ಸಾವಯವ ಕೃಷಿ ಪದ್ಧತಿ ಬಗ್ಗೆ ಒಲವು ತೋರಿ: ಶಿವಪ್ಪ
ಕುಣಿಗಲ್: ರೈತರು ಮುಂದಿನ ಭವಿಷ್ಯ ನೋಡದೆ ಮನಬಂದಂತೆ ರಾಸಯನಿಕವನ್ನು ಕೃಷಿಪ್ರದೇಶದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ರೀತಿ ಬಳಸುತ್ತಾ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದಾರೆ. ಆದಕಾರಣ ರೈತರು ಸಾವಯವ ಕೃಷಿ ಪದ್ಧತಿಯ ಬಗ್ಗೆ ಒಲವು ತೋರುವಂತೆ ಹುಲಿಯೂರುದುರ್ಗ ಐಡಿಎಫ್ ದತ್ತಿಮಂಡಳಿ ಸದಸ್ಯ ಎಚ್.ಇ.ಶಿವಪ್ಪ ಮನವಿ ಮಾಡಿದರು
ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಬಂಡಿತಿಮ್ಮನ ಪಾಳ್ಯದಲ್ಲಿ ಐಡಿಎಫ್ ಸುಜೀವನ ಒಕ್ಕೂಟ ಹಮ್ಮಿಕೊಂಡಿದ್ದ, ಸುಜೀವನ ಸಾವಯವ ಸಂವಾದದಲ್ಲಿ ರೇಷ್ಮೆಬೆಳೆಯಲ್ಲಿ ಸಾವಯವ ಕೃಷಿ ಪದ್ಧತಿಯ ಬಗ್ಗೆ ವಿವರಿಸಿ ಮಾತನಾಡಿದರು. ಸಾವಯವ ಪದ್ಧತಿಯಲ್ಲೆ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲೆ ಸಿಗುವ ವಸ್ತುಗಳಿಂದ ಉತ್ತಮ ಗೊಬ್ಬರ ಹಾಗೂ ಕೀಟನಾಶಕಗಳನ್ನು ತಯಾರಿಸಿ ಸ್ವಚ್ಛ, ಪರಿಸರಸ್ನೇಹಿ, ಆರೋಗ್ಯ ಸ್ನೇಹಿ
ಉತ್ಪನ್ನಗಳನ್ನು ಬೆಳೆಯುವುದರ ಜೊತೆಯಲ್ಲಿ ಭೂಮಿಯ ಫಲವತ್ತತೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಅವರೂ ಆರೋಗ್ಯವಂತರಾಗಿರುವ ನಿಟ್ಟಲ್ಲಿ ರಾಸಾಯನಿಕ ಮುಕ್ತ ಪರಿಸರದ ಕೊಡುಗೆ ನೀಡಬಹುದೆಂದರು.
ರೇಷ್ಮೆ ಇಲಾಖಾಧಿಕಾರಿ ಅಣ್ಣಪ್ಪ ಸನ್ನಿದಿ ರೇಷ್ಮೆ ಬೆಳೆಯಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಂಡಲ್ಲಿ ಸಾಕಷ್ಟು ಸವಲತ್ತುಗಳು ದೊರಕಲಿದ್ದು, ರೈತರು ಅವುಗಳನ್ನು ಅಳವಡಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಬಹುದೆಂದರಲ್ಲದೆ ದೊರಕುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಯೋಜಕ ಶಿವಶಂಕರ್, ಸಾವಯವ ರೈತ, ಸುರೇಂದ್ರ ರಾಮನಗರ, ಕೂಟದ ಅಧ್ಯಕ್ಷರಾದ ಶಿವರಾಜು, ಬಸ್ತಯ್ಯ ಮಂಡಲ ಅಧಿಕಾರಿ, ಸಮೂಹ ಅಧಿಕಾರಿಗಳಾದ ಲಿಂಗರಾಜು, ಶಿವಪ್ರಕಾಶ್, ಪಂಕಜ, ಉಮೇಶ್ ಮತ್ತು ಸ್ಥಳಿಯ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

