ತುಮಕೂರು

ಮೀನಗೊಂದಿ ಮಲ್ಲೇರಂಗನಾಥಸ್ವಾಮಿ ಬ್ರಹ್ಮರಥೋತ್ಸವ

Published On :

ಮಧುಗಿರಿ: ಇದೇ 24 ರಿಂದ  ಪ್ರಾರಂಭವಾಗಿ ಏ 28 ರವರೆಗೆ  ಶ್ರೀಮೀನಗೊಂದಿ ಮಲ್ಲೇರಂಗನಾಥಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಧರ್ಮಕರ್ತ ಎಂ.ದೇವದಾಸ್ ತಿಳಿಸಿದ್ದಾರೆ. ಏ.24 ರ ಬುಧವಾರ ಅಂಕುರಾರ್ಪಣ, ಧ್ವಜಾರೋಹಣ, 25 ರಂದು ಕಲ್ಯಾಣೋತ್ಸವ ಗರುಡೋತ್ಸವ, 26 ರಂದು ಸ್ವಾತಿ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ, ಬ್ರಾಹ್ಮಣರ ಸಮಾರಾಧನೆ, 27 ಕ್ಕೆ ಉತ್ಸವ, ಜಲಕ್ರೀಡೆ, ಮೃಗಯಾತ್ರೆ, 28ರ ಭಾನುವಾರ ವಸಂತೋತ್ಸವ ನಡೆಯಲಿದೆ.   
ರಂಗನಾಥಸ್ವಾಮಿ ಬ್ರಹ್ಮರಥೋತ್ಸವ
ಮಾಗಡಿ: ಭಕ್ತ ಜನಸಾಗರದ ನಡುವೆ ತಿರುಮಲೆ ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು. ಮುಜರಾಯಿ ಅಧಿಕಾರಿಯೂ ಆಗಿರುವ ತಹಸೀಲ್ದಾರ್  ಡಾ.ಬಿ.ಆರ್. ಹರೀಶ್ ನಾಯಕ್ ಬ್ರಹ್ಮರಥಕ್ಕೆ  ಪ್ರಥಮ ಪೂಜೆ ಸಲ್ಲಿಸಿದರು. ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಎ.ಮಂಜು, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ಶ್ರೀರಂಗ ಸೇವಾ ಟ್ರಸ್ಟ್  ಅಧ್ಯಕ್ಷ ಟಿ.ಎಸ್. ಸತೀಶ್, ವೆಂಕಟೇಶ್  ಅಯ್ಯಂಗಾರ್, ರಂಗನಾಥ್, ಬಿ.ಎಚ್.ಮಹೇಶಯ್ಯ, ಕೆ.ರಮೇಶ್ ಸೇರಿದಂತೆ ರಾಜ್ಯ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರೊಡನೆ ಸೇರಿ ರಥ ಎಳೆದರು. ಬಿರು ಬಿಸಿಲಿನ ನಡುವೆಯೂ ಭಕ್ತಜನಸಾಗರ ರಥಕ್ಕೆ ಬಾಳೆಹಣ್ಣು ಧವನ ಎಸೆದು, ದೇವರ ದರ್ಶನ ಮಾಡಿದರು. ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣ, ಗುಡುಗು ಸಿಡಿಲಿನ  ಅರ್ಭಟ ನಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.