ನಾಳೆ ಇಂಗ್ಲಿಷ್ ಭಾಷಾ ಪುನಶ್ಚೇತನ ಕಾರ್ಯಾಗಾರ
ತುಮಕೂರು: ತುಮಕೂರು ತಾಲೂಕು ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಇಂಗ್ಲಿಷ್ ಭಾಷಾ ಬೋಧಕರಿಗಾಗಿ ಹೊಸ ಶಿಕ್ಷಣ ಕ್ರಮದ ಸಿಸಿಇ ಮೌಲ್ಯಮಾಪನ ಕುರಿತಂತೆ ತರಬೇತಿ ಕಾರ್ಯಾಗಾರವನ್ನು ಇದೇ ತಿಂಗಳ 30 ರಂದು ಬೆಳಗ್ಗೆ 10 ಗಂಟೆಗೆ ಸೀಬಿ ಯ ಲೋಕಾಂಬ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದೆ. ತಾಲೂಕಿನ ಎಲ್ಲ ಇಂಗ್ಲಿಷ್ ಭಾಷಾ ಶಿಕ್ಷಕರು ಹಾಜರಾಗುವಂತೆ ಸಂಘದ ಅಧ್ಯಕ್ಷ ನಂಜಪ್ಪ ಹಾಗೂ ಸಹ ಕಾರ್ಯದರ್ಶಿ ಆರ್.ಎಸ್. ಮನೋಹರ್ ತಿಳಿಸಿದ್ದಾರೆ. ಸಿಸಿಇ ಆಧಾರಿತ ಪುಸ್ತಕಗಳಿಗಾಗಿ ತುಮಕೂರು ರಾಮಸ್ವಾಮಿ, 9448443555, ಗುಬ್ಬಿ ಉಮೇಶ್, 9972141811, ತುರುವೇಕೆರೆ ಮಂಜಯ್ಯ, 9481932832, ಚಿ.ನಾ. ಹಳ್ಳಿಯ ಕುಮಾರಸ್ವಾಮಿ, 8277099191, ಕುಣಿಗಲ್ ಜಯರಾಂ, 9880019667, ತಿಪಟೂರು ಸುರೇಶ್, 9449774944 ಸಂಪರ್ಕಿಸುವಂತೆ ಕೋರಲಾಗಿದೆ.
ಕುಪ್ಪೂರು ಕೃಷ್ಣಮೂರ್ತಿಗೆ ಶ್ರದ್ಧಾಂಜಲಿ
ತುಮಕೂರು: ತುಮಕೂರಿನ ಹಿರಿಯ ರಂಗಕರ್ಮಿಗಳೂ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಹೊಯ್ಸಳ ಟೂಲ್ ರೂಮ್ನ ಮಾಲೀಕರೂ ಆದ ಕುಪ್ಪೂರು ಕೃಷ್ಣಮೂರ್ತಿಯವರ ಅಕಾಲಿಕ ನಿಧನಕ್ಕೆ ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘ ಶ್ರದ್ಧಾಂಜಲಿ ಸಲ್ಲಿಸಿದೆ. ಸಂಘದ ಪದಾಧಿಕಾರಿಗಳ ಸಭೆ ನಡೆದು ಸಭೆಯಲ್ಲಿ ದಿವಂಗತರ ಗುಣಗಾನ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ದಿವಂಗತರು ಎಚ್.ಎಂ.ಟಿ. ಗಡಿಯಾರ ಕಾರ್ಖಾನೆಯ ಲಲಿತಕಲಾ ಸಂಘದ ಸಕ್ರಿಯ ಪದಾಧಿಕಾರಿಗಳಾಗಿ ಹಲವು ವರ್ಷ ಸೇವೆ ಸಲ್ಲಿಸಿ ತುಮಕೂರಿನಲ್ಲಿ ರಂಗಭೂಮಿಯ ಕ್ರಿಯಾಶೀಲತೆಗೆ ದುಡಿದಿದ್ದರು.
ವಿವಿಧ ಸಂಘ ಸಂಸ್ಥೆಗಳಲ್ಲಿ ಮತ್ತು ಹಲವು ಕ್ಷೇತ್ರಗಳಲ್ಲಿ ವೈವಿಧ್ಯಮಯ ಸೇವೆ ಸಲ್ಲಿಸಿದ್ದರು. ಶ್ರೀಯುತರು ರಂಗನಿರ್ದೇಶಕರಾಗಿ, ನಟರಾಗಿ, ಕಲಾಪೋಷಕರಾಗಿ ಅಪೂರ್ವ ಸೇವೆ ಸಲ್ಲಿಸಿದ್ದರು.
ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾಗಿದ್ದ ಇವರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇವರ ನಿಧನದಿಂದ ವಿಪ್ರ ಸಮಾಜಕ್ಕೆ, ತುಮಕೂರಿನ ಸಾಂಸ್ಕೃತಿಕ ಲೋಕಕ್ಕೆ, ವಿಶೇಷವಾಗಿ ರಂಗಭೂಮಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ವಿ. ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ಎಸ್.ಎನ್. ರಾಮಚಂದ್ರಶಾಸ್ತ್ರಿ, ಕಾರ್ಯದರ್ಶಿ ಕೆ. ಹಿರಣ್ಣಯ್ಯ ಅವರು ಸಂತಾಪ ಸೂಚಿಸಿದರು.
ಇಂದು ರಾಜ್ಯಮಟ್ಟದ ಕಾರ್ಯಾಗಾರ
ತುಮಕೂರು: ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ. 29 ರಂದು ಸಂಶೋಧನಾ ವಿಧಾನ ಮತ್ತು ತಂತ್ರಗಳು ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಧ್ಯಾಪಕರು ಪಾಲ್ಗೊಳ್ಳಬಹುದಾಗಿದೆ. ಭಾಗವಹಿಸುವ ಅಧ್ಯಾಪಕರಿಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ಅನ್ಯಕಾರ್ಯನಿಮಿತ್ತ ರಜಾ ಸೌಲಭ್ಯವಿದೆ. ಆಸಕ್ತರು ನೋಂದಣಿ ಶುಲ್ಕ 200 ರು. ನೀಡಿ ನೋಂದಾಯಿಸಿಕೊಳ್ಳುವಂತೆ ಕಾಲೇಜಿನ ಪ್ರಿನ್ಪಿಪಾಲ್ ಡಾ. ಜಯದೇವಪ್ಪ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880236222, ಅಥವಾ ಸಂಚಾಲಕ ಡಾ. ನಾಗೇಂದ್ರಪ್ಪ , 9449670789 ಸಂಪರ್ಕಿಸುವಂತೆ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

