ಶಿವಮೊಗ್ಗ

ಚುನಾವಣಾ ಪೂರ್ವ ಸಿದ್ದತೆ: ಡಿಸಿ ಪರಿಶೀಲನೆ

Published On :

ಶಿಕಾರಿಪುರ: ಚುನಾವಣಾ ಪೂರ್ವ ಸಿದ್ದತೆಯ ಬಗ್ಗೆ ತಾಲೂಕು ಆಡಳಿತ ಕೈಗೊಂಡಿರುವ ಕ್ರಮಗಳನ್ನು ಖುದ್ದು ವೀಕ್ಷಿಸಲು ಶುಕ್ರವಾರ ಇಲ್ಲಿನ ತಾಲೂಕು ಕಚೇರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ವಿಫುಲ್ ಅವರಿಗೆ ಸಾಮಾನ್ಯ ಜನತೆ ಪಹಣಿ ಮತ್ತಿತರ ಸಮಸ್ಯೆ ಬಗ್ಗೆ, ಹಂಗಾಮಿ ನೌಕರರು ವೇತನವಿಲ್ಲದ ಬಗ್ಗೆ ದೂರುಗಳನ್ನು ನೀಡಿ ಸಮಸ್ಯೆಯ ಪರಿಹಾರಕ್ಕೆ ಆಗ್ರಹಿಸಿದರು.
 ಮಧ್ಯಾಹ್ನದ ವೇಳೆಗೆ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಕೈಗೊಂಡಿರುವ ಕ್ರಮದ ಬಗ್ಗೆ ವೀಕ್ಷಣೆಗೆ ನಿಯಂತ್ರಣ ಕಚೇರಿಗೆ ತೆರಳಿ ಇದುವರೆಗೂ ಬಂದ ದೂರುಗಳ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ದೂರು ದಾಖಲಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವೇತನ ನೀಡಲು ಆಗ್ರಹ: ಈ ಸಂದರ್ಬದಲ್ಲಿ ಅಭಿಲೇಖಾಲಯದಲ್ಲಿ ಕಳೆದ 6 ತಿಂಗಳಿನಿಂದ ಸತತವಾಗಿ ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಇದುವರೆಗೂ ತಿಂಗಳ ವೇತನವನ್ನು ನೀಡದ ಅಧಿಕಾರಿಗಳ ವರ್ತನೆ ಬಗ್ಗೆ ರೊಚ್ಚಿಗೆದ್ದ ಹಂಗಾಮಿ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳ ಬಳಿ ತಮ್ಮ ನೋವನ್ನು ತೋಡಿಕೊಂಡರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಪೂರ್ಣ ಮಾಹಿತಿ ಪಡೆದು ಅಭಿಲೇಖಾಯದಲ್ಲಿ ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಅನುದಾನ ಬಿಡುಗಡೆಯಾಗಿದ್ದು ವೇತನ ನೀಡಲು ಸಮಸ್ಯೆ ಏಕೆ ಎಂದು ತಹಶೀಲ್ದಾರ್ ಜಗದೀಶ್ ಅವರನ್ನು ಪ್ರಶ್ನಿಸಿ, ವೇತನವನ್ನು ಶೀಘ್ರ ವಿತರಿಸುವಂತೆ ಆದೇಶಿಸಿದರು.  ಸಹಾಯಕ ಚುನಾವಣಾಧಿಕಾರಿ ಗೋಪಾಲ್,ತಾ.ಪಂ ಇಒ ಡಾ.ಚಂದ್ರಶೇಖರ್,ಬಿಇಒ ಸಿದ್ದಲಿಂಗಪ್ಪ,ಕಂದಾಯ ಅಧಿಕಾರಿ ಮಂಜುನಾಥ್‌ನಾಗರಾಜ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.