ಮದುವೆಗೆ ಬಂದವರು ಮಸಣಕ್ಕೆ
ಹುಳಿಯಾರು: ಖಾಸಗಿ ಬಸ್ ಹಾಗೂ ಮಾರುತಿ ಓಮಿನಿ ವ್ಯಾನ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಮೂವರು ಮೃತಪಟ್ಟು, ಮೂವರಿಗೆ ತೀವ್ರ ಗಾಯವಾಗಿರುವ ಘಟನೆ ಹೋಬಳಿಯ ಹೊಸಳ್ಳಿ ಕೈಮರದ ತಿರುವಿನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ವಿವರ: ಇಲ್ಲಿಗೆ ಸಮೀಪದ ಯಳನಡುವಿನ ಸಿದ್ದರಾಮೇಶ್ವರ ಸಮುದಾಯಭವನದಲ್ಲಿ ಮದುವೆ ಏರ್ಪಾಟಾಗಿತ್ತು.ಅರಕಲಗೂಡು ತಾಲೂಕಿನ ಗೇರುಕೊಪ್ಪೆ ಗ್ರಾಮದ ಗಂಡಿನ ಸಂಬಂಧಿಗಳು ಮದುವೆ ಸಮಾರಂಭದ ಊಟ ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ತೆರಳುವಾಗ ಹುಳಿಯಾರು ಬಳಿ ಅಪಘಾತ ಸಂಭವಿಸಿದೆ. ಮಾರುತಿ ಓಮಿನಿ ವ್ಯಾನ್ನಲ್ಲಿ ತೆರಳುತಿದ್ದ ಸಂಬಂಧಿಗಳು ತಿರುವಿನ ಬಳಿ ಚಹಾ ಸೇವಿಸಿ ಹೊರಡುವುದಕ್ಕೂ ಹಾಗೂ ಹುಳಿಯಾರು ಕಡೆಯಿಂದ ಹೊಸದುರ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಅತಿವೇಗದಿಂದ ಬಂದು ಡಿಕ್ಕಿ ಹೊಡೆಯಿತು. ಆ ರಭಸಕ್ಕೆ ವ್ಯಾನ್ ನುಜ್ಜುಗುಜ್ಜಾಗಿದೆ. ಸ್ಥಳದಲ್ಲೇ ವ್ಯಾನ್ನಲ್ಲಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆನ್ಮತ್ತಿ ಗ್ರಾಮದ ಸುಬ್ಬಣ್ಣ (45)ಎಂಬಾತ ಮೃತಪಟ್ಟರೆ, ತೀವ್ರಗಾಯಗಳಾಗಿದ್ದ ಇನ್ನಿಬ್ಬರಾದ ಹೆಗ್ಗುಂದದ ಚಂದ್ರಪ್ಪ (50) ಹಾಗೂ ಚಂದ್ರಯ್ಯನ ಮಗ ಮನು ಚಿ.ನಾ.ಹಳ್ಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಗೇರುಕೊಪ್ಪದ ಕಲ್ಲೇಶ್, ಚಂದ್ರಿಕಾ ಹಾಗೂ ಬೆಂಗಳೂರಿನ ಲಗ್ಗೆರೆಯ ಪರಮೇಶ್ ಅವರುಗಳಿಗೆ ತೀವ್ರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಚಿ.ನಾ.ಹಳ್ಳಿ, ತಿಪಟೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಮಧ್ಯೆ ಹುಳಿಯಾರು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿರುವುದರ ಬಗ್ಗೆ ಹಾಗೂ ಸ್ಥಳೀಯ ಶಾಸಕರು ಚಿ.ನಾ.ಹಳ್ಳಿಯಲ್ಲಿದ್ದರೂ ಕೂಡ ಮೃತ ಸಂಬಂಧಿಕರುಗಳಿಗೆ ಸಾಂತ್ವನ ಹೇಳಲು ಬಾರದಿರುವುದಕ್ಕೆ ಆಕ್ರೋಶ ವ್ಯಕ್ತವಾಯಿತು. ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

