ಕೊಳವೆ ಬಾವಿ ಕೊರೆಯುವ ಕಾರ್ಯಕ್ಕೆ ಚಾಲನೆ
ದೇವನಹಳ್ಳಿ: ದೇವನಹಳ್ಳಿ ಪುರಸಭಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಸುಮಾರು 66 ಲಕ್ಷ ರು. ವೆಚ್ಚದಲ್ಲಿ 12 ಕೊಳವೆ ಬಾವಿ ಕೊರೆಯುವ ಕಾರ್ಯಕ್ಕೆ ಶಾಸಕ ಪಿಳ್ಳಮುನಿಶಾಮಪ್ಪ ಅವರು ಇಲ್ಲಿನ ಶ್ರೀ ವೇಣುಗೋಪಾಲ ಸ್ವಾಮಿ ಕೆರೆಯ ಪಂಪ್ಹೌಸ್ ಬಳಿ ಶನಿವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಸರ್ಕಾರದ ಸಂಪೂರ್ಣ ಅನುದಾನವನ್ನು ಬಳಸಿಕೊಂಡು ನಿಗದಿತ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳಲಿವೆ ಎಂದರಲ್ಲದೆ ತಾವು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಅಲ್ಲದೆ ಯಾವುದೇ ಸಮಸ್ಯೆ ಇರಲಿ ಸ್ಪಂದಿಸುತ್ತಿರುವುದಾಗಿ ತಿಳಿಸಿದರು. 2012-13 ನೇ ಸಾಲಿನ ಎಸ್ಎಫ್ಸಿ ಮುಕ್ತ ನಿಧಿ ಯೋಜನೆಯಲ್ಲಿ 33 ಲಕ್ಷ ರು. ವೆಚ್ಚದಲ್ಲಿ 6 ಕೊಳವೆ ಬಾವಿ, 2012-13 ನೇಸಾಲಿನ 13 ನೇ ಹಣಕಾಸು ಯೋಜನೆಯಲ್ಲಿ 14 ಲಕ್ಷ ರು. ವೆಚ್ಚದಲ್ಲಿ ಎರಡು ಕೊಳವೆ ಬಾವಿ ಹಾಗೂ 2013-14 ನೇ ಸಾಲಿನ ಎಸ್ಎಫ್ಸಿ ಬರ ಪರಿಹಾರ ಅನುದಾನದಲ್ಲಿ 19.2 ಲಕ್ಷ ರು. ವೆಚ್ಚದಲ್ಲಿ ನಾಲ್ಕು ಕೊಳವೆ ಬಾವಿಗಳನ್ನು ತೋಡಿಸಿ ಅಗತ್ಯವಾದ ಪಂಪ್ ಮೋಟರ್ ಅಳವಡಿಸಲಾಗುತ್ತಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.
ಚಿರತೆ ದಾಳಿ
ಕುಣಿಗಲ್: ಮನೆಮುಂದೆ ಕಟ್ಟಲಾಗಿದ್ದ ಎಮ್ಮೆ ಕರುವಿನ ಮೇಲೆ ದಾಳಿ ಮಾಡಲು ಬಂದಿದ್ದ ಚಿರತೆ, ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಹುಲಿಯೂರುದುರ್ಗ ಸಮೀಪದ ಬಂಡೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಂಡೀಹಳ್ಳಿ ಗ್ರಾಮದಲ್ಲಿನ ಈಶ್ವರದೇವಾಲಯ ಅರ್ಚಕ ದಕ್ಷಿಣಾಮೂರ್ತಿ (27) ಎಂಬಾತ ಚಿರತೆ ದಾಳಿಗೆ ಒಳಗಾದವರಾಗಿದ್ದು, ದೇವಾಲಯದ ಸಮೀಪದಲ್ಲೆ ವಾಸವಿರುವ ಈತ, ಶನಿವಾರ ಬೆಳಗಿನ ಜಾವ ಐದುಗಂಟೆ ಸಮಯದಲ್ಲಿ ಮನೆ ಮುಂದೆ ಕಟ್ಟಲಾಗಿದ್ದ ಎಮ್ಮೆಕರು ಚೀರಾಡತೊಡಗಿತು. ನಾಯಿಗಳು ಬೊಗಳಲು ಪ್ರಾರಂಭಿಸಿದ್ದು, ಎಚ್ಚರಗೊಂಡು ಹೊರಬಂದು ನೋಡಿದಾಗ ಚಿರತೆ ಎಮ್ಮೆ ಕರುವಿನ ಬಳಿ ಕಾಣಿಸಿಕೊಂಡಿತು, ಕೋಲಿನಿಂದ ಚಿರತೆಯನ್ನು ಒಡಿಸಲು ಮುಂದಾದಾಗ ಚಿರತೆ ದಿಡೀರ್ ದಾಳಿ ನಡೆಸಿ, ಸಮೀಪದ ಬೆಟ್ಟದ ಕಡೆಗೆ ಪರಾರಿಯಾಯಿತು. ತೊಡೆ, ಹೊಟ್ಟೆಭಾಗದಲ್ಲಿ ಗಾಯಗೊಂಡ ದಕ್ಷಿಣಮೂರ್ತಿಯನ್ನು ಗ್ರಾಮಸ್ಥರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

