ತುಮಕೂರು

ಪತ್ರಕರ್ತೆ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

Published On :

ತಿಪಟೂರು: ಮುಂಬೈನಲ್ಲಿ ನಡೆದ ಪತ್ರಕರ್ತೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಪೈ ಹೋಟೆಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಬಿವಿಪಿ ಮುಖಂಡ ನಗರ ಕಾರ್ಯದರ್ಶಿ ಎಂ.ಬಿ.ಮಂಜುನಾಥ್ ಮಾತನಾಡಿ ಹಿಂದೆ ನಡೆದ ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗದಿರುವುದು ಈ ರೀತಿಯ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಯಲು ಕಾರಣವಾಗಿದೆ. ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿರುವ ಮಹಾರಾಷ್ಟ್ರ ಪೊಲೀಸರ ಕಾರ್ಯ ಶ್ಲಾಘನೀಯವಾಗಿದ್ದು, ಈ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವುದರ ಮೂಲಕ ಸರಿಯಾದ ಎಚ್ಚರಿಕೆಯ ಸಂದೇಶ ರವಾನಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸ್ಫೂರ್ತಿಕ್ ಹಳೆಮನೆ, ಚೇತನ್, ನವೀನ್, ಪೂಜಾ, ದಿವ್ಯಾ ಮತ್ತಿತರರಿದ್ದರು.

ಬಸ್ ಡಿಕ್ಕಿ: ವೃದ್ಧೆ ಸ್ಥಳದಲ್ಲೆ ಸಾವು
ಹುಳಿಯಾರು:
ಖಾಸಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವೃದ್ಧೆ ಸಾವನಪ್ಪಿರುವ ಘಟನೆ  ಹೋಬಳಿಯ ಗಡಿಭಾಗದಲ್ಲಿನ ಯಳನಾಡು ಸಮೀಪದ ಗಡಿಕಲ್ಲುನ ಬಳಿ ಮಂಗಳವಾರ ನಡೆದಿದೆ.
ಕಳೆದೆರಡು ದಿನಗಳ ಹಿಂದಷ್ಟೆ ನಡೆದ ಬಸ್ ಅಪಘಾತದಿಂದ ಮೂರು ಮಂದಿ ಸ್ಥಳದಲ್ಲೆ ಮೃತರಾದ ಘಟನೆ ಇನ್ನು ಹಸಿಯಾಗಿರುವಾಗಲೇ ಅದೆ ರೀತಿಯ ಘಟನೆ ಮತ್ತೆ ಮರುಕಳಿಸಿದೆ. ಹುಳಿಯಾರಿಗೆ ಸಂಘದ ಕೆಲಸಕ್ಕಾಗಿ ಇನ್ನಿತರ ಮಹಿಳೆಯರೊಂದಿಗೆ  ತೆರಳಲು ಗಡಿಕಲ್ಲಿನ ಬಳಿ ಬಸ್ಸಿಗಾಗಿ ಕಾಯುತಿದ್ದ ವೃದ್ಧೆ ದೂರದಲ್ಲಿ ಬಸ್ ಕಾಣುತ್ತಿದ್ದ ಹಾಗೆಯೆ ಬಸ್ಸಿಗೆ ಕೈಯೊಡಿದ್ದಾಳೆ. ಅದರೆ ವೇಗವಾಗಿ ಬಂದ ಬಸ್ ಆಕೆಗೆ ಗುದ್ದಿಕೊಂಡು ನಿಲ್ಲಿಸದೆ ಚಲಿಸಿದೆ. ಕುಸಿದು ಬಿದ್ದ ವೃದ್ಧೆ ಸ್ಥಳದಲ್ಲೆ ಮೃತಪಟ್ಟಿದ್ದು ಆಕೆಯನ್ನು ಮೋಟಿಹಳ್ಳಿ ಹಟ್ಟಿಯ ಕರಿಯಮ್ಮ ಎಂದು ಗುರುತಿಸಲಾಗಿದೆ. ಅಪಘಾತ ಮಾಡಿದ ವಿಜಯ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸದೆ ಹುಳಿಯಾರು ಠಾಣೆಗೆ ಬಂದು ಶರಣಾಗಿದ್ದಾನೆ.  ಪ್ರಕರಣದ ಬಗ್ಗೆ ರೊಚಿಗೆದ್ದ ಜನತೆ ಬಸ್ಸಿನವರ ಅವಾಂತರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.