ಹಳೆ ಶುಲ್ಕವನ್ನೆ ಮುಂದುವರಿಸಿ; ಎಸ್ಎಫ್ಐ
ಕ.ಪ್ರ.ವಾರ್ತೆ ತುಮಕೂರು ಆ. 2
ತುಮಕೂರು ವಿವಿಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಶುಲ್ಕ ಹೆಚ್ಚಳವಾಗಿದ್ದು ಕಳೆದ ಬಾರಿ ಇದ್ದ ಶುಲ್ಕವನ್ನೆ ಈ ಬಾರಿಯೂ ಮುಂದುವರೆಸಬೇಕೆಂದು ಒತ್ತಾಯಿಸಿ ತುಮಕೂರು ವಿಶ್ವವಿದ್ಯಾಲಯದ ಜಯರಾಮ್ ಅವರಿಗೆ ಭಾರತ ವಿದ್ಯಾರ್ಥಿ ಫೆಢರೇಷನ್ (ಎಸ್.ಎಫ್.ಐ) ಮನವಿ ಪತ್ರ ನೀಡಿತು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಲು ಬರುವ ವಿದ್ಯಾರ್ಥಿಗಳು ಬಹುತೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತಾಗುವ ನಿಟ್ಟಿನಲ್ಲಿ ತುಮಕೂರು ವಿ.ವಿ ಕಳೆದ ಬಾರಿಗಿಂತ ಈ ಬಾರಿ 32 ಸೀಟುಗಳನ್ನು ನಿಗದಿ ಮಾಡುವ ಮೂಲಕ ಬಡ, ಗ್ರಾಮೀಣ ಪ್ರದೇಶದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಒಂದು ಸಂತಸವನ್ನು ತಂದಿದೆ.
ವಿಶ್ವವಿದ್ಯಾಲಯದ ಈ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿ ಸ್ವಾಗತಿಸುತ್ತದೆ. ಆದರೆ ಅದರ ಜೊತೆಯಲ್ಲಿಯೇ ಸೀಟು ಹೆಚ್ಚಳ ಮಾಡುವ ಕ್ರಮವನ್ನು ಕೈಗೊಂಡ ವಿಶ್ವವಿದ್ಯಾನಿಲಯ ಕಳೆದ ಬಾರಿಗಿಂತ ಈ ಬಾರಿ ಶುಲ್ಕವನ್ನು ಹೆಚ್ಚಳ ಮಾಡಿರುವುದನ್ನು ಕೈಬಿಡಬೇಕು ಎಂದು ಎಸ್.ಎಫ್.ಐ ಒತ್ತಾಯಿಸಿದೆ.
ವಿಶ್ವವಿದ್ಯಾನಿಲಯದ ಶುಲ್ಕ ಹೆಚ್ಚಳದ ಕ್ರಮ ಗ್ರಾಮೀಣ ಪ್ರದೇಶದ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಷ್ಟಕರವಾಗುವುದರ ಜೊತೆಗೆ ಉನ್ನತ ಶಿಕ್ಷಣದ ಕನಸ್ಸನ್ನು ಕೈಬಿಡುವ ಆಲೋಚನೆಗೆ ದಾರಿ ಮಾಡಿಕೊಟ್ಟಂತ್ತಾಗುತ್ತದೆ. ಗ್ರಾಮೀಣ ಪ್ರದೇಶದ ಹಾಗೂ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುವ ಸಲುವಾಗಿ ಹಲವಾರು ರೀತಿಯ ಹೋರಾಟಗಳ ಮೂಲಕ ಹಲವು ನಾಡಿನ ಪ್ರಗತಿಪರ ಚಿಂತಕರ ಆಲೋಚನೆಗಳು ಹಾಗೂ ಗ್ರಾಮೀಣ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಮಾದರಿ ವಿಶ್ವವಿದ್ಯಾಲಯದ ಕನಸ್ಸನ್ನು ಹೊತ್ತಿರುವ ಹಲವರ ಕನಸುಗಳಿಗೆ ವಿರುದ್ದವಾಗಿ ನಡೆದಂತಾಗುತ್ತದೆ ಎಂದರು.
ಆದ್ದರಿಂದ ವಿಶ್ವವಿದ್ಯಾಲಯವು ಈ ಕೂಡಲೇ ಶುಲ್ಕ ಹೆಚ್ಚಳದ ಕ್ರಮವನ್ನು ಕೈಬಿಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ತುಮಕೂರು ವಿಶ್ವವಿದ್ಯಾಲಯವನ್ನು ಒತ್ತಾಯಿಸಿದೆ.
ತುಮಕೂರು ವಿಶ್ವವಿದ್ಯಾನಿಲಯವು ದ್ವಿತೀಯ ವರ್ಷದ ಎಂ.ಕಾಂ. ವಿದ್ಯಾರ್ಥಿಗಳಿಗೆ 44,500 ರು. ಗಳಿಗಿಂತ ಕಡಿಮೆ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ 2476 ರು. ಶುಲ್ಕವನ್ನು ನಿಗದಿ ಮಾಡಿದ್ದು ಆದರೆ ಖಾಸಗಿ ಕಾಲೇಜಿನಲ್ಲಿ 8476 ರು. ಗಳ ಶುಲ್ಕವನ್ನು ವಸೂಲಿ ಮಾಡುತ್ತಿದ್ದು ಇದು ವಿದ್ಯಾರ್ಥಿಗಳಿಗೆ ಈ ಶುಲ್ಕವನ್ನು ಬರಿಸಲಾಗದೆ ದಾಖಲಾತಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವನ್ನು ಸಹ ತುಮಕೂರು ವಿಶ್ವವಿದ್ಯಾನಿಲಯದ ಗಮನಕ್ಕೆ ತಂದಿದ್ದು ಈ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ ಎಂ.ಕಾಂ ವಿದ್ಯಾರ್ಥಿಗಳಿಗೆ ತುಮಕೂರು ವಿಶ್ವವಿದ್ಯಾನಿಲಯ ನಿಗದಿ ಪಡಿಸಿರುವ ಶುಲ್ಕದಂತೆ ದಾಖಲಾತಿ ನೀಡಲು ಎಸ್.ಎಫ್.ಐ ಆಗ್ರಹಿಸಿದೆ.
ನಿಯೋಗದಲ್ಲಿ ಎಸ್.ಎಫ್.ಐನ ಜಿಲ್ಲಾ ಕಾರ್ಯದರ್ಶಿ ವಿ.ಇ. ಶಿವಣ್ಣ, ಪ್ರೇಮ್ಕುಮಾರ್, ಹರೀಶ, ರಾಕೇಶ್, ಆದಿಮೂರ್ತಿ ಇದ್ದರು. ನಿಯೋಗಕ್ಕೆ ಜಯರಾಮ್ ರವರು ಕುಲಪತಿಗಳು ಬಂದ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

