ತುಮಕೂರು

ಸಿಬ್ಬಂದಿ ಮೇಲಿನ ಅನಗತ್ಯ ತೊಂದರೆ ತಪ್ಪಿಸಿ

Published On :

ಕ.ಪ್ರ.ವಾರ್ತೆ ತುಮಕೂರು ಆ. 22
ಸಾರಿಗೆ ನೌಕರರಿಗೆ ಆಗುತ್ತಿರುವ ಅನಗತ್ಯ ತೊಂದರೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಫೆಡರೇಷನ್(ಸಿಐಟಿಯು) ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಘಟಕಗಳಲ್ಲಿ ಕಾನೂನು ಬದ್ಧ ನಡೆಗಳಿಲ್ಲದೆ ಸ್ವೇಚ್ಛಾಚಾರ ಹಾಗೂ ಕಿರುಕುಳ ಮತ್ತು ವಿಪರೀತ ಲಂಚಗುಳಿತನ ಇದ್ದು ಈ ನಿಟ್ಟಿನಲ್ಲಿ ನೌಕರರು ಸಂಕಷ್ಟದಲ್ಲಿ ಇದ್ದಾರೆ ಎಂದು ಪದಾಧಿಕಾರಿಗಳು  ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಮಸ್ಯೆ ಪರಿಹರಿಸಿ: ಇದಲ್ಲದೆ 2 ವರ್ಷ ಟ್ರೈನಿಂಗ್ ಮುಗಿಸಿರುವ ನೌಕರರಿಗೆ ಪ್ರೊಬೆಷನರಿ, 2 ವರ್ಷ ಪ್ರೊಬೆಷನರಿ ಮುಗಿಸಿದವರಿಗೆ  ಕಾಯಂತಿ ಆದೇಶ ನೀಡಬೇಕು. ವೈದ್ಯಕೀಯ ವೆಚ್ಚ ಮರು ಪಾವತಿಯಲ್ಲಿ ತೊಡರುಗಳನ್ನು ಸರಿಪಡಿಸಬೇಕು. ಕಿರುಕುಳ ವರ್ಗಾವಣೆ ನಿಲ್ಲಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಟರ್ಮಿನಲ್ ನಿರ್ಮಿಸಿ: ರಾತ್ರಿ ವಾಹನಗಳು ತಂಗುವ ಬಸ್ ನಿಲ್ದಾಣಗಳಲ್ಲಿ ಟರ್ಮಿನಲ್‌ಗಳನ್ನು ನಿರ್ಮಿಸಬೇಕು. ನಿಗಮದ ಸುತ್ತೋಲೆಯ ಪ್ರಕಾರ ರಜೆ ಮಂಜೂರು ಮಾಡಬೇಕು ಹಾಗೂ ಅನಗತ್ಯ ಕಿರುಕುಗಳನ್ನು ನಿಲ್ಲಿಸಬೇಕು. ಘಟಕ ಮಟ್ಟದಲ್ಲಿ ಪ್ರತಿ ತಿಂಗಳು ನೌಕರರ ಕುಂದು ಕೊರೆತೆಗಳನ್ನು ಆಲಿಸಲು ಕಾರ್ಮಿಕ ಸಂಘಗಳ ಮುಖಂಡರೊಂದಿಗೆ ಸಭೆ ನಡೆಸಬೇಕು ಇದೆ ಮೊದಲಾದ ಬೇಡಿಕೆಗಳನ್ನು ಮನವಿ ಪತ್ರದಲ್ಲಿ ಸಲ್ಲಿಸಲಾಯಿತು.
ನಿಯಂತ್ರಣಾಧಿಕಾರಿ ಭರವಸೆ: ಇದಕ್ಕೆ ಪ್ರತಿಕ್ರಿಯಿಸಿದ ನೂತನ ವಿಭಾಗೀಯ ನಿಯಂತ್ರಣಾಧಿಕಾರಿ ಶಿವಮೂರ್ತಿಯವರು ತಾವು ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ, ನೌಕರರು  ಶಿಸ್ತುಬದ್ದವಾಗಿ ಜನರಿಗೆ ಸೇವೆ ಒದಗಿಸಲು ಸಹಕರಿಸುವಂತೆ ಮನವಿ ಮಾಡಿದರು.
ನೇರವಾಗಿ ಭೇಟಿ ಮಾಡಬಹುದು: ಯಾವುದೇ ಲಂಚಗುಳಿತನಕ್ಕೆ, ಹಾಗೂ ಮಧ್ಯವರ್ತಿಗಳಿಗೆ ಅವಕಾಶವಿಲ್ಲದೆ ಕಾರ್ಮಿಕರು ತಮ್ಮ ಸಮಸ್ಯೆಗಳ ಸಂಬಂಧ  ನೇರವಾಗಿ ಭೇಟಿ ಮಾಡಬಹುದು ಎಂದು ನಿಯೋಗಕ್ಕೆ ಭರವಸೆ ನೀಡಿದರಲ್ಲದೆ ಲಂಚಗುಳಿತನನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಿಯೋಗದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಚ್.ಡಿ. ರೇವಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್, ಜಿಲ್ಲಾ ಗೌರವ ಅಧ್ಯಕ್ಷ, ಸೈಯದ್ ಮುಜೀಬ್, ಜಿಲ್ಲಾಧ್ಯಕ್ಷ ದೇವರಾಜು.ಎ.ಆರ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಯತೀಶ್, ಉಪಾಧ್ಯಕ್ಷ  ಶಮೀಉಲ್ಲಾ, ಕೆ.ಪಿ. ಚಂದ್ರಶೇಖರ್, ನಟರಾಜು, ಎಸ್.ಎಲ್. ಲೋಕೇಶ್, ಮತ್ತಿತರರು ಇದ್ದರು.

ಹಲ್ಲೆಗೆ ಸಂಘದ ಖಂಡನೆ...
ನಿಟ್ಟೂರು ಬಸ್ ನಿಲ್ದಾಣದ ಬಳಿ ನಿರ್ವಾಹಕ ಚಂದನ್.ಜಿ.ಎಸ್. ಅವರ ಮೇಲೆ ಹಲ್ಲೆ ನಡೆಸಿ ಅವರ ಇಟಿಎಂ ಮಿಷನ್‌ನ್ನು ಹೊಡೆದು ಹಾಕಿ ಜೀವ ಬೆದರಿಕೆ ಹಾಕಿರುವ ಘಟನೆಯನ್ನು ಕರ್ನಾಟಕ ರಾಜ್ಯ ರಸ್ತೆ  ಸಾರಿಗೆ ಸಂಸ್ಥೆಗಳ  ನೌಕರರ ಫೆಡರೆಷನ್ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಖಂಡಿಸಿದೆ. ಜನರಿಗೆ ಯಾವುದೇ ದೂರುಗಳು ಇದ್ದಲ್ಲಿ ಮೇಲಾಧಿಕಾರಿಗಳಿಗೆ ತಿಳಿಸಬೇಕೆ ವಿನಹ- ದೈಹಿಕ  ಹಲ್ಲೆ ನಡೆಸುವ ಕ್ರಮ ಖಂಡನಾರ್ಹ ಎಂದಿರುವ ಸಂಘ  ಇಂತಹ ಘಟನೆಗಳ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಡಿಪೋ ಮ್ಯಾನೇಜರ್ ಮತ್ತಿತರೆ ಅಧಿಕಾರಿಗಳು ಪೂರ್ಣ ವಾಸ್ತವತೆಯನ್ನು ಅರಿಯದೆ ನೌಕರರ ಮೇಲೆ ಮುಗಿಬೀಳುವ ಕ್ರಮವನ್ನು  ಸಂಘ ಖಂಡಿಸಿದೆ. ಈ ಘಟನೆಯಲ್ಲಿ ತೀವ್ರಗಾಯಕ್ಕೆ ಒಳಗಾಗಿರುವ ಚಂದನ್ ನೆರವಿಗೆ ಮುಂದಾಗಬೇಕೆಂದು ಸಂಘವು ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.