ಧಾರ್ಮಿಕ ಶ್ರದ್ಧೆ ಮೇಲೆ ಆಘಾತ ಮಾಡಬೇಡಿ
ಕುಣಿಗಲ್: ಮೂಢನಂಬಿಕೆ ಪ್ರತಿಬಂಧಕ ಕಾನೂನು ಜಾರಿಗೆ ತರುವ ಮೂಲಕ ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲೆ ಆಘಾತ ಮಾಡದಿರುವಂತೆ ಆಗ್ರಹಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿದ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು, ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹಿಂದೂ ಜನಜಾಗೃತಿ ಸಮನ್ವಯಕ ಚಂದ್ರು ಮೊಗರೆ, ನೇತೃತ್ವದಲ್ಲಿ ಗ್ರಾಮದೇವತೆ ವೃತ್ತದಲ್ಲಿ ಸಂಘಟಿತರಾದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಮರೆವಣಿಗೆಯಲ್ಲಿ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಘೋಷಣೆಗಳನ್ನು ಕೂಗಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಚಂದ್ರ ಮೊಗೆರ, ಹಿಂದೂ ಧರ್ಮವು ಶ್ರದ್ಧೆ, ನಂಬಿಕೆಗಳ ಮೇಲೆ ಆಧಾರವಾಗಿ ನಿಂತಿದೆ. ಕೇವಲ ಹಿಂದೂ ಧರ್ಮಿಯರ ಭಾವನೆಗಳ್ನು ಕೆಣುಕುವ ಪ್ರಯತ್ನಕ್ಕೆ ಕೈಹಾಕಿರುವ ರಾಜ್ಯ ಸರ್ಕಾರ ತೊಘಲಕ್ ಆಡಳಿತ ನಡೆಸುತ್ತಿದೆ. ಮೂಢನಂಬಿಕೆ ಪ್ರತಿಬಂಧಕ ಕಾನೂನಿನ ರೂಪು ರೇಷೆಗಳನ್ನು ಅಛವಲೋಕಿಸಿದರೆ, ಹಿಂದು ಧರ್ಮೀಯರ ನಂಬಿಕೆ, ಭಾವನೆಗಳಿಗೆ, ಅನೇಕ ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯಗಳಿಗೆ ಚ್ಯುತಿ ತರುವ ಕಾನೂನಾಗಿದೆ. ಮಸೂದೆ ರಚನಾ ಸಮಿತಿಯಲ್ಲಿ ಹಿಂದೂ ಧಾರ್ಮಿಕ ಮುಖಂಡರಿಗೂ ಅವಕಾಶ ನೀಡಬೇಕೆಂದು ಆಗ್ರಹಿಸಿದರು,
ಪದಾಧಿಕಾರಿಗಳಾದ ಶೀಲಾ ನಾರಾಯಣ, ಚೇತನ, ಶಾರದ, ಉಮಾ, ಚಂದ್ರಕಲಾ, ಸಂಗೀತಾ, ವೆಂಕಟೇಶ್, ಸುರೇಶ್ ಇತರರು ಭಾಗವಹಿಸಿದ್ದರು. ನಂತರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಅರ್ಪಿಸಲಾಯಿತು.
ಕ್ರೀಡಾಕೂಟದಿಂದ ಶ್ರದ್ಧಾಂಜಲಿ
ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ 7 ಜಿಲ್ಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಿಧನರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮತ್ತು ತುಮಕೂರು ಜಿಲ್ಲೆಗಳ ಗೃಹ ರಕ್ಷಕರು ಹಾಗೂ ಅಧಿಕಾರಿಗಳು ಸೇರಿ ಒಡೆಯರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಗೃಹರಕ್ಷಕದಳದ ಕಮಾಂಡೆಂಟ್ ರವಿಕುಮಾರ್ ಮಾತನಾಡಿ ರಾಜ್ಯದ ಅಭಿವೃದ್ಧಿಯಲ್ಲಿ ರಾಜಮನೆತನದ ಕೊಡುಗೆಯನ್ನು ಸ್ಮರಿಸಿದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನಪರ ಕಾಳಜಿ, ಜಾತ್ಯತೀತ ನಿಲುವುಗಳನ್ನು ಇದೇ ಸಂದರ್ಭದಲ್ಲಿ ರವಿಕುಮಾರ್ ಸ್ಮರಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

