ಅರಸಿ ಬಂದಿದ್ದ ಆದಿವಾಸಿಗಳಿಗೆ ಜಿಲ್ಲಾಡಳಿತ ಭದ್ರಾವತಿಯಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದೆ.
ಸಿರಿಗೆರೆ ಸಮೀಪದ ಒಡೆಯರ ಕೊಪ್ಪ ಕ್ಯಾಂಪ್, ಶಿಕಾರಿಪುರ ತಾಲೂಕಿನ ಕಟ್ಟಿಗೆಹಳ್ಳ, ಚಾರ್ಡಿ ಮತ್ತು ಬಿಜೋಳಿ ಸಮೀಪ ಬಿಲ್ಲು, ಸೋಲಿಗ, ಇರುಳ ಜನಾಂಗಕ್ಕೆ ಸೇರಿದ ಆದಿವಾಸಿಗಳು ವಾಸಿಸುತ್ತಿದ್ದಾರೆ. ಇವರಿಗೆ ನೆಡುತೋಪುಗಳನ್ನು ಕಟಾವು ಮಾಡಿ ಬಂದ ಹಣವೇ ಜೀವನಾಧಾರವಾಗಿದ್ದು, ಗುರುವಾರ ಆಶ್ರಯ ಬಯಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಠಿಕಾಣಿ ಹೂಡಿದ್ದರು. ಈ ಆದಿವಾಸಿಗಳನ್ನು ಮೈಸೂರು ವಿಭಾಗದ ಮಾನವ ಹಕ್ಕುಗಳ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಬಳಿ ಕರೆತಂದು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೆ, ಸೌಲಭ್ಯ ಕಲ್ಪಿಸುವಂತೆ ಪಟ್ಟುಹಿಡಿದಿದ್ದರು.
ನಂತರ ಎಚ್ಚೆತ್ತ ಜಿಲ್ಲಾಡಳಿತ ರಾತ್ರಿ 12 ಮಹಿಳೆಯರು, 15 ಮಕ್ಕಳು ಹಾಗೂ ಪುರುಷರನ್ನೊಳ್ಳಗೊಂಡ ಆದಿವಾಸಿಗಳಿಗೆ ಪ್ರಥಮಿಕ ಚಿಕಿತ್ಸೆ ಕೊಡಿಸಿದರು. ಹಾಗೆಯೇ ಭದ್ರಾವತಿಯ ಹುತ್ತಾ ಕಾಲೊನಿಯಲ್ಲಿರುವ ನಿರಾಶ್ರಿತರ ಅಲ್ಪಾವಧಿ ತಂಗುದಾಣದಲ್ಲಿ ವಾಸಿಸಲು ಅವಕಾಶ ಕಲ್ಪಿಸಿದರು.
ರಕ್ಷಣೆ: ಭದ್ರಾವತಿಯ ನಿರಾಶ್ರಿತರ ತಂಗುದಾಣದಲ್ಲಿ ಆರು ತಿಂಗಳವರೆಗೆ ವಾಸಿಸಬಹುದಾಗಿದೆ. ನಾವು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಲಕ್ಷ್ಮಿಕಾಂತಮ್ಮ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿಯವರು ಪರಿಶೀಲನೆ ನಡೆಸಿ ಪುನರ್ವಸತಿ ಕಲ್ಪಿಸಲು ಸೂಚಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

