ಪರಮೇಶ್ವರ್ ಪರ ಜಯಮಾಲ ರೋಡ್ ಶೋ
ಕ.ಪ್ರ.ವಾರ್ತೆ ಮಧುಗಿರಿ ಏ.29
ರಾಜ್ಯ ಕೆಪಿಸಿಸಿ ಅಧ್ಯಕ್ಷ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ. ಪರಮೇಶ್ವರ್ ನಿಮ್ಮ ಮನೆ ಮಗ. ಸರಳ, ಸಜ್ಜನಿಕೆ, ಶುದ್ಧ ಹಸ್ತ ಪ್ರಗತಿಶೀಲ ರಾಜಕಾರಣಿ. ಅಂತಹವರು ಗೆದ್ದು ಬಂದಾಗ ಮಾತ್ರ ರಾಜ್ಯ ಅಭಿವೃದ್ಧಿ ಹೊಂದಲು ಸಾದ್ಯ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷೆ, ಚಿತ್ರ ನಟಿ ಜಯಮಾಲ ಹೇಳಿದರು.
ಶನಿವಾರ ಮಧುಗಿರಿ ತಾಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯಲ್ಲಿ ಡಾ.ಜಿ.ಪರಮೇಶ್ವರ್ ಅವರ ಪರವಾಗಿ ಅದ್ಧೂರಿ ರೋಡ್ ಶೋ ಮೂಲಕ ಮತ ಯಾಚಿಸಿ ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡಿದರು.
ಡಾ.ಜಿ.ಪರಮೇಶ್ವರ ಪ್ರಮಾಣಿಕ ರಾಜಕಾರಣಿ ಎಂದ ಅವರು, ಅತ್ಯಧಿಕ ಮತ ನೀಡಿ ಗೆಲ್ಲಿಸಿ ಕೊಳ್ಳುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಚಿತ್ರ ನಟ ಶಶಿಕುಮಾರ್ ಪರಮೇಶ್ವರ್ ಒಬ್ಬ ವ್ಯಕ್ತಿ ಅಲ್ಲ, ಶಕ್ತಿ. ರಾಜ್ಯವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯುವ ದೂರ ದೃಷ್ಟಿಯುಳ್ಳ ವ್ಯಕ್ತಿ ಎಂದ ರು.
ಕಾಂಗ್ರೆಸ್ ಗಾಳಿ: ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಎದ್ದಿದ್ದು ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ನಿಮ್ಮ ಆಶೀರ್ವಾದದಿಂದ ಪರಮೇಶ್ವರ್ ಈ ರಾಜ್ಯದ ಸಿಎಂ ಆಗುವುದು ಕೂಡ ಗ್ಯಾರಂಟಿ. ಆದ ಕಾರಣ ಕೊರಟಗೆರೆ ಕ್ಷೇತ್ರದ ಜನತೆ ಹಿಂದಿನ ಸಲ 12 ಸಾವಿರ ಮತ ಕೊಟ್ಟು ಗೆಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದೀರಾ, ಈ ಸಲ ಅದಕ್ಕೂ ಮೀರಿ ಅತ್ಯಧಿಕ ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು.
ಬಿಜೆಪಿ ಈ ರಾಜ್ಯ ಕಂಡ ಅತಿ ಭ್ರಷ್ಟ ಸರ್ಕಾರ ಎಂದು ಗುಡುಗಿದ ಶಶಿಕುಮಾರ್ ಕರ್ನಾಟಕದ ಜನರನ್ನು ಬಲಿ ಪಶು ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ. ಅವರು ನೀಡಿದ ಭರವಸೆ ಒಂದು ಈಡೇರಲಿಲ್ಲ. ಅವರನ್ನು ತಿರಸ್ಕರಿಸಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದರು. ಬ್ಯಾಲ್ಯ ಗ್ರಾ.ಪಂ ಉಪಾಧ್ಯಕ್ಷ ಸಿ.ಭೈರಣ್ಣ,ಅಧ್ಯಕ್ಷೆ ಸರಿತಾ, ಉಪಾಧ್ಯಕ್ಷೆ ಸಿದ್ದಗಂಗಾಬಿಕೆ ಸುಬ್ಬರಾಯಪ್ಪ, ಚಿತ್ರ ನಿರ್ಮಾಪಕ ಮುರುಳೀಧರ ಹಾಲಪ್ಪ, ಕೊಡಗದಾಲ ಪ್ರಕಾಶ್, ರಮಾಬಾಯಿ, ಸಂಕಾಪುರ ಜಯರಾಮ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

