ತುಮಕೂರು

ಕನಕ ಜಯಂತಿ, ಮುತ್ತುಸ್ವಾಮಿ ದೀಕ್ಷಿತರ ಮಹೋತ್ಸವ

Published On :

ತುಮಕೂರು: ಇಲ್ಲಿನ ಶೃಂಗೇರಿ ಶಂಕರಮಠದಲ್ಲಿ ಅನುಗ್ರಹ ಸಂಗೀತ ಮಹಾವಿದ್ಯಾಲಯದಿಂದ ಕನಕದಾಸರ ಜಯಂತಿ ಮತ್ತು ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ ನೆರವೇರಿತು.
ಸಂಗೀತ ವಿದ್ಯಾಲಯದ ಪುಟಾಣಿ ಮಕ್ಕಳು ಶ್ರೀ ದೀಕ್ಷಿತರ ನೊಟ್ಟು ಸ್ವರಗಳನ್ನು ಶಂಕರಾಭರಣ ರಾಗದಲ್ಲಿ ವಿವಿಧ ತಾಳಗಳಲ್ಲಿ ಸುಮಧುರವಾಗಿ ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಕನಕದಾಸರ ಕೀರ್ತನೆ ಈಶ ನಿನ್ನ ಚರಣ ಭಜನೆ ಮತ್ತು ಶ್ರೀ ದೀಕ್ಷಿತರ ಶ್ರೀ ಪಾರ್ವತಿಪತಿಂ, ಗುರುಗುಹ ತಾರಯಾಂಶು ಮಾಂ ಮತ್ತು ನವಾವರಣ ಕೃತಿಯು ಸಂಧ್ಯಾ ಎಸ್. ದಿವೇಕರ್, ಪ್ರಭಾ ವೇಣುಗೋಪಾಲ್, ಕುಸುಮ ಕರುಣಾಕರ್, ಮೀನಾಕಾಂತ್, ಶಾಂತಲಾ ಮತ್ತು ವೃಂದದವರಿಂದ ಅಮೋಘವಾಗಿ ಮೂಡಿ ಬಂತು.
ಭಾಗ್ಯಶ್ರೀ ಮತ್ತು ವೈಷ್ಣವಿ ನಡೆಸಿಕೊಟ್ಟಂತಹ ಹಿಂದೋಳ ರಾಗದಲ್ಲಿ ಸರಸ್ವತಿ ವಿಧಿಯುವತಿ ಮತ್ತು ಮೋಹನ ರಾಗದಲ್ಲಿ ಗೋಪಿಕಾ ಮನೋಹರಂ ದ್ವಂದ್ವ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀ ದೀಕ್ಷಿತರ ಆಧ್ಯಾತ್ಮ ದರ್ಶನ ಕಾರ್ಯಕ್ರಮದಲ್ಲಿ ದೀಕ್ಷಿತರ ಜೀವನ ಕ್ರಮ, ಅವರ ಜ್ಞಾನ ಮತ್ತು ಅವರು ರಚಿಸಿರುವ ಕೃತಿಗಳಾದ ನವಾವರಣ, ನವಗ್ರಹ, ನೀಲೋತ್ಪನ್ನ ಕೃತಿಗಳು ಹಾಗೂ ಚಕ್ರ ಉಪಾಸನೆಯ ಬಗ್ಗೆ ವೆಂಕಟನಾರಾಯಣ್ ಅದ್ಭುತವಾಗಿ ನಿರೂಪಿಸಿದರು.
ಕೆ.ವಿ. ಕೃಷ್ಣಪ್ರಸಾದ್ ಗಾಯನದಲ್ಲಿ, ಪ್ರಶಾಂತ್ ಮೃದಂಗನಲ್ಲಿ ಹಾಗೂ ಅನಿರುದ್ಧ ವಯೋಲಿನ್‌ನಲ್ಲಿ ಸಹಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.