ಸುಬ್ರಾಯ ಚೊಕ್ಕಾಡಿ ಅವರಿಗೆ ಆತ್ಮೀಯ ಸನ್ಮಾನ
ಕ.ಪ್ರ.ವಾರ್ತೆ ತುಮಕೂರು ಆ. 2
ಕವಿತೆಗಳು ಅನೇಕರ ಮನಮುಟ್ಟಲು ಸಮೂಹ ಗಾಯನ ಮಾಧ್ಯಮವಾಗುತ್ತಿದೆ ಎಂದು ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಸಪ್ತಸ್ವರ ಕಲಾ ಕೇಂದ್ರ ಆಯೋಜಿಸಿದ್ದ ಕಲ್ಪತರು ನಾಡಿನಲ್ಲಿ ಕವಿತಾ ಗಾಯನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಮ್ಮ ರಚನೆಗಳನ್ನು ಸಮಾಜಕ್ಕೆ ತಲುಪಿಸುತ್ತಿರುವ ಸಂಗೀತ ಸಂಯೋಜಕರು ಹಾಗು ಗಾಯಕರ ಪ್ರಯತ್ನಗಳನ್ನು ಪ್ರಶಂಸಿದರು.
ಇದೇ ಸಂದರ್ಭದಲ್ಲಿ ಸಪ್ತಸ್ವರ ಕಲಾಕೇಂದ್ರದ ಅಂಗಸಂಸ್ಥೆಯಾದ ಭಾವಾಲಯ - ಸಾಂಸ್ಕೃತಿಕ ಬಳಗದ ಪ್ರಾರಂಭೋತ್ಸವವನ್ನು ನೆರವೇರಿಸಿ ಮಾತನಾಡಿದ ಜ್ಯೋತಿಗಣೇಶ್ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದು, ಯುವ ಜನತೆಯನ್ನು ಸಾಂಸ್ಕೃತಿಕವಾಗಿ ಬಲಾಡ್ಯಗೊಳಿಸಲು ಇಂಥ ಸಂಸ್ಥೆಗಳು ನಮಗೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸುಗಮಸಂಗೀತ ಶಿಬಿರವನ್ನು ಏರ್ಪಡಿಸಿ, 150 ಹೆಚ್ಚು ಸಂಗೀತಾಸಕ್ತರಿಗೆ ವೇದಿಕೆ ನೀಡಿದ ಕಲಾಕೇಂದ್ರ ಸಾಮಾಜಿಕ ಬದ್ಧತೆಯನ್ನು ಪ್ರಶಂಸಿದರು. ಸಂಸ್ಥೆಯ ಈ ರೀತಿಯ ಪ್ರಯತ್ನಗಳಿಗೆ ಅಗತ್ಯವಿರುವ ನೆರವು ನೀಡುವುದಾಗಿ ತಿಳಿಸಿದರು.
ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಕಾರ್ಯಕ್ರಮಗಳನ್ನು ಜಿಲ್ಲಾ ಕೇಂದ್ರಕ್ಕೆ ತಂದು, ಸುಗಮಸಂಗೀತ ಕ್ಷೇತ್ರ ತುಮಕೂರಿನಲ್ಲಿ ಬೆಳೆಯಲು ಸಹಕರಿಸುತ್ತಿರುವ ರೂಪ ಮತ್ತು ನಾಗೇಂದ್ರ ದಂಪತಿಗಳ ಚಟುವಟಿಕೆಗಳನ್ನು, ಶಿಬಿರದ ಸಂಪನ್ಮೂಲ ಕಲಾವಿದರಾದ ಉಪಾಸನಾ ಮೋಹನ್ ಶ್ಲಾಘಿಸಿದರು. ಕಳೆದ ಎರಡು ವರ್ಷಗಳಿಂದ ತುಮಕೂರು ಹಾಗು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಿರಂತರ ಶಿಬಿರಗಳು ಹಾಗು ಸಮೂಹ ಗಾಯನಕ್ಕೆ ವೇದಿಕೆಯನ್ನು ದೊರಕಿಸಿ ಅನೇಕ ಪ್ರತಿಭೆಗಳನ್ನು ಹೊರತರುತ್ತಿರುವ ತಮ್ಮ ಶಿಷ್ಯೆಯ ಕಾರ್ಯಶೀಲತೆಗೆ ಮೆಚ್ಚುಗೆ ಸೂಚಿಸಿದರು.
ಕವಿಗಳಾದ ಸುಬ್ರಾಯ ಚೊಕ್ಕಾಡಿ, ಆನಂದಕಂದ, ಡಾ. ಲಕ್ಷ್ಮೀನಾರಾಯಣಭಟ್ಟ, ತುಳಸೀತನಯ, ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಯವರ ರಚನೆಗಳಿಗೆ, ಉಪಾಸನಾ ಮೋಹನ್ ಸಂಗೀತ ಸಂಯೋಜಿಸಿದ ಗೀತೆಗಳಿಗೆ ನೂರಾರು ಶಿಬಿರಾರ್ಥಿಗಳು ದನಿಯಾದರು.
ಸಾಗರ್ ಪ್ರಸಾದ್, ಕವಿಗೀತೆಗಳಿಗೆ ನಿರ್ದೇಶಿಸಿದ ನೃತ್ಯಗಳು ಸಂದರ್ಭೋಚಿತವಾಗಿದ್ದವು. ಅಧ್ಯಕ್ಷತೆಯನ್ನು ಲಲಿತಾಚಲಂ ವಹಿಸಿದ್ದರು. ಎಂ ಬಸವಯ್ಯ ಹಾಗೂ ಶಿವಪ್ರಕಾಶ್ ಉಪಸ್ಥಿತರಿದ್ದರು. ನಾಗೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಾರಾಜ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

