ಪ್ರಸ್ತುತ ಜಗತ್ತು ತುಂಬಾ ಸ್ಪರ್ಧಾತ್ಮಕ
ಕ.ಪ್ರ.ವಾರ್ತೆತುಮಕೂರುಆ.28
ಪ್ರಸ್ತುತ ಜಗತ್ತು ತುಂಬಾ ಸ್ಪರ್ಧಾತ್ಮಕವಾಗಿದೆ. ಎಷ್ಟೇ ಪದವಿಗಳನ್ನು ಪಡೆದರು ಉದ್ಯೋಗ ಪಡೆಯುವಲ್ಲಿ ಉದ್ಯೋಗಿಗಳು ವಿಫಲರಾಗುತ್ತಿದ್ದಾರೆ ಎಂದು ಸೂಫ್ಹಾ ವಿದ್ಯಾ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಡಾ. ಇಂತಿಯಾಜ್ ಅಹಮದ್ ತಿಳಿಸಿದರು.
ಗೂಳೂರಿನ ಸೂಫ್ಹಾ ವಿದ್ಯಾಸಂಸ್ಥೆಯಲ್ಲಿ ಆನ್ ಟ್ರ್ಯಾಕ್ ಎಚ್.ಆರ್. ಟ್ರೈನಿಂಗ್ ಸೆಂಟರ್ ವತಿಯಿಂದ ಆಧುನಿಕ ಜಗತ್ತಿನಲ್ಲಿ ಮಾನವ ಸಂಪನ್ಮೂಲ ತರಬೇತಿ ಅಗತ್ಯತೆ ಹಾಗೂ ವಿದ್ಯಾ ಸಂಸ್ಥೆಗಳ ಪಾತ್ರ ಎಂಬ ಒಂದು ದಿನದ ವಿಚಾರ ಸಂಕಿರಣ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಜಗತ್ತು ತುಂಬಾ ಸ್ಪರ್ಧಾತ್ಮಕವಾಗಿದೆ, ಎಷ್ಟೇ ಪದವಿಗಳನ್ನು ಪಡೆದರು ಉದ್ಯೋಗ ಪಡೆಯುವಲ್ಲಿ ಉದ್ಯೋಗಿಗಳು ವಿಫಲರಾಗುತ್ತಿದ್ದಾರೆ.
ಕೇವಲ ಅಂಕಪಟ್ಟಿಗೆ ಸೀಮಿತವಾಗಿ ರ್ಯಾಂಕ್ ಪಡೆದಿದ್ದೇವೆ ಎಂದು ಉದ್ಯೋಗ ಪಡೆಯುವ ಭರವಸೆಯನ್ನಿಟ್ಟುಕೊಂಡು ದೊಡ್ಡ- ದೊಡ್ಡ ನಗರಗಳಿಗೆ ಹೋಗುತ್ತಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ನಾಲ್ಕೈದು ವರ್ಷವಾದರು ಉದ್ಯೋಗವನ್ನು ಹುಡುಕುತ್ತಲೇ ಇರುತ್ತಾರೆ.
ಇಂತಹ ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿ, ರ್ಯಾಂಕ್ಗೆ ಓದಿರುತ್ತಾರೆ, ಆದರೆ ವಿಶಿಷ್ಟವಾದ ಜ್ಞಾನವನ್ನು ಹೊಂದಿರುವುದಿಲ್ಲ, ಯಾವುದೇ ಕಂಪನಿಗಳಿಗೆ ಉದ್ಯೋಗಿಗಳು ಬೇಕಾಗಿದ್ದಲ್ಲಿ ಕಂಪನಿಯವರು ನಾವು ಯಾವ ಉದ್ಯೋಗಿಗಳನ್ನು ತೆಗೆದುಕೊಂಡಾಗ ನಮ್ಮ ಕಂಪನಿಗೆ ಲಾಭ ತರುವಲ್ಲಿ ಸೂಕ್ತ ಎಂದು ತೀರ್ಮಾನಿಸಿ ಅರ್ಹತೆ ಉಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದರು.
ತರಬೇತಿ ಅಗತ್ಯ: ಇಂದಿನ ವಿದ್ಯಾರ್ಥಿಗಳು ವಿಶಿಷ್ಟವಾದ ಜ್ಞಾನವನ್ನು ಹೊಂದಿದಾಗ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಸರಾಗವಾಗಿ ಉದ್ಯೋಗವನ್ನು ಪಡೆಯಬಹುದು, ಇಲ್ಲವಾದಲ್ಲಿ ಉದ್ಯೋಗ ಪಡೆಯುವಲ್ಲಿ ಕಷ್ಟದಾಯಕವಾಗಿರುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ತರಬೇತಿ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಇಂದಿನ ವೃತ್ತಿಪರ ಕೋರ್ಸ್ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೇಕಾದಂತಹ ಕೌಶಲ್ಯಗಳ ತರಬೇತಿಯನ್ನು ಆನ್ ಟ್ರ್ಯಾಕ್ ಎಚ್.ಆರ್. ಟ್ರೈನಿಂಗ್ ಸೆಂಟರ್ ಸಂಸ್ಥೆಯ ಎಂ ಕಿರಣ್, ಯೋಗೀಶ್, ವಿವೇಕಾನಂದ ಅವರು ಸೂಫ್ಹಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಶಬ್ಬೀರ್ ಅಹಮದ್, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಧನಂಜಯ್ಯ, ಉಪನ್ಯಾಸಕ ವರ್ಗದವರು ಭಾಗವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

