ಶ್ರೀಪಾಂಡುರಂಗ ಸ್ವಾಮಿರುಕುಮಾಯಿ ದಿಂಡಿ ಉತ್ಸವ
ಚಿಕ್ಕನಾಯಕನಹಳ್ಳಿ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಯುವಕರ ಮಂಡಳಿ ಮತ್ತು ರುಕ್ಮಿಣಿ ಮಹಿಳಾ ಸಮಾಜದಿಂದ ಶ್ರೀಪಾಂಡುರಂಗಸ್ವಾಮಿ ಮತ್ತು ರುಕುಮಾಯಿ ದೇವರ ತೃತೀಯ ದಿಂಡಿ ಉತ್ಸವವನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆ ಪ್ರಮುಖ ಬೀದಿಗಳಲ್ಲಿ ನಡೆದ ಉತ್ಸವದಲ್ಲಿ ಸಮಾಜದ ನೂರಾರು ಮಂದಿ ಭಾಗವಹಿಸಿ ಭಜನೆ ಮತ್ತು ಭಕ್ತಿಗೀತೆಗಳೊಂದಿಗೆ ಉತ್ಸವದಲ್ಲಿ ಪಾಲ್ಗೊಂಡರು. ನಂತರ ಧಾರ್ಮಿಕ ಸಭೆ ಹಾಗೂ ಜಿಲ್ಲಾ ಮಟ್ಟದ ತೃತೀಯ ಸಭೆಯನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಮಾಜದ ಗುರುಗಳಾದ ತುಕಾರಾಮ್ ಅವರು ಮಾರ್ಗದರ್ಶನ ನೀಡಿದರು.
ಇಂದು ಕನ್ನಡ ಪುನಶ್ಚೇತನ ಕಾರ್ಯಾಗಾರ
ಚಿಕ್ಕನಾಯಕನಹಳ್ಳಿ: ಡಿ 12 ರಂದು ತಾಲೂಕಿನ ಶೆಟ್ಟೀಕೆರೆ ಹೋಬಿ ಗೋಡೇಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಪ್ರೌಢಶಾಲಾ ಶಿಕ್ಷಕರಿಗಾಗಿ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾದ ಸುಚಿತ್ರ ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹೊನ್ನೇನಹಳ್ಳಿ ನೆಲಮಂಗಲ ತಾಲೂಕು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಾ.ಚಿ. ನಾಗೇಶ್, ಸಂಘದ ಅಧ್ಯಕ್ಷರಾದ ಗೋವಿಂದರಾಜು (ಜ್ಞಾನನಿಧಿ) ಅವರು ತಿಳಿಸಿದ್ದಾರೆ.
ತಹಸೀಲ್ದಾರ್ ಭೇಟಿ, ಪರಿಶೀಲನೆ
ಪಾವಗಡ: ಜೀತದಾಳುಗಳಿದ್ದಾರೆಂಬ ಆರೋಪ ಹಿನ್ನಲೆಯಲ್ಲಿ ಮಂಗಳವಾರ ತಹಸೀಲ್ದಾರ್ ಎಂ. ಮಹಮ್ಮದ್ ಅಲ್ತಾಪ್ ಪಾಷ ಹಾಗೂ ತಾಪಂ ಇಒ ರಂಗನಾಥ್ ತಾಲೂಕಿನ ಚಿನ್ನಮ್ಮನಹಳ್ಳಿಗೆ ಭೇಟಿ ನೀಡಿ ಅಧಿಕಾರಿ ಭೋಜರಾಜ್ ಎಂಬುವರ ಜಮೀನು ಮತ್ತು ಮನೆಯನ್ನು ಪರಿಶೀಲಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಹಸೀಲ್ದಾರ್ ಎಂ.ಎಂ.ಪಾಷ ಇತ್ತೀಚಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಚಿನ್ನಮ್ಮನಹಳ್ಳಿಯ ಭೋಜರಾಜ್ ಎಂಬುವವರು ತಮ್ಮ ಜಮೀನಿನಲ್ಲಿ ಕಳೆದ 4 ವರ್ಷಗಳಿಂದ ಎಸ್ಸಿ ವರ್ಗಕ್ಕೆ ಸೇರಿದ 4 ಮಂದಿ ಬಡವರು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜೀತ ವಿಮುಕ್ತಿ ಸಂಘಟನೆಯ ಕೆಲ ಪದಾಧಿಕಾರಿಗಳು ಆರೋಪಿಸಿದ್ದರು. ಈ ಮೇರೆಗೆ ತಾವು ಸೇರಿದಂತೆ ಸಂಬಂಧಪಟ್ಟ ತಾಪಂ ಇಒ ತಿಪ್ಪೇಸ್ವಾಮಿ ಚಿನ್ನಮ್ಮನಹಳ್ಳಿಗೆ ತೆರಳಿ ಪರಿಶೀಲನೆ ನಡೆಸಿದೆವು. ಭೋಜರಾಜ್ ಎಂಬುವರ ಜಮೀನಿನಲ್ಲಿ ಯಾರೂ ಜೀತದಾಳುಗಳಾಗಿ ಕೆಲಸ ಮಾಡುತ್ತಿಲ್ಲ. ಕೂಲಿಕಾರರಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದಾಗಿ ನಿತ್ಯ ಕೂಲಿ ಕೆಲಸದ ದಾಖಲೆ ಸಮೇತ ಕೂಲಿಕಾರರು ಸ್ವಷ್ಟಪಡಿಸಿದರು ಎಂದರು. ಎಲ್ಲ ಅಂಶಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಹಸೀಲ್ದಾರ್ ಎಂ.ಎಂ.ಪಾಷ ಅವರು ತಿಳಿಸಿದರು.
ಶಿರಡಿ ಸಾಯಿಬಾಬಾಗೆ ಹೂವಿನ ಅಲಂಕಾರ
ತಿಪಟೂರು: ಪಟ್ಟಣದ ಕೆ.ಆರ್.ಬಡಾವಣೆಯಲ್ಲಿರುವ ಶಿರಡಿ ಸಾಯಿಬಾಬಾರವರ 58ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಶಿರಡಿ ಸಾಯಿಬಾಬಾರವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

