ತುಮಕೂರು

ಅಂಗಡಿ ಮಳಿಗೆ ಸಕ್ರಮಗೊಳಿಸಲು ರಾಜಕೀಯ ಪಿತೂರಿ: ಆರೋಪ

Published On :

ಕ.ಪ್ರ.ವಾರ್ತೆ ಶಿರಾ ಆ. 1
ಪಟ್ಟಣದ ಪ್ರವಾಸಿ ಮಂದಿರದ ಸರ್ಕಲ್ ಸಮೀಪದಲ್ಲಿ ಅಕ್ರಮವಾಗಿ 112 ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು ಈ ಅಂಗಡಿ ಮಳಿಗೆಗಳನ್ನು ಸಕ್ರಮಗೊಳಿಸಲು ರಾಜಕೀಯ ಪಿತೂರಿ ನಡೆಯುತ್ತಿದ್ದು ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಸಕ್ರಮಗೊಳಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆಯು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಪಟ್ಟಣದ ಶ್ರೀ ವಿದ್ಯಾಗಣಪತಿ ದೇವಸ್ಥಾನದಿಂದ ಖಾಸಗಿ ಬಸ್ ನಿಲ್ದಾಣ, ಮುಖ್ಯರಸ್ತೆ, ಅಂಬೇಡ್ಕರ್ ರಸ್ತೆ ಮೂಲಕ ನಗರಸಭೆಯ ಮುಂಭಾಗದಿಂದ ತಹಸೀಲ್ದಾರ್ ಕಚೇರಿಗೆ ತೆರಳಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಕಚೇರಿಯ ಮುಂದೆ ಪ್ರತಿಭಟನೆ ನೆಡೆಸಿದರು.
ಪ್ರತಿಭಟನೆಯ ಉದ್ದೇಶವನ್ನು ಕುರಿತು ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಘವೇಂದ್ರ ಅಜೇಕರ್ ಕಳೆದ 6 ವರ್ಷಗಳಿಂದಲೂ ಈ ಅಂಗಡಿ ಮಳಿಗೆಗಳ ವಿವಾದ ನಡೆಯುತ್ತಲೆ ಇದೆ. ಸ್ಮಶಾನಕ್ಕೆಂದು ಸರ್ಕಾರ ನೀಡಿದ ಭೂಮಿಯಲ್ಲಿ ಅಕ್ರಮವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು ಈ ನಡುವೆ ರಾಜಕೀಯ ಪಿತೂರಿಗಳಿಂದ ಅಕ್ರಮವನ್ನು ಸಕ್ರಮಗೊಳಿಸಲು ತಂತ್ರಗಳು ನಡೆದಿವೆ ಎಂದು ಆರೋಪಿಸಿದರು. ರಾಜ್ಯ ಕಾರ್ಯದರ್ಶಿ ವೀರೇಶ್ ಮಾತನಾಡಿ ಅಂಗಡಿ ಮಳಿಗೆಗಳನ್ನು ಸಕ್ರಮಗೊಳಿಸುವ ಕಾರ್ಯತಂತ್ರದಲ್ಲಿ ರಾಜಕೀಯ ಪ್ರಭಾವಿ ಮುಖಂಡರ ಪಾತ್ರವೇ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ಈ ಮಳಿಗೆಗಳನ್ನು ಸಕ್ರಮಗೊಳಿಸಕೂಡದು ಎಂದರು. 112 ಅಂಗಡಿ ಮಳಿಗೆಗಳನ್ನು ಸಕ್ರಮಗೊಳಿಸಕೂಡದು ಎಂದು ಒತ್ತಾಯಿಸಿ ತಹಸೀಲ್ದಾರ್ ಕುಲಕರ್ಣಿ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು.
ಜಿಲ್ಲಾ ಸಂಚಾಲಕ ವಿಶ್ವನಾಥ್ ಆರಾಧ್ಯ, ವಿಭಾಗ ಸಂಚಾಲಕ ಮಂಜುನಾಥ್, ಉಮೇಶ್, ಚಿಕ್ಕನಹಳ್ಳಿ ಸುಬ್ಬು, ವಿಶ್ವನಾಥ್ ಸೇರಿದಂತೆ ಅನೇಕ ಪ್ರಮುಖರು ಜಾಗರಣಾ ವೇದಿಕೆಯ ಕಾರ್ಯಕರ್ತರು, ಭಗತ್ ಕ್ರಾತಿ ಸೇನೆ, ನೇತಾಜಿ ಗ್ರೂಪ್ಸ್, ಸನಾತನ ಸಂಸ್ಥೆಯ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.