'ಎಲ್ಲ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಮುಖ್ಯ'
ಗುಬ್ಬಿ: ಅಧಿಕಾರ ದೊರೆತಾಗ ಕೇವಲ ಒಂದು ಸಮುದಾಯವನ್ನು ಓಲೈಸುವುದಕ್ಕಿಂತ ಎಲ್ಲಾ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗುವತ್ತ ಚಿಂತನೆ ನಡೆಸಬೇಕಂದು ತಾಲೂಕು ಗಿರಿಜನ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಚ್.ಕೆ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು. ಪಟ್ಟಣದ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘ ಮತ್ತು ಗಿರಿಜನ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಗೆ ಈಚೆಗೆ ನಿರ್ದೇಶಕರಾಗಿ ಆಯ್ಕೆಗೊಂಡ ನೌಕರರಿಗೆ ಹಮ್ಮಿಕೊಂಡಿದ್ದ ಅಭಿನಂದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬುಡಕಟ್ಟು ಸಮುದಾಯದಲ್ಲಿ ಹುಟ್ಟಿ ಉನ್ನತ ಹಂಕ್ಕೆ ಏರಿದ ಮೇಲೆ ಪ್ರತಿಯೊಬ್ಬರು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬಗಳನ್ನು ಜೊತೆಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಗೆ ನಿರ್ದೇಶಕರಾಗಿ ಆಯ್ಕೆಗೊಂಡ ನಾಯಕ ಸಮುದಾಯದ ಎನ್.ನಾಗರಾಜು, ಶಿವಕುಮಾರ್, ಶ್ರೀನಿವಾಸ್, ಕೆ.ಜಿ.ನಾಗರಾಜು, ನರಸಿಂಹಮೂರ್ತಿ ಅವರನ್ನು ಅಭಿನಂದಿಸಲಾಯಿತು. ನಾಯಕ ಸಮುದಾಯ ಯಜಮಾನ ಶಿವಣ್ಣ, ಗಿರಿಜನ ನೌಕರರ ಸಂಘದ ಅಧ್ಯಕ್ಷ ಮಂಜುರಾಜ್, ಕಾರ್ಯದರ್ಶಿ ಉಮೇಶ್, ಮಹರ್ಷಿ ವಾಲ್ಮಿಕಿ ಸಘದ ಗೌರವಾಧ್ಯಕ್ಷ ನರಸಿಂಹಮೂರ್ತಿ, ಅಧ್ಯಕ್ಷ ದೇವರಾಜು, ಉಪಾಧ್ಯಕ್ಷ ಅಣ್ಣಪ್ಪಸ್ವಾಮಿ, ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಅಡವೀಶ್, ಶಿವರಾಜು, ರಘು, ನರಸಿಂಹಮೂರ್ತಿ ಉಪಸ್ಥಿತರದ್ದರು.
ಉಚಿತ ಪುಸ್ತಕ ವಿತರಣೆ ನಾಳೆ
ಚಿಕ್ಕನಾಯಕನಹಳ್ಳಿ: ಬೆಂಗಳೂರಿನ ಗಂಗಮ್ಮ ತಬಲದ ಸಿ.ಎಸ್ಮಲ್ಲಪ್ಪ ಸೇವಾ ಸಂಸ್ಥೆಯ ವತಿಯಿಂದ ಪ್ರತಿಭಾಪುಸಕ್ರಾ ಮತ್ತು ಉಚಿತ ಪುಸ್ತಕ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಎಂ.ಚಂದ್ರಶೇಖರಯ್ಯ ತಿಳಿಸಿದ್ದಾರೆ. ಆಗಸ್ಟ್4ರಂದು ಬೆ. 11.00ಗಂಟೆಗೆ ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾಸಂಸ್ಥೆ ಅಧ್ಯಕ್ಷರಾದ ಲತಾಚಂದ್ರಶೇಖರ್ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ದೇವಾಂಗ ಸಂಘದ ಅಧ್ಯಕ್ಷರಾದ ಕೋದಂಡರಾಮಯ್ಯನವರು ನೆರವೇರಿಸಲಿದ್ದು, ಮುಖ್ಯಅತಿಥಿಗಳಾಗಿ ಸಂಘದ ಕಾರ್ಯದರ್ಶಿಯಾದ ಸಿ.ಎ.ಕುಮಾರಸ್ವಾಮಿ, ಉಪಾಧ್ಯಕ್ಷರಾದ ಬನಶಂಕರಯ್ಯ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಜನಾಂಗದ ನಿವೃತ್ತ ಶಿಕ್ಷಕರಾದ ಜಿ.ರಂಗಯ್ಯ,ಬಿ.ಕೆ.ಕಾಡಬಸವಯ್ಯ,ಬಟ್ಲೇರಿಶಂಕರಪ್ಪ, ಸಿ.ಎನ್.ಪುಟ್ಟನರಸಿಂಹಯ್ಯ,ಸಿ.ಎಸ್.ರಂಗಸ್ವಾಮಯ್ಯ, ಎಂ.ಲಿಂಗದೇವರು ಇವರುಗಳನ್ನು ಸನ್ಮಾನಿಸಲಾಗುವುದು. ಜನಾಂಗದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಅವರು ಕೋರಿದ್ದಾರೆ.
ಕ್ಯಾರಿ ಓವರ್ ಪದ್ಧತಿಗೆ ಆಗ್ರಹ
ತುಮಕೂರು: ಡಿಪ್ಲೊಮಾ ಕ್ಯಾರಿ ಓವರ್ ಪದ್ಧತಿ ವಿಚಾರದಲ್ಲಿ ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿ ಕಠಿಣ ಧೋರಣೆ ತಾಳಿದೆ ಎಂದು ಆರೋಪಿಸಿ ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು. ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಡಿಪ್ಲೊಮಾ ತಾಂತ್ರಿಕ ವಿಷಯವನ್ನು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ಶೇ. 100 ಕ್ಕೆ 80 ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಿದ್ದು, ಕನ್ನಡ ಮಾಧ್ಯಮದಿಂದ ಬರುವಂತಹ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದು ಡಿಪ್ಲೊಮಾ ಶಿಕ್ಷಣ ಮಾಡಲು ನಗರ ಪ್ರದೇಶದಲ್ಲಿರುವ ಕಾಲೇಜುಗಳಿಗೆ ಸೇರುತ್ತಿದ್ದಾರೆ. ಹೀಗಾಗಿ ಅವರಿಗೆ ಕ್ಯಾರಿ ಓವರ್ ಪದ್ಧತಿ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ನೇತೃತ್ವ ಜಿಲ್ಲಾಧ್ಯಕ್ಷ ವೈ.ಎನ್. ಹೊಸಕೋಟೆ ನಟರಾಜ್, ಸದಾನಂದಗೌಡ, ಹನುಮಂತರಾಜು, ಪುನೀತ್ಕುಮಾರ್, ಸುರೇಶ್, ಭವ್ಯ ವಹಿಸಿದ್ದರು.
ನೋಟ್ಪುಸ್ತಕ ವಿತರಣೆ
ಚಿಕ್ಕನಾಯಕನಹಳ್ಳಿ: ಮಕ್ಕಳಿಗೆ ವಿದ್ಯೆ ಕಲಿಯಲು ಪ್ರಸಕ್ತ ಸಂದರ್ಭದಲ್ಲಿ ಸವಲತ್ತುಗಳ ಲಭ್ಯತೆ ಅಪಾರವಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ಸಿ.ಎಸ್.ಪ್ರದೀಪ್ ನುಡಿದರು. ಅವರು ಹಿಂದುಳಿದ ಗ್ರಾಮೀಣ ಭಾಗದ ದಿಬ್ಬದಹಳ್ಳಿ, ಜಾಣೇಹಾರ್, ಅಜ್ಜೀಗುಡ್ಡೆ, ಕೆಂಪರಾಯನಹಟ್ಟಿ ಗ್ರಾಮದ ಶಾಲೆಗಳ 180 ಬಡಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡುತ್ತಿದ್ದರು. ಇಂದು ಗ್ರಾಮೀಣ ಭಾಗದ ಮಕ್ಕಳಿಗೆ ಬಡತನದ ಕಾರಣದಿಂದ ಶಿಕ್ಷಣ ಕುಂಠಿತವಾಗುವ ಸಾಧ್ಯತೆಗಳು ಹೆಚ್ಚಿದೆ. ಈ ನಿಟ್ಟಿನಲ್ಲಿ ರೋಟರಿ ಅಂತಹ ಬಡಮಕ್ಕಳಿಗೆ ಸಹಾಯ ಹಸ್ತ ನೀಡಲು ಶಕ್ತಿಮೀರಿ ಯತ್ನಿಸುತ್ತಿದೆ. ಇದೊಂದು ಅಲ್ಪಸಹಾಯವನ್ನು ಮಾಡುವ ಧ್ಯೇಯವಿಟ್ಟುಕೊಂಡು 2000 ಸಾವಿರ ನೋಟ್ ಪುಸ್ತಕಗಳನ್ನು ಉಚಿತವಾಗಿ ಬರಿ ಗ್ರಾಮೀಣ ಮಕ್ಕಳಿಗೇ ವಿತರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ರೋಟರಿ ಸದಸ್ಯರಾದ ಮಿಲಿಟರಿ ಶಿವಣ್ಣ, ಸ್ವಾತಿ ಶ್ರೀನಿವಾಸ್, ಉಪನ್ಯಾಸಕ ಅಶ್ವತ್ಥನಾರಾಯಣ ಮುಂತಾದವರಿದ್ದರು.
ಎಸ್ಬಿಎಂ ಕೃಷಿ ಸಾಲ ಮೇಳ
ಮಧುಗಿರಿ: ಎಸ್ಬಿಎಂ ರೈತರ ಕೃಷಿ ಚಟುವಟಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು ಕೃಷಿಕರು ಇದರ ಪ್ರಯೋಜನ ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವಂತೆ ಸಿಎಂಜಿಬಿ ಸಂಸ್ಥೆ ವ್ಯವಸ್ಥಾಪಕ ಸಿ.ಎನ್.ಶೆಂಕರ್ ಕರೆ ನೀಡಿದರು. ಮಧುಗಿರಿಯ ಮೈಸೂರು ಬ್ಯಾಂಕ್ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ ಸಾಲ ಉತ್ಸವ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಕಾಲದಲ್ಲಿ ಮಳೆ ಬೀಳದೇ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಮರುಪಾವತಿ ಆಗದಿದ್ದ ಪಕ್ಷದಲ್ಲಿ ಕಾಲ ಕಾಲಕ್ಕೆ ಬಡ್ಡಿ ಕಟ್ಟಿ ಸಾಲ ನವೀಕರಣ ಮಾಡಿಕೊಳ್ಳಿ ಎಂದರು. ಬ್ಯಾಂಕ್ ವ್ಯವಸ್ಥಾಪಕ ಎಂ.ಆರ್.ರವಿಕುಮಾರ್, ಉಪ ವ್ಯವಸ್ಥಾಪಕ ದಿಲೀಪ್, ನಾಗರಾಜು ಮತ್ತಿತರರು ಉಪಸ್ಥಿರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

