ತುಮಕೂರು

ಇಂದು ವಿದ್ಯುತ್ ವ್ಯತ್ಯಯ

Published On :

ತುರುವೇಕೆರೆ: ವಿದ್ಯುತ್ ಪರಿವರ್ತಕಗಳ ತುರ್ತು ನಿರ್ವಹಣೆ ಇರುವುದರಿಂದ ಡಿಸೆಂಬರ್ 5 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ತುರುವೇಕೆರೆ, ಮಾಯಸಂದ್ರ, ತಾಳಕೆರೆ, ತಂಡಗ ಹಾಗೂ ಕಡೇಹಳ್ಳಿಯ ಉಪಸ್ಥಾವರಗಳಿಗೆ ವಿದ್ಯುತ್ ಸಂಪರ್ಕವಿರುವುದಿಲ್ಲ. ವಿದ್ಯುತ್ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರವಿ ಪತ್ತಿನ ಸಹಕಾರಿಗೆ ಪ್ರಶಸ್ತಿ
ತಿಪಟೂರು: ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ವತಿಯಿಂದ ಕೋಲಾರದಲ್ಲಿ ನಡೆದ 60ನೇ ಅಖಿಲ ಭಾರತ ಸಹಕಾರ ಸಪ್ತಾಹ 2013ರ ಅಂಗವಾಗಿ ತೆರಿಗೆ ಮತ್ತು ಕಾಯ್ದೆಗಳ ದಿನಾಚರಣೆ ಸಂದರ್ಭದಲ್ಲಿ ತಿಪಟೂರಿನ ಉದಯರವಿ ಸೌಹಾರ್ದ ಪತ್ತಿನ ನಿಯಮಿತವು ಜಿಲ್ಲೆಗೆ ಉತ್ತಮ ಸೌಹಾರ್ದ ಸಹಕಾರಿ ಸಂಸ್ಥೇ ಎಂದು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
7 ರಿಂದ ದತ್ತ
ಮಾಲಾಧಾರಣೆ
ತುರುವೇಕೆರೆ: ತಾಲೂಕು ವಿಶ್ವಹಿಂದೂ ಪರಿಷತ್  ಹಾಗೂ ಭಜರಂಗದಳದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಮಾಲಾ ಅಭಿಯಾನ ಹಾಗೂ ಶ್ರೀ ದತ್ತ ಜಯಂತಿ ಮಹೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ. ದತ್ತ ಮಾಲಾ ಧಾರಣೆಯನ್ನು ಡಿ. 7 ರ ಶನಿವಾರ ಪಟ್ಟಣದ ದಬ್ಬೇಘಟ್ಟ ರಸ್ತೆಯ ತಾಲೂಕು ಪಂಚಾಯ್ತಿ ಕಚೇರಿಯ ಪಕ್ಕ ಇರುವ ಶ್ರೀ ರಾಮ ಮಂದಿರದಲ್ಲಿ ಸಾಯಂಕಾಲ 7 ಗಂಟೆಗೆ ಪ್ರಾರಂಭಿಸಲಾಗುವುದು. ದತ್ತ ಮಾಲಾಧಾರಣೆ ಹಾಗೂ ಇನ್ನಿತರೆ  ವಿವರಗಳಿಗೆ ವಿಶ್ವಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ನವೀನ್ ಬಾಬು ರವರನ್ನು ದೂರವಾಣಿ ಸಂಖ್ಯೆ  94809 22757 ಗೆ ಸಂಪರ್ಕಿಸಲು ಕೋರಲಾಗಿದೆ.
ದಿಂಡಿ ಉತ್ಸವ
ಚಿಕ್ಕನಾಯಕನಹಳಿ: ಭಾವಸಾರ ಕ್ಷತ್ರಿಯ ಸಮಾಜದಿಂದ ಶ್ರೀಪಾಂಡುರಂಗಸ್ವಾಮಿ ರುಖುಮಾಯಿ ದೇವರ ತೃತೀಯ ದಿಂಡಿ ಮಹೋತ್ಸ ಹಾಗೂ ತುಮಕೂರು ಜಿಲ್ಲಾ ಭಾವಸಾರ ಕ್ಷತ್ರಿಯ ಸೇವಾ ಸಮಾಜದ ಜಿಲ್ಲಾ ಮಟ್ಟದ ದ್ವಿತೀಯ ಸಭೆಯನ್ನು ಏರ್ಪಡಿಸಲಾಗಿದೆ ಎಂದು  ಭಾವಸಾರ ಕ್ಷತ್ರಿಯ ಸಮಾಜ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.