ಆದರ್ಶ ಶಾಲಾ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳ ಕೊರತೆ
ಕ.ಪ್ರ.ವಾರ್ತೆ ಪಾವಗಡ ಆ. 14
ಬೋಧಕ ಸಿಬ್ಬಂದಿ, ಪೀಠೋಪಕರಣ, ಕ್ರೀಡಾ ಸಾಮಗ್ರಿಗಳು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಆದರ್ಶ ಶಾಲೆಯ ವಿದ್ಯಾರ್ಥಿಗಳು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ಮುಖಂಡ ಕೆ.ಆರ್ ಸುರೇಶ್ ಆರೋಪಿಸಿದರು.
ಪಟ್ಟಣದ ಆದರ್ಶ ಶಾಲೆಯಲ್ಲಿ ವ್ಯಾಸಂಗ ಮಾಡುವ ನೂರಾರು ವಿದ್ಯಾರ್ಥಿಗಳ ನಿತ್ಯ ಅನುಭವಿಸುತ್ತಿರುವ ಸಮಸ್ಯೆ ಹಿನ್ನೆಲೆಯಲ್ಲಿ ಪೋಷಕರ ಮನವಿ ಮೇರೆಗೆ ಮಂಗಳವಾರ ಪಟ್ಟಣದ ಆದರ್ಶ ಶಾಲೆಗೆ ಭೇಟಿ ನೀಡಿದ ಮುಖಂಡ ಕೆ.ಆರ್ ಸುರೇಶ್ ಶಾಲೆಯ ಮುಖ್ಯೋಪಾಯರ ನಿರ್ಲಕ್ಷ್ಯ ಸೇರಿದಂತೆ ಶಾಲೆಯ ಅವ್ಯವಸ್ಥೆ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಆದರ್ಶ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 350 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಪರಿಸ್ಥಿತಿ ಕುರಿತು ವಿವರಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯು ಆದರ್ಶ ಶಾಲೆಯ ಪಕ್ಕದಲ್ಲಿಯೆ ಇದ್ದು ಕುಡಿಯುವ ನೀರಿನ ಪರದಾಟ, ಶೌಚಾಲಯ ಸಮಸ್ಯೆ, ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗೊತ್ತಿದ್ದರೂ ಭೇಟಿ ನೀಡಿ ಸಮಸ್ಯೆ ನಿವಾರಿಸುವಲ್ಲಿ ಬಿಇಒ ನಾಗರಾಜ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು. ಅಲ್ಲದೇ ಆದರ್ಶ ಶಾಲೆಯ ಮುಖ್ಯೋಪಾದ್ಯಾಯರಾದ ಧನುಂಜಯ ಎಂಬುವರು ತಾ.ಗೌಡಿಹಟ್ಟಿ ಮುಖ್ಯೋಪಾಧ್ಯಾಯ ಹಾಗೂ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸೇರಿದಂತೆ ಮೂರು ನಾಲ್ಕು ಹುದ್ದೆಗಳ ಕೆಲಸದ ಒತ್ತಡದಿಂದ ಒಂದು ದಿನವಾದರೂ ಆದರ್ಶ ಶಾಲೆಗೆ ಭೇಟಿ ಕೊಟ್ಟಿಲ್ಲ, ಅಲ್ಲದೇ ಸಮಸ್ಯೆ ನಿವಾರಿಸುವಲ್ಲಿ ಅವರು ವಿಫಲರಾಗಿದ್ದಾರೆಂದು ಆರೋಪಿಸಿದರು.
350ಮಂದಿ ವಿದ್ಯಾರ್ಥಿಗಳಿಗೆ ಬರೀ 6 ಕೊಠಡಿಗಳಿದ್ದು ಮಳೆ ಬಂದರೆ ಎಲ್ಲಾ ಕೊಠಡಿಗಳು ಸೋರುತ್ತವೆ. ಅಲ್ಲದೇ ಕುಡಿಯುವ ನೀರು ಸೇರಿದಂತೆ ವಿದ್ಯಾರ್ಥಿನಿಯರಿಗೆ ಶೌಚಾಲಗಳಿಲ್ಲ, ಶಾಲೆಯಲ್ಲಿ ಡೆಸ್ಕ್ಗಳಿಲ್ಲ,ಪಿಠೋಪಕರಣಗಳಿಲ್ಲ, ಕ್ರೀಡಾ ಸಾಮಗ್ರಿಗಳಿಲ್ಲ, ಸಗಣಿಯಿಂದ ಸಾರಿಸಿದ ನೆಲದ ಮೇಲೆ ಕುಳಿತು ವ್ಯಾಸಂಗ ಮಾಡುವ ಪರಿಸ್ಥಿತಿ ವಿದ್ಯಾರ್ಥಿಗಳು ಅನುಭವಿಸುತ್ತದ್ದಾರೆ. ಗಣಿತ ಹಾಗೂ ಹಿಂದಿ ವಿಷಯ ಹೊರತು ಪಡಿಸಿದರೆ ಇತರೆ ವಿಷಯಗಳ ಶಿಕ್ಷಕರೆ ಇಲ್ಲ, ಪರಿಸ್ಥಿತಿ ಬಗ್ಗೆ ಅವಲೋಕಿಸಬೇಕಾದ ಮುಖ್ಯೋಪಾದ್ಯಾಯ ಹಾಗೂ ಬಿಇಒಗೆ ವಿದ್ಯಾರ್ಥಿಗಳು ಹಾಗೂ ಶಾಲೆಯ ಸುಧಾರಣೆಯ ಬಗ್ಗೆ ಆಸಕ್ತಿ ವಹಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಎಚ್ಚರಿಕೆ: ಶಾಲೆಗೆ ಹೆಚ್ಚುವರಿ ಶಿಕ್ಷಕರ ನೇಮಕಾತಿ ಸೇರಿದಂತೆ ವ್ಯವಸ್ಥೆಯನ್ನು ಅತೀ ಶೀಘ್ರ ಸುಧಾರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಶಾಲೆಯ ವಿದ್ಯಾರ್ಥಿಗಳ ಟಿಸಿಗಳು ಪಡೆದು ಬೇರೆ ಶಾಲೆಗಳಿಗೆ ಸೇರುಸುವುದಾಗಿ ಅವರು ತಿಳಿಸಿದರು. ಸಂಬಂಧಪಟ್ಟ ಸಚಿವರು, ಶಾಸಕರು ಹಾಗೂ ಡಿಡಿಪಿಐ ಶಾಲೆಗೆ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವ ಮೂಲಕ ವಿದ್ಯಾರ್ಥಿಗಳ ಉತ್ತಮ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿ ಕೂಡಿ ಎಂದು ಮನವಿ ಮಾಡಿದರು.
ಫೋಷಕರಾದ ಬಿಜೆಪಿ ರವಿ, ದೇವರಾಜ್, ಬಿ.ಕೆ.ಹಳ್ಳಿ ಅಶ್ಥತ್ಥಪ್ಪ, ನಾಗರಾಜ್, ರಾಮಚಂದ್ರ, ವೀರಭದ್ರಪ್ಪ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

