ತುಮಕೂರು

ರಾಜ್ಯದ ಬಗ್ಗೆ ಕೈಗೆ ಮಾತನಾಡುವ ನೈತಿಕ ಹಕ್ಕಿಲ್ಲ

Published On :

ಕ.ಪ್ರ.ವಾರ್ತೆ   ಹುಳಿಯಾರು   ಏ. 30
ಪ್ರಸ್ತುತದಲ್ಲಿ ಕೇಂದ್ರ ಸರ್ಕಾರ 2 ಜಿ, ಕಲ್ಲಿದ್ದಲು, ಹೀಗೆ ಹಗರಣಗಳ ಸುಳಿಯಲ್ಲಿ ಮುಳುಗಿದ್ದು ಕಾಂಗ್ರೆಸ್  ನಾಯಕರು  ರಾಷ್ಟ್ರದ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ. ರಾಹುಲ್ ಗಾಂಧಿ, ಸೋನಿಯಗಾಂಧಿ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರು  ಉತ್ತಮ ಆಡಳಿತ ನೀಡಿರುವ ಕರ್ನಾಟಕದ ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ, ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗುಡುಗಿದರು.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಕಿರಣ್ಕುಮಾರ್ ಪರ ಚುನಾವಣಾ ಪ್ರಚಾರಕ್ಕಾಗಿ ಹುಳಿಯಾರಿಗೆ ಆಗಮಿಸಿದ್ದ ಅವರು ಕಾರ್ಯಕರ್ತರ ಬೃಹತ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ತನ್ನ ಐದು ವರ್ಷದ ಅವಧಿಯಲ್ಲಿ ಸಂಪೂರ್ಣ ಬದಲಾವಣೆ ತಂದಿದ್ದು, ರಾಜ್ಯಾಂದ್ಯತ ಕೃಷಿ ಬಜೆಟ್, ಸುವರ್ಣ ಗ್ರಾಮ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಭೂಚೇತನ ಯೋಜನೆ ಸೇರಿದಂತೆ ನಮ್ಮ ಗ್ರಾಮ-ನಮ್ಮ ರಸ್ತೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಬಂದಿದ್ದು, ಕೃಷಿ, ಕೈಗಾರಿಕೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಅಭಿವೃದ್ಧಿಗಾಗಿ ಮುಂದಾಗಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಬಿಜೆಪಿಯ ಸಾಧನೆಯಾಗಿದೆ. ಅಲ್ಲದೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂಬತ್ತು ತಿಂಗಳು ಕಳೆಯುವಷ್ಟರಲ್ಲೇ ಬಿದ್ದು ಹೋಗುತ್ತಾರೆಂದು ಹಲವರು ನುಡಿದಿದ್ದರು. ಆದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಆಡಳಿತ ನೀಡುತ್ತಾ ಇಲ್ಲಿಯವರೆಗೆ ಸಾಗಿದ್ದೇನೆ. ಇದು ತಮಗೆ ತೃಪ್ತಿ ತಂದಿದೆ ಎಂದರು.
ಕೆಜೆಪಿಗೆ 3-4 ಸ್ಥಾನ: ಕೆಜೆಪಿಯ ಯಡಿಯೂರಪ್ಪ ಚುನಾವಣೆಗೂ ಮುಂಚೆಯೇ ಈ ಬಾರಿ ಅತಂತ್ರ ವಿಧಾನಸಭೆ ಎಂದಿದ್ದು, ಕೆಜೆಪಿ ವ್ಯಕ್ತಿಗತವಾಗಿ ಮೂರರಿಂದ ನಾಲ್ಕು ಸ್ಥಾನಗಳಿಸಬಹುದು ಎಂದರು. ಧನಂಜಯ್ ಕುಮಾರ್ರಂತವರು ಹಗಲಿನಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರುಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಸಂಜೆ ಯಡಿಯೂರಪ್ಪ ಕ್ಷಮೆಯಾಚಿಸುವುದು ವಿಪರ್ಯಾಸದ ಸಂಗತಿಯೆಂದು ಲೇವಡಿ ಮಾಡಿದರು.  
ಇವರ್ಯಾರು ಮುಖ್ಯಮಂತ್ರಿ ಮಾಡಲಿಕ್ಕೆ: 1967ರ ಜನಸಂಘದಲ್ಲಿ ಆಯ್ಕೆಯಾದ ನಾಲ್ಕು ಮಂದಿಯಲ್ಲಿ ಒಬ್ಬರು ನಮ್ಮ ಚಿಕ್ಕಪ್ಪ ಆಗಿದ್ದರು, 1983ರಲ್ಲಿ ಆಯ್ಕೆಯಾದ 18ಮಂದಿಯಲ್ಲಿ ನಾವಿದ್ದೆವು, ಜನಸಂಘದಿಂದಲೂ ನಮ್ಮ ಕುಟುಂಬ  ಗುರುತಿಸಿಕೊಂಡಿದ್ದು ಅಂದು ಯಡಿಯೂರಪ್ಪ ಎಲ್ಲಿದ್ದರು ಎಂದು ಹರಿಹಾಯ್ದ ಅವರು, ಇವರ್ಯಾರಿ ನನ್ನ ಮುಖ್ಯಮಂತ್ರಿ ಮಾಡುವುದಕ್ಕೆ ಎಂದು ಪ್ರಶ್ನಿಸಿದರು. ಕೆಜೆಪಿ ಗಂಟು ಮೂಟೆ ಕಟ್ಟುವ ಸಮಯ ಬಂದಿದ್ದು,ಇವರ ಭವಿಷ್ಯ ಇನ್ನು ಐದೇ ದಿನದಲ್ಲಿ ಗೊತ್ತಾಗಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಗಳಿಸಲಿದೆ ಎಂಬ ಸಮೀಕ್ಷೆ ಸತ್ಯಕ್ಕೆ ದೂರವಾಗಿದೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವುದು ನಿಶ್ಚಿತ, ಈ ಹಿನ್ನೆಲೆಯಲ್ಲಿ ಕಿರಣ್ಕುಮಾರ್ ಅವರನ್ನು ಗೆಲ್ಲಿಸಿ ವಿಧಾನ ಸಭೆ ಕಳುಹಿಸಿ, ಕಿರಣ್ ಅವರಿಗೆ ಸಚಿವ ಸ್ಥಾನ ಕಟ್ಟಿಟ್ಟ ಬುತ್ತಿ ಎಂದರು.
ಸಭೆಯಲ್ಲಿ ಚಿ.ನಾ.ಹಳ್ಳಿ ಕ್ಷೇತ್ರದ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್, ಜಿ.ಪಂ.ಸದಸ್ಯ ಪಂಚಾಕ್ಷರಿ ಮಾತನಾಡಿದರು. ಮಹಿಳಾ ಮೋರ್ಚಾದ ಕವಿತಾ ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಜಗದೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ತಾ.ಪಂ.ಸದಸ್ಯ ಕೆಂಕೆರೆ ನವೀನ್, ಮುಖಂಡರಾದ ಬುಕ್ಕಾಪಟ್ಟಣ ಬೊಮ್ಮಣ್ಣ, ರಮೇಶ್ಬಾಬು ಸೇರಿದಂತೆ ಹಲವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.