ತುಮಕೂರು

ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ

Published On :

ಕ.ಪ್ರ.ವಾರ್ತೆ ಮಧುಗಿರಿ ಆ. 29
ಇಂದಿನ ಆಧುನಿಕ ತಂತ್ರಜ್ಞಾನದಲ್ಲಿಯೂ ಹಬ್ಬ ಹರಿದಿನಗಳು, ಒಗಟುಗಳು ಜನಪದವನ್ನು ಜೀವಂತಗೊಳಿಸಿವೆ ಎಂದು ಲಾಲ್‌ಬಹುದ್ದೂರ್ ಡಿಇಡಿ ಕಾಲೇಜು ಪ್ರಾಂಶುಪಾಲ ಪಿ.ವಿ.ಹನುಮಂತರಾಯಪ್ಪ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸಿದ್ಧಾರ್ಥ ಗ್ರಾಮೀಣ ಯುವ ಅಭಿವೃದ್ಧಿ ಕೇಂದ್ರ ಮಧುಗಿರಿ ಸಂಯುಕ್ತಾಶ್ರಯದಲ್ಲಿ ತಾಲೂಕಿನ ವಡೇರಹಳ್ಳಿಯಲ್ಲಿ ಏರ್ಪಡಿಸಿದ್ದ ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಪ್ರದಾಯ ಹಬ್ಬ ಹರಿದಿನಗಳು, ಒಗಟುಗಳು ಬದುಕಿನ ನಿಗೂಢತೆಯನ್ನು ಶೋಧಿಸುವ ಕ್ರಮ, ಜಾನಪದ ಪ್ರಕಾರಗಳಾದ ಲಾಲಿ ಹಾಡುಗಳು, ಸೋಬಾನೆ, ಕಂಸಾಳೆ, ವಿನೋದದ ಹಾಡು, ಉತ್ತರ ಕನ್ನಡದ ಜನಪದ ಹಾಡು ಇವುಗಳನ್ನು ಹಾಡಿ  ವಿವಿಧ ರೀತಿಯ ಜಾನಪದ ಸೊಬಗಿನ ಬಗ್ಗೆ ವಿವರಿಸಿದರು.
ಮುಖ್ಯ ಶಿಕ್ಷಕ ದಯಾನಂದ್ ವೈಜ್ಞಾನಿಕ ತಾಂತ್ರಿಕ ಬೆಳವಣಿಗೆಯಿಂದಾಗಿ ಜಾನಪದ ಕಲೆಗಳು ಅಪರೂಪವಾಗುತ್ತಿವೆ. ಹಾಗಾಗಿ ಇಂತಹ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದರು.
 ಶಿಕ್ಷಕ ಸಿದ್ದಪ್ಪ ಜಾನಪದ ಕಲೆ ಜೀವಂತಗೊಳಿಸಲು ತರಬೇತಿ ಸಂಸ್ಥೆಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸಬೇಕು ಎಂದರು.
ರೂಪ ವಿದ್ಯಾಸಂಸ್ಥೆ ಕಾರ್ಯದರ್ಶಿ ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಶಿವಕುಮಾರ್, ಸುಬ್ರಹ್ಮಣ್ಯಚಾರ್ ಉಪತ್ಥಿತರಿದ್ದರು. ಲೋಕೇಶ್ ಸ್ವಾಗತಿಸಿ ಗಿರಿರಾಜ್ ವಂದಿಸಿದರು. ನಂತರ ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅವರಿಂದ ಗಡಿನಾಡಿನಲ್ಲಿ ಸಾಂಸ್ಕೃತಿಕ ವೈಶಿಷ್ಟ್ಯಗಳ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಜಾನಪದ ಕಲಾ ಪ್ರದರ್ಶನಗಳು ಜರುಗಿದವು.

ನಾಳೆ ಊರುಕೆರೆಯಲ್ಲಿ ರೈತರ ಸಭೆ
ತುಮಕೂರು:
ತುಮಕೂರು - ರಾಯದುರ್ಗ - ದಾವಣಗೆರೆ ರೈಲ್ವೆ ಯೋಜನೆ ಜಮೀನುಗಳ ರೈತರ ಹೋರಾಟ ಸಮಿತಿ ವತಿಯಿಂದ ಆ.31 ರಂದು ಬೆಳಗ್ಗೆ 10 ಗಂಟೆಗೆ ಊರುಕೆರೆಯ  ಬೋವಿ ಪಾಳ್ಯ ರಸ್ತೆಯ ಶಿವಶಕ್ತಿ ಲೇ ಔಟಲ್ಲಿ ಸಭೆ ಕರೆಯಲಾಗಿದೆ. ಈ ರೈಲು ಮಾರ್ಗ ಹಾದು ಹೋಗುತ್ತಿರುವ ಜಮೀನುಗಳ ಅಕ್ಕ- ಪಕ್ಕದ ರೈತರು ರೇಲ್ವೆ ಪರಿಹಾರದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹೋರಾಟ ಸಮಿತಿ ಆಯ್ಕೆ ಮಾಡಲಾಗುವುದು. ಆದ್ದರಿಂದ ಎಲ್ಲ ರೈತರು ಸಭೆಯಲ್ಲಿ ತಪ್ಪದೇ ಭಾಗವಹಿಸುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.