ತುಮಕೂರು

ವಸತಿ ಶಾಲೆಗೆ ತಾಪಂ ಅಧ್ಯಕ್ಷೆ ದಿಢೀರ್ ಭೇಟಿ

Published On :

ಪಾವಗಡ: ಪಟ್ಟಣದ ವಸತಿ ಶಾಲೆಯೊಂದಕ್ಕೆ ದಿಢೀರ್ ಭೇಟಿ ಕೊಟ್ಟ ಜೆಡಿಎಸ್ ಹಿರಿಯ ಮುಖಂಡ ತಾಪಂ ಸದಸ್ಯ ಚಂದ್ರಶೇಖರ್ ಹಾಗೂ ತಾಪಂ ಅಧ್ಯಕ್ಷೆ ರಾಧಾ ರಾಜ್‌ಗೋಪಾಲ್ ಹಾಸ್ಟೆಲ್‌ನ ಅತಂತ್ರ ಸ್ಥಿತಿ ಕಂಡು ವಸತಿ ಶಾಲೆಯ ಪ್ರಾಂಶುಪಾಲ ಸುರೇಶ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದ ಪ್ರಸಂಗ ಗುರುವಾರ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆಯಿತು. ಇತರೆ ತಾಲೂಕಿನಿಂದ ಬಂದ ಸುಮಾರು 250 ಮಂದಿ ಬಡ ವಿದ್ಯಾರ್ಥಿಗಳು ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕೊಳೆತ ತರಕಾರಿಯಿಂದ ತಯಾರಿಸಿದ ಸಾಂಬರು, ಕೆಳದರ್ಜೆ ಅಕ್ಕಿಯಿಂದ ಮಾಡಿದ ಕಳಪೆ ಆಹಾರ ವಿತರಣೆ, ಪ್ರಾಂಶುಪಾಲರ ಕಿರುಕುಳ ಸೇರಿದಂತೆ ಸೊಳ್ಳೆ ತಿಗಣಿಗಳ ಹಾವಳಿಯಿಂದ ನಿತ್ಯ ನರಕ ಅನುಭವಿಸುತ್ತಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದರು. ವಿದ್ಯಾರ್ಥಿಗಳ ತಿಂಡಿ ವಿತರಣೆಗೆ ಗುತ್ತಿಗೆದಾರರಿಂದ ಸರಬರಾಜು ಆಗಿದ್ದ ಸುಮಾರು 90 ಕ್ವಿಂಟಾಲ್ ಗೋಧಿಯನ್ನು ಪ್ರಾಂಶುಪಾಲ ಸುರೇಶ್ ಕಾಳ ಸಂತೆಯಲ್ಲಿ ಮಾರಾಟ ಮಾಡಿಕೊಂಡಿದ್ದಾರೆ. ಇದು ತನಿಖೆ ಆಗಬೇಕು ಎಂದು ವಿದ್ಯಾರ್ಥಿಗಳ ಪೋಷಕರಾದ ತಾ.ಪಳವಳ್ಳಿ ಸುಬ್ಬರಾಜ್ ಹಾಗೂ ಐವಾರ್ಲಾಹಳ್ಳಿ ನಾಗರಾಜ್ ಎಂಬುವರ ದೂರಿನ ಮೇರೆಗೆ ಭೇಟಿ ನೀಡಿ ಮೊರಾರ್ಜಿ ವಸತಿ ಶಾಲೆಯನ್ನು ಪರಿಶೀಲಿಸಿದಾಗ ವಸತಿ ಶಾಲೆಯಲ್ಲಿನ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಅಳಲು ಮನಕರಗುವಂತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.